More

  ತ್ರಿವಿಧ ದಾಸೋಹಕ್ಕೆ ಒತ್ತು

  ಗಂಗಾವತಿ: ಶೈಕ್ಷಣಿಕ ಬೆಳವಣಿಗೆಗೆ ಶ್ರೀ ಮಠ ಸದಾ ಸಹಕಾರ ನೀಡುತ್ತಿದ್ದು, ಮಠದ ಆಶಯದಂತೆ ಜ್ಞಾನ, ಅನ್ನ ಮತ್ತು ಅಕ್ಷರ ದಾಸೋಹಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶ್ರೀ ಚನ್ನಮಲ್ಲಿಕಾರ್ಜುನ ಮಠದ ಟ್ರಸ್ಟಿ ಕೆ. ಚನ್ನಬಸಯ್ಯಸ್ವಾಮಿ ಹೇಳಿದರು.

  ನಗರದ ಶ್ರೀ ಚನ್ನಬಸವ ಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಗುರುಚನ್ನಬಸವಸ್ವಾಮಿ ಕೋಚಿಂಗ್ ಸೆಂಟರ್‌ನಿಂದ ಆಯೋಜಿಸಿರುವ ಉಚಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ತ್ರಿವಿಧ ದಾಸೋಹ ನಡೆಯಬೇಕೆಂಬುದು ಶ್ರೀ ಚನ್ನಬಸವಸ್ವಾಮಿಗಳ ಆಶಯವಾಗಿತ್ತು. ಅದರಂತೆ ಕಳೆದ 17 ವರ್ಷಗಳಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಉಚಿತ ಕೋಚಿಂಗ್ ನೀಡಲಾಗುತ್ತಿದೆ ಎಂದು ತಿಳಿಸಿದರು.

  ಟ್ರಸ್ಟಿ ಚಂದ್ರೇಗೌಡ ಪೊ.ಪಾಟೀಲ್ ಮಾತನಾಡಿ, ಉನ್ನತ ಸಂಕಲ್ಪದೊಂದಿಗೆ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಉತ್ತಮ ಸಾಧನೆ ಸಾಧ್ಯ. ನಿರೀಕ್ಷಿತ ಲಿತಾಂಶ ಪಡೆಯುವುದರತ್ತ ಗಮನಹರಿಸಬೇಕಿದೆ ಎಂದರು.

  ಬಸಾಪಟ್ಟಣ ಪ್ರೌಢಶಾಲೆ ಮುಖ್ಯಶಿಕ್ಷಕ ಎನ್. ನಾಗಭೂಷಣ, ತರಬೇತಿ ಸಂಚಾಲಕ ಸಿದ್ದಲಿಂಗೇಶ್ವರ ಪೂಲಭಾವಿ, ಪ್ರೌಢಶಾಲಾ ಸಹ ಶಿಕ್ಷಕರ ನಿರ್ದೇಶಕ ರಾಜೇಶ್ವರ ರೆಡ್ಡಿ, ತಾಲೂಕು ಘಟಕದ ಕಾರ್ಯದರ್ಶಿ ಬಸವರಾಜಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಉಮೇಶ ಮಲ್ಲಾಪುರ, ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ತಿಮ್ಮಾಪುರ, ಉಲ್ಲಾಸ ರೆಡ್ಡಿ, ಮುರಳಿ, ವಿರೂಪಾಕ್ಷ ಗೌಡ ಪೊ.ಪಾಟೀಲ್, ಶಾಂತವೀರಯ್ಯ ಗಂಧದ ಮಠ, ಅರುಣ, ಸಚಿನ್, ಮಠದ ವ್ಯವಸ್ಥಾಪಕ ಶರಣಪ್ಪ ಬೂದಗುಂಪಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts