More

    ನವೆಂಬರ್‌ 4 ರಂದು ಗಂಗಾವಳಿ ತೀರದಲ್ಲಿ ಗಂಗಾ ಆರತಿ ಕಾರ್ಯಕ್ರಮ

    ಕಾರವಾರ: ಮೀನುಗಾರರ ವಿವಿಧ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಇತರ ವಿವಿಧ ಬೇಡಿಗಳಿಗೆ ಆಗ್ರಹಿಸಿ ನ.4 ರಂದು ಗೋಕರ್ಣ ಗಂಗಾವಳಿಯಲ್ಲಿ ಶಿವಗಂಗಾ ಕಲ್ಯಾಣ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಲಬುರಗಿಯ ರಾಷ್ಟ್ರೀಯ ಕೋಲಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಸ್.ಕೆ.ಮೇಲ್‌ಕಾರ್ ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಹರಿಕಂತ್ರ, ಮೊಗವೀರ, ಖಾರ್ವಿ, ಗಾಬೀತ ಪಾಗಿ ಇತ್ಯಾದಿ ಉಪ ನಾಮಗಳಿಂದ ಕರೆಯುವ ಮೀನುಗಾರರ ಸಮುದಾಯವು ತಮ್ಮ ವೃತ್ತಿಯ ಕಾರಣದಿಂದ ಅಸ್ಪ್ರಶ್ಯ ಸಮುದಾಯಕ್ಕೆ ಊಳಲು ತೋಟ, ಗದ್ದೆ ಭೂಮಿಗಳಿಲ್ಲ. ವಾಸಿಸಲು ಸರಿಯಾದ ಮನೆಗಳಿಲ್ಲ. ಸತ್ತರೆ ಹೆಣ ಅಂತ್ಯಕ್ರಿಯೆಗೆ ಸ್ಮಶಾನವಿಲ್ಲ. ಸಮುದ್ರ, ನದಿ, ಹಳ್ಳ, ಕೊಳ್ಳ, ಕೆರೆ ಮುಂತಾದೆಡೆ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುವವರು ಇವರು. ಪ್ರವಾಹ ಬಂದರೆ ಬದುಕೇ ಸರ್ವನಾಶವಾಗುತ್ತದೆ.
    ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಜನಾಂಗಕ್ಕೆ ಸೇರಿದ ದೊಡ್ಡ ಶಿಕ್ಷಣ ಸಂಸ್ಥೆಯಿಲ್ಲ. ಪ್ರತ್ಯೇಕ ದೇವಸ್ಥಾನಗಳಿಲ್ಲ. ಹೆಚ್ಚಿನ ಕಡೆಗಳಲ್ಲಿ ಸಭಾಭವನವಿಲ್ಲ. ತೀರ ಬಡವರಾಗಿ ಬದುಕು ಸಾಗಿಸುತ್ತಿರುವ ಮೀನುಗಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹಿಂದೆ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ದೇಶದ 17 ರಾಜ್ಯಗಳಲ್ಲಿ ಮೀನುಗಾರರ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಆದರೆ, ಕರ್ನಾಟಕದಲ್ಲಿ ಮೀನುಗಾರರ ಪರಿಸ್ಥಿತಿ ದಯನೀಯವಾಗಿದೆ.
    ಮೀನುಗಾರರಿಗೆ ಶ್ರೀಮಂತ ಇತಿಹಾಸವಿದೆ. ರಾಮಾಯಣ, ಮಹಾಭಾರತ ಮಹಾಗ್ರಂಥಗಳಲ್ಲಿ ಮೀನುಗಾರರ ಪಾತ್ರ ದೊಡ್ಡದಿದೆ. ದೇಶದ ನಾಗರೀಕತೆ ಬೆಳವಣಿಗೆಯಲ್ಲಿ ಮೀನುಗಾರರ ಪಾತ್ರ ದೊಡ್ಡದಿದೆ. ಆದರೆ, ಪ್ರಸ್ತುತರದಲ್ಲಿ ಅವರ ಪರಿಸ್ಥಿತಿ ದಯನೀಯವಾಗಿದೆ. ಹಾಗಾಗಿ ಮೀನುಗಾರರ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸಬೇಕಿದೆ. ಮೀನುಗಾರರ ಈ ಎಲ್ಲ ಉಪ ಪಂಗಡಗಳನ್ನು ಒಂದುಗೂಡಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    ದೇವತೆಗಳಿವೆ ವಿವಾಹ ನಡೆಯುವ ಏಕೈಕ ಸ್ಥಳ ಗೋಕರ್ಣದ ಗಂಗಾವಳಿ ನದಿ. ಅಲ್ಲಿ ಗಂಗಾಮಾತಾ ದೇವಸ್ಥಾನವಿದೆ. ಗಂಗಾಷ್ಟಮಿಯAದು ಪ್ರತಿ ವರ್ಷ ಗಂಗೆ, ಶಿವನ ವಿವಾಹ ಮಹೋತ್ಸವ ನಡೆಸುಕೊಂಡು ಬಂದಿದೆ. ಅದನ್ನು ಅದ್ದೂರಿಯಾಗಿ ಆಚರಿಸುವ ಜತೆಗೆ ಇತರ ವಿವಿಧ ಕಾರ್ಯಕ್ರಮ ಆಯೋಜಿಸಲು ನಿರ್ಣಯಿಸಲಾಗಿದೆ.
    ಗಂಗಾ ಆರತಿ:
    ಕಲಬುರಗಿಯ ರಾ ಕೋಲಿ ಸಾಂಸ್ಕೃತಿಕ, ಸಾಹಿತ್ಯ ಪರಿಷತ್, ಗಂಗಾವಳಿಯ ಗಂಗಾಮಾತಾ ದೇವಾಲಯ ಸಮಿತಿ, ಕಾರವಾರ ಜಿಲ್ಲಾ ಅಂಬಿಗರ ಸಮುದಾಯ ನೌಕರರ ಸಂಘ, ಕಾರವಾರ ಜಿಲ್ಲೆಯ ಮೀನುಗಾರರ ಸಮುದಾಯದ ಸಮನ್ವಯ ಸಂಚಾಲನ ಸಮಿತಿಯಿಂದ ನವೆಂಬರ್ ೪ ರಂದು ಶಿವಗಂಗಾ ಕಲ್ಯಾಣೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಗಂಗಾಷ್ಟಮಿ, ಗಂಗೆ ಹಬ್ಬ, ಜಾತ್ರಾ ಮಹೋತ್ಸವ, ಗಂಗಾರತಿ ಮಹೋತ್ಸವ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.
    ಸಮುದಾಯದ ಸಚಿವ ಮಂಕಾಳ ವೈದ್ಯ, ಎಂಎಲ್‌ಸಿಗಳಾದ ಗಣಪತಿ ಉಳ್ವೇಕರ್, ಎನ್.ರವಿಕುಮಾರ್, ಶಾಸಕ ಯಶಪಾಲ್ ಸುವರ್ಣ, ಕೇಂದ್ರ ಆಹಾರ ನಿಗಮ ಮಂಡಳಿ ಅಮರೇಶ್ವರಿ ಚಿಂಚನಸೂರ್, ಇತರರು ಆಗಮಿಸುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 21 ಜನರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಅಲ್ಲದೆ, ರಾತ್ರಿ ಕಾಶಿಯಲ್ಲಿ ಗಂಗಾನದಿಗೆ ನಡೆಯುಂತೆ ದೊಡ್ಡ ಪ್ರಮಾಣದಲ್ಲಿ ಗಂಗಾ ಆರತಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ: ಶಿರಸಿ-ಕುಮಟಾ ರಸ್ತೆಯ ಸಂಚಾರ ನಿಷೇಧದ ಬಗ್ಗೆ ಮಹತ್ವದ ಮಾಹಿತಿ
    ಈ ಸಭೆಗಳ ಮೂಲಕ ಗಂಗಾವಳಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು. ಕಾರವಾರದಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ ನಿರ್ಮಾಣ ಮಾಡಬೇಕು. ಮೀನುಗಾರರಿಗೆ ಪ್ರತ್ಯೇಕ ಪ್ರಾಧಿಕಾರ ನಿರ್ಮಾಣ ಮಾಡಬೇಕು. ಮೀನುಗಾರರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಸಮುದಾಯದ ಎಲ್ಲರಿಗೆ ಮನೆಯ ವ್ಯವಸ್ಥೆ ಮಾಡಬೇಕು ಎಂಬುದು ಸೇರಿ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದರು.
    ಹುರಸಗುಂಡಗಿ ಕ್ಷೇತ್ರದ ಭಗವಾನ್ ವೇದವ್ಯಾಸ ಸಂಸ್ಥಾನ ಬ್ರಹ್ಮರ್ಷಿ ಪೀಠದ ರಾಜಗುರು ಸ್ವಾಮಿಗಳು ಮಾತನಾಡಿ, ಸಮುದಾಯದ ಮೇಲೆ ರಾಜ್ಯದ ವಿವಿಧೆಡೆ ದೌರ್ಜನ್ಯ ನಡೆಯುತ್ತಿದೆ. ಯಾರೂ ಅದಕ್ಕೆ ಸ್ಪಂದನೆ ನೀಡುತ್ತಿಲ್ಲ. ಇದರಿಂದ ಒಗ್ಗಟ್ಟಾಗಿ ನಮ್ಮ ಹಕ್ಕೊತ್ತಾಯ ಮಂಡಿಸಲಿದ್ದೇವೆ ಎಂದರು. ನೀಲಕಂಠ ಬಲೇಗಾರ್, ಎಸ್.ಕೆ.ಅಂಬಿಗ, ಹೂವಾ ಖಂಡೇಕರ್, ಗಣಪತಿ ಉಳ್ವೇಕರ್‌, ಬಾಬು ಅಂಬಿಗ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts