More

    ಅಂಜನಾದ್ರಿ ವಿಚಾರದಲ್ಲಿ ಟಿಟಿಡಿ ಹೇಳಿಕೆಗೆ ಆಕ್ಷೇಪ

    ಗಂಗಾವತಿ: ಹನುಮ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟ ವಿಚಾರದಲ್ಲಿ ಟಿಟಿಡಿ ಹೇಳಿಕೆ ಖಂಡನೀಯವಾಗಿದ್ದು, ಇತ್ಯರ್ಥಕ್ಕೆ ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರು ನಗರದ ತಾಲೂಕು ಆಡಳಿತದ ಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು.

    ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ಜಿಲ್ಲೆಯಲ್ಲಿ ಪುರಾಣ ಕಾಲದ ಪ್ರಸಿದ್ಧ ಸ್ಥಳಗಳಿದ್ದು, ಹಲವು ಇತಿಹಾಸಗಳಲ್ಲೂ ಉಲ್ಲೇಖವಾಗಿವೆ. ಹನುಮ ಜನಿಸಿದ್ದು ಅಂಜನಾದ್ರಿ ಬೆಟ್ಟದಲ್ಲಿ ಎಂಬುದು ಪುರಾಣಗಳಲ್ಲಿ ಉಲ್ಲೇಖವಿದ್ದು, ಕಿಷ್ಕಿಂದಾ ಕ್ಷೇತ್ರ ಎಂದು ಪ್ರಖ್ಯಾತವಾಗಿದೆ. ದೇವಾಲಯ ಮುಜರಾಯಿ ಇಲಾಖೆಗೊಳಪಟ್ಟಿದ್ದು, ಸರ್ಕಾರದ ಆಸ್ತಿಯಾಗಿದೆ. ಆದರೆ ಟಿಟಿಡಿ ಹನುಮ ಜನಿಸಿದ್ದು ತಿರುಪತಿಯಲ್ಲಿ ಎಂದು ಹೇಳಿ, ಹಲವು ಯೋಜನೆಗಳಿಗೆ ಚಾಲನೆ ನೀಡುತ್ತಿರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಮೌನವಹಿಸದೇ ಅಂಜನಾದ್ರಿ ಬೆಟ್ಟವೇ ಹನುಮ ಜನಿಸಿದ ಕ್ಷೇತ್ರ ಎಂದು ಪುರಾವೆಗಳ ಮೂಲಕ ಸಾಬೀತು ಪಡಿಸಬೇಕಿದ್ದು, ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ.

    ಸ್ಥಳೀಯ ಶಾಸಕರು, ಸಂಸದರು ಅನಧಿಕೃತ ರೆಸಾರ್ಟ್‌ಗಳಿಗೆ ಒತ್ತು ನೀಡುವುದನ್ನು ಬಿಟ್ಟು ಅಂಜನಾದ್ರಿಯತ್ತ ಗಮನಹರಿಸಬೇಕಿದೆ. ನಿರ್ಲಕ್ಷಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts