More

  ಶ್ರೀ ಶಿವ ಪಂಚಾಯತ್ ಮಹಾಯಾಗ ಸಂಪನ್ನ

  ಗಂಗಾವತಿ: ತಾಲೂಕಿನ ಶ್ರೀರಾಮನಗರ ಹೊರವಲಯದಲ್ಲಿ ವಿವಿಧ ಸಮುದಾಯದ ನೇತೃತ್ವದಲ್ಲಿ ಶ್ರೀ ಶಿವ ಪಂಚಾಯತ್ ಮಹಾಯಾಗ ಭಾನುವಾರ ಸಂಪನ್ನಗೊಂಡಿತು.

  ಲೋಕಕಲ್ಯಾಣಾರ್ಥ ನ.29ರಿಂದಲೇ ಮಹಾಯಾಗ ಹಮ್ಮಿಕೊಂಡಿದ್ದು, ವಿಶೇಷ ಪೂಜೆ, ಪಾರಾಯಣ, ಹೋಮ, ಸಂಕೀರ್ತನೆ ಹಮ್ಮಿಕೊಳ್ಳಲಾಗಿತ್ತು. ಸಮಾರೋಪ ಹಿನ್ನೆಲೆಯಲ್ಲಿ ಮಹಾಯಾಗದ ಪೂರ್ಣಾಹುತಿ ಕೈಗೊಂಡಿದ್ದು, ಇದಕ್ಕೂ ಮುನ್ನ ಸೂರ್ಯ ನಮಸ್ಕಾರ, ವಾಯು ಸೇರಿ ಪಂಚಭೂತಗಳ ಹೋಮ, ಗಣೇಶ ಪೂಜೆ, ಮಹಾಮಂಗಳಾರತಿ, ಸಾಮೂಹಿಕ ಅನ್ನಸಂತರ್ಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

  ಪೌರೋಹಿತ್ಯವಹಿಸಿದ್ದ ವೆಂಕಟರಾಮೇಶ್ವರ ಮಾತನಾಡಿ, ಲೋಕಕಲ್ಯಾಣಕ್ಕಾಗಿ ಮಹಾಯಾಗ ಹಮ್ಮಿಕೊಂಡಿದ್ದು, ಧಾರ್ಮಿಕ ಕಾರ್ಯಕ್ರಮಗಳಿಂದ ನೆಮ್ಮದಿ ಸಾಧ್ಯವಿದ್ದು, ಸನ್ಮಾರ್ಗಕ್ಕೆ ಕಾರಣವಾಗಲಿದೆ ಎಂದರು. ಪ್ರಮುಖರಾದ ಸೂರ್ಯನಾರಾಯಣರಾವ್, ಸತ್ಯ ವೆಂಕಟರಾಮಕೃಷ್ಣ ಶರ್ಮಾ ಹಾಗೂ ಗ್ರಾಮದ ಮುಖಂಡರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts