More

    ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮವಾಗಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

    ಬೆಂಗಳೂರು: ಸಮಾಜ ಸುಧಾರಣೆಯ ಹರಿಕಾರ ನಾರಾಯಣಗುರು ಪಠ್ಯ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದರು.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢಶಾಲೆ ಪಠ್ಯದಲ್ಲಿ ನಾರಾಯಣಗುರು ಪಠ್ಯ ಕೈಬಿಟ್ಟಿದ್ದಾರೆ ಎಂಬುದು ಸುಳ್ಳು. ಪ್ರತಿಪಕ್ಷಗಳು ವಿನಾಕಾರ ಆರೋಪ ಮಾಡಬಾರದು ಎಂದು ಹೇಳಿದರು. ಸಿಎಂ ಹಾಗೂ ಶಿಕ್ಷಣ ಸಚಿವರ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ, ಯಾವುದೇ ಪಠ್ಯವನ್ನ ಕೈಬಿಟ್ಟಿಲ್ಲ ಎಂದರು.

    ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮಾಗಿರುವ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಖರ್ಗೆ ಆರೋಪವನ್ನು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಾರಾಸಗಟ ತಳ್ಳಿಹಾಕಿದರು. ಎಸ್ಸಿ, ಎಸ್ಟಿಗಳಿಗೆ ನೀಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮವಾಗಿಲ್ಲ. ಎರಡು ಗುಂಪುಗಳ ನಡುವೆ ಟೆಂಡರ್ ಸಿಕ್ಕಿರುವುದೇ ಸಂಘರ್ಷಕ್ಕೆ ಕಾರಣವಾಗಿದೆ. ಕೋರ್ಟ್ ನಲ್ಲಿದಾವೆ ಹೂಡಿದರೂ, ಅವರ ವಿರುದ್ಧ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

    ಮೂರು ಸಾವಿರ ಕೊಳವೆಬಾವಿ ಕೊರೆದಿದ್ದಾರೆ. ಅನೇಕ ಕೊಳವೆಬಾವಿ ಆಗಿಲ್ಲ. ಖರ್ಗೆ ಅವರು ಸದನದಲ್ಲಿ ಕೇಳಿದಾಗ ಉತ್ತರ ನೀಡದ್ದೇನೆ. ಟೆಂಡರ್‌ನಲ್ಲಿ ಯಾವುದೇ ಗೋಲ್ಮಾಲ್ ಆಗಿಲ್ಲ. ಈಗಾಗಲೇ ತನಿಖಾಧಿಕಾರಿಯನ್ನು ನೇಮಕ ಮಾಡಿದ್ದೇವೆ. ವರದಿ ಬಂದ ಬಳಿಕ ನನ್ನನ್ನೂ ಸೇರಿದಂತೆ ಎಲ್ಲರನ್ನೂ ತನಿಖೆಗೆ ಒಳಪಡಿಸುತ್ತೇನೆ. ಸುಖಾ ಸುಮ್ಮನೆ ಆರೋಪ ಮಾಡೋದು ಸರಿಯಲ್ಲ ಎಂದು ತಿರುಗೇಟು ನೀಡಿದರು.

    ನಿಮ್ಮ ಮಕ್ಕಳು ಡೆಡ್ಲಿ ಚೈನೀಸ್ ರಿಂಗ್​ ಧರಿಸಿದ್ರೆ ಎಚ್ಚರ! ಅಗ್ನಿಶಾಮಕ ಠಾಣೆಗೆ ದೌಡಾಯಿಸುತ್ತಿರೋ ಪಾಲಕರು​

    ಅನಂತರಾಜು ಡೆತ್​ ಕೇಸ್​ಗೆ ಮತ್ತೊಂದು ಟ್ವಿಸ್ಟ್​: ಪತ್ನಿ-ಪ್ರೇಯಸಿ ನಡುವಿನ 2ನೇ ಆಡಿಯೋ ವೈರಲ್​, ಸ್ಥಳೀಯರಲ್ಲಿ ಗುಸುಗುಸು ಶುರು

    ಶಾಸಕನ ಕಾರಿನಲ್ಲಿ ಚಾಲಕನ ಮೃತದೇಹ ಪತ್ತೆ: ಸಾವಿಗೆ ಕಾರಣ ಕೇಳಿದ್ದಕ್ಕೆ ತಡಬಡಾಯಿಸಿದ ಎಂಎಲ್​ಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts