More

    371 ಜೆ ಸಮರ್ಪಕ ಅನುಷ್ಠಾನಕ್ಕೆ ಯತ್ನ- ಎಂಎಲ್ಸಿ ಶಶೀಲ್ ಜಿ.ನಮೋಶಿ ಹೇಳಿಕೆ

    ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಿಗಳಿಗೆ ವರದಾನವಾದ 371 ಜೆ ವಿಧೇಯಕ ಸಮರ್ಪಕ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದು ಎಂಎಲ್ಸಿ ಶಶೀಲ್ ಜಿ.ನಮೋಶಿ ಹೇಳಿದರು.

    ನಗರದ ಅಮರಜ್ಯೋತಿ ಕನ್ವೆನ್ಶನ್ ಹಾಲ್‌ನಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರು ಶನಿವಾರ ಆಯೋಜಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದರು. ನೇಮಕ ವಿಚಾರದಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಅರ್ಹರಿಗೆ 371 ಜೆ ವಿಧೇಯಕದಂತೆ ಅವಕಾಶ ದೊರೆಯುತ್ತಿಲ್ಲ. ನೌಕರರ ಬಡ್ತಿಯಲ್ಲೂ ಅನ್ಯಾಯವಾಗಿರುವ ಬಗ್ಗೆ ಮಾಹಿತಿಯಿದ್ದು, ಸಿಎಂ ಯಡಿಯೂರಪ್ಪ ಜತೆ ಚರ್ಚಿಸಿ ಇತ್ಯರ್ಥಕ್ಕೆ ಯತ್ನಿಸಲಾಗುವುದು. ಬಿಜೆಪಿ ಆಡಳಿತಾವಧಿಯಲ್ಲಿ 100ಕ್ಕೂ ಹೆಚ್ಚು ಖಾಸಗಿ ಶಾಲೆಗಳನ್ನು ಅನುದಾನದ ಯೋಜನೆ ತರಲಾಗಿತ್ತು. ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಬಾಕಿ ವೇತನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ದಿಟ್ಟ ನಿಲುವು ತಾಳಿದ್ದು, ಅನುದಾನ ಬಿಡುಗಡೆಗೊಳಿಸಿದೆ. ಚುನಾವಣೆ ಪೂರ್ವನೀಡಿದ ಭರವಸೆಯಂತೆ ಶಿಕ್ಷಕ ಮತ್ತು ಉಪನ್ಯಾಸಕರ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದರು.

    ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಶಿಕ್ಷಕ ಸಂಘಟನೆಗಳ ಮನವಿಯಂತೆ 7ನೇ ವೇತನ ಆಯೋಗ ಜಾರಿಗೊಳಿಸಿದ್ದು, ಹೊಸ ಪಿಂಚಣಿ ಯೋಜನೆ ಬದಲಾವಣೆಗೂ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದರು. ಕಾಡಾ ಅಧ್ಯಕ್ಷ ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಕೃಷಿ ವಿವಿ ವ್ಯವಸ್ಥಾಪನೆ ಮಂಡಳಿ ಸದಸ್ಯ ಜಿ.ಶ್ರೀಧರ್, ನಗರಸಭೆ ಸದಸ್ಯ ನವೀನ್ ಮಾ.ಪಾಟೀಲ್, ಬಿಜೆಪಿ ಯುವ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಸಾಗರ ಮುನವಳ್ಳಿ, ಉಪನ್ಯಾಸಕರ ಪ್ರತಿನಿಧಿಗಳಾದ ಶಿವಾನಂದ ಮೇಟಿ, ಈಶ್ವರ ಶ್ರೇಷ್ಟಿ ಇತರರಿದ್ದರು.

    ಮನವಿ ಸಲ್ಲಿಕೆ
    ಹಲವು ವರ್ಷಗಳಿಂದ ದುಡಿಯುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವುದು, ಸೇವಾ ಭದ್ರತೆ ಮತ್ತು 12 ತಿಂಗಳ ಗೌರವ ಧನ ವಿತರಿಸುವಂತೆ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು. ಕಲ್ಯಾಣ ಕರ್ನಾಟಕದ ಖಾಸಗಿ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿವುದು, ನೇಮಕ ಮತ್ತು ಸೇವಾಭದ್ರತೆಗೆ 371 ಜೆ ವಿಧೇಯಕ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ತಾಲೂಕು ಅನುದಾನರಹಿತ ಶಾಲಾ ಕಾಲೇಜು ಶಿಕ್ಷಕರ ಸಂಘದ ಸದಸ್ಯರು ಮನವಿ ಸಲ್ಲಿಸಿದರು. ಉಪನ್ಯಾಸಕ ಪವನಕುಮಾರ ಗುಂಡೂರು, ತಾಲೂಕು ಸಮಿತಿ ಅಧ್ಯಕ್ಷ ಮನೋಜಸ್ವಾಮಿ ಹಿರೇಮಠ, ಉಪಾಧ್ಯಕ್ಷ ನೀಲಕಂಠ ಅರಹುಣಸಗಿ, ಪದಾಧಿಕಾರಿಗಳಾದ ಭೋಗೇಶ್ವರಾವ್, ಎಸ್.ಎಚ್.ಕರುಣಾಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts