More

    ಹಸಿರು ಜೋನ್ ಬರಲು ಎಲ್ಲರೂ ಕಾರಣ

    ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠೆ ಜಿ.ಸಂಗೀತಾ ವಿಶ್ಲೇಷಣೆ | ಶ್ರೀ ಶೇಷಾದ್ರಿ ಶಿಕ್ಷಣ ಸಂಸ್ಥೆಯಿಂದ ಸನ್ಮಾನ


    ಗಂಗಾವತಿ: ಗೃಹರಕ್ಷಕರಿಂದ ಹಿಡಿದು ಪೊಲೀಸ್ ಅಧಿಕಾರಿಗಳ ವರೆಗೂ ಶ್ರಮಿಸಿದ ಪರಿಣಾಮ ಕರೊನಾ ವೈರಾಣು ಹರಡದಂತಾಗಿ, ಜಿಲ್ಲೆ ಇಂದು ಹಸಿರು ಜೋನ್‌ನಲ್ಲಿದೆ ಎಂದು ಎಸ್‌ಪಿ ಜಿ.ಸಂಗೀತಾ ಹೇಳಿದರು.

    ನಗರದ ಪೊಲೀಸ್ ಠಾಣೆ ಆವರಣದಲ್ಲಿ ಶ್ರೀ ಶೇಷಾದ್ರಿ ಶಿಕ್ಷಣ ಸಂಸ್ಥೆ ಮತ್ತು ಶ್ರೀ ಜ್ಞಾನ ಸರಸ್ವತಿ ಆಂಗ್ಲ ಮಾದ್ಯಮ ಶಾಲೆ ಆಡಳಿತ ಮಂಡಳಿ ಮಂಗಳವಾರ ಹಮ್ಮಿಕೊಂಡಿದ್ದ ಕರೊನಾ ಮುಂಜಾಗ್ರತೆ ಕ್ರಮಗಳಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಗೃಹರಕ್ಷಕ ದಳ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವರ್ಗ ಜನರಲ್ಲಿ ಜಾಗೃತಿ ಮೂಡಿಸುತ್ತ ಬಂದಿದೆ. ಜನ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಶ್ರಮಿಸಿವೆ. ಹೀಗಾಗಿ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಲಾಕ್‌ಡೌನ್ ಅವಧಿ ಯಶಸ್ವಿಗೆ ಸಾರ್ವಜನಿಕರೂ ಸೇರಿ ಎಲ್ಲರ ಸಹಕಾರ ಕಾರಣ. ಈ ಸನ್ಮಾನ, ಗೌರವ ಪ್ರತಿಯೊಬ್ಬರಿಗೂ ಸಲ್ಲಬೇಕು ಎಂದರು.

    ಡಿವೈಎಸ್ಪಿ ಡಾ.ಬಿ.ಪಿ.ಚಂದ್ರಶೇಖರ್, ನಗರ ಪಿಐ ವೆಂಕಟಸ್ವಾಮಿ, ಸಿಪಿಐ ಸುರೇಶ ತಳವಾರ್, ಪಿಎಸೈ ದೊಡ್ಡಪ್ಪ, ಬಿಇಒ ಸೋಮಶೇಖರಗೌಡ, ನಗರಸಭೆ ಎಇಇ ಆರ್.ಆರ್.ಪಾಟೀಲ್‌ರನ್ನು ಸನ್ಮಾನಿಸಲಾಯಿತು.


    ಕಸಾಪ ಮಾಜಿ ಅಧ್ಯಕ್ಷ ನಿಜಲಿಂಗಪ್ಪ ಮೆಣಸಗಿ, ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಶರಣ ಕುಮಾರ, ಶಿಕ್ಷಕರಾದ ರಮೀಜಾ, ಜಮೀಲ್, ವಕೀಲೆ ರಾಜೇಶ್ವರಿ, ಸಣಾಪುರದ ಶಾರದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಎಂ.ಸುರೇಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts