More

    ಗಣೇಶೋತ್ಸವ ಐಕ್ಯತೆಯ ಪ್ರತೀಕ

    ಕೊಪ್ಪಳ: ಗಣೇಶ ಹಬ್ಬ ಆಚರಣೆಯು ಐಕ್ಯತೆಯ ಪ್ರತೀಕವಾಗಿದ್ದು, ಎಲ್ಲರೂ ವಿಜೃಂಭಣೆಯಿಂದ ಆಚರಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

    ಇದನ್ನೂ ಓದಿ: ಗಣೇಶೋತ್ಸವ ಐಕ್ಯತೆ ಪ್ರತೀಕ: ಸಂಗಣ್ಣ ಕರಡಿ

    ನಗರದ ಕಾವ್ಯಾನಂದ ಉದ್ಯಾನವನದಲ್ಲಿ ಹಿಂದೂ ಮಹಾ ಮಂಡಳಿಯಿಂದ ಭಾನುವಾರ ನಡೆದ ಹಾಲಕಂಬ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.
    ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬವಾಗಿದೆ.

    ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರೃ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನ.

    ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ಏಕತೆಯ ಬಿಸಿಯನ್ನೂ ಮುಟ್ಟಿಸಿತು ಎಂದರು.

    ಹಿಂದೂ ಮಹಾ ಮಂಡಳಿಯಿಂದ ಪ್ರತಿ ವರ್ಷ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಪ್ರತಿದಿನ ಒಂದೊಂದ ಕಾರ್ಯಕ್ರಮ ಇರಲಿದ್ದು, ಜನತೆ ಭಾಗವಹಿಸಿ ಯಶಸ್ವಿಗೊಳಿಸಬೇಕು. ಗಣೇಶೋತ್ಸವ ಹಿಂದುಗಳ ಹಬ್ಬ ಮಾತ್ರವಲ್ಲ ಎಲ್ಲ ಜನಾಂಗದ ಹಬ್ಬವಾಗಿದೆ. ರಾಜ್ಯಕ್ಕೆ ಮಾದರಿಯಾಗಿ ಹಬ್ಬ ಆಚರಿಸಿ ಎಂದರು.

    ಈ ಹಿಂದೆ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯಾದ್ಯಂತ ಗಣೇಶೋತ್ಸವ ಆಚರಿಸಲಾಗಿದೆ. ಅದರಂತೆಯೇ ಕಾಂಗ್ರೆಸ್ ಸರ್ಕಾರ ಶಾಂತಿಯುತವಾಗಿ ಆಚರಿಸಲು ಹಾಗೂ ಯಾವುದೇ ನಿಯಮ ಮತ್ತು ಷರತ್ತು ಹಾಕದೇ ಹಬ್ಬ ಆಚರಿಸಲು ಅನುವು ಮಾಡಿಕೊಡಬೇಕು.

    ಪೊಲೀಸ್ ಕಣ್ಗಾವಲು ಜತೆಗೆ ಸ್ವಾತಂತ್ರೃವಾಗಿ ಆಚರಿಸಲು ಅವಕಾಶ ನೀಡಬೇಕು ಎಂದರು. ನಗರಸಭೆ ಸದಸ್ಯ ಚನ್ನಪ್ಪ ಕೊಟ್ಯಾಳ, ಪ್ರಮುಖರಾದ ಪುಟ್ಟರಾಜ ಚಕ್ಕಿ, ಬಾಬಣ್ಣ ಬಿಲಂಕರ್, ಪೃತ್ವಿರಾಜ, ಗಜು ಮೇಘರಾಜ, ಅಂಕುಶ,
    ವಿನೋಧ ಹಿರೇಮಠ, ಉದಯ ಹಾದಿಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts