More

    ಟಾಪ್ ವ್ಯವಸ್ಥಾಪಕರ ಪಟ್ಟಿಯಲ್ಲಿ ಕುಂದಾಪುರದ ಗಣೇಶ್ ಪೂಜಾರಿ

    ಕುಂದಾಪುರ: ಭಾರತದ ಟಾಪ್ 100 ಮೇರು ವ್ಯವಸ್ಥಾಪಕರಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಡಿ ಗ್ರಾಮ ಗಣೇಶ ಪೂಜಾರಿ ಗುರುತಿಸಿಕೊಂಡಿದ್ದಾರೆ. ಫೋರ್ಬ್ಸ್ ಇಂಡಿಯಾದ ಸಹಭಾಗಿತ್ವದಲ್ಲಿ ಗ್ರೇಟ್ ಪೀಪಲ್ ಮ್ಯಾನೇಜರ್ಸ್ ಸ್ಟಡಿ ಬ್ಯಾನರ್ ಅಡಿಯಲ್ಲಿ ಗ್ರೇಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಟ್ ಪ್ರತಿಷ್ಠಿತರ ಪಟ್ಟಿ ಪ್ರಕಟಿಸಿದೆ.

    ಲೋಧಾ ಉಪಾಧ್ಯಕ್ಷರಾಗಿರುವ ಗಣೇಶ ಪೂಜಾರಿ ಬಡತನ ಮೆಟ್ಟಿ ನಿಂತ ಭಾರತದ ಟಾಪರ್ ವ್ಯವಸ್ಥಾಪಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಕೋಡಿ ಮೋಯಿದ್ದೀನ್ ಹಾಜಿ ಕೆ.ಮೊಯಿದ್ದೀನ್ ಶಾಲೆ ಹಳೇ ವಿದ್ಯಾರ್ಥಿಯಾಗಿದ್ದು, ಶಾಲೆ ಅಧ್ಯಕ್ಷ ಸೈಯದ್ ಮೊಹಮ್ಮದ್ ಗಣೇಶ್ ಸಾಧನೆಗೆ ಬ್ಯಾರಿ ಅಭಿನಂದಿಸಿದ್ದಾರೆ.

    ಕೋಡಿಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ ಗಣೇಶ ಪೂಜಾರಿ ಮುಂಬೈಗೆ ತೆರಳಿ ಕೆಲಸದ ಜತೆ ವಿದ್ಯಾಭ್ಯಾಸ ಮುಂದುವರಿಸಿ, ಹಂತ ಹಂತವಾಗಿ ಯಶಸ್ಸು ಗಳಿಸಿದರು. ಉನ್ನತ ಸ್ಥಾನ ಪಡೆದರೂ ಗಣೇಶ್ ಪೂಜಾರಿ ಕೋಡಿ ಮತ್ತು ಕಲಿತ ಶಾಲೆ ಎರಡರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, ಅಲ್ಮಾ ಮೇಟರ್ ಅಭಿವೃದ್ಧಿ ಮತ್ತು ಬೆಳವಣಿಗೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು ಎಂದು ಹಳೇ ವಿದ್ಯಾರ್ಥಿ ಬಗ್ಗೆ ಸೈಯದ್ ಬ್ಯಾರಿ ಹೇಳುತ್ತಾರೆ.

    ಯಾವುದೇ ಸಂಸ್ಥೆಯಾಗಲಿ ಮತ್ತಾವುದಾಗಲಿ ಉತ್ತಮ ಸಹೋದ್ಯೋಗಿಗಳ ತಂಡ ಸಿಗದಿದ್ದರೆ ಉತ್ತಮ ವ್ಯವಸ್ಥಾಪಕನಾಗಲು ಸಾಧ್ಯವಿಲ್ಲ. ಹೂಡಿಕೆ ಮಾಡಿ ಎಲ್ಲ ಹಂತಗಳಲ್ಲಿ ತಂಡದೊಂದಿಗೆ ಹೊಂದಾಣಿಕೆಯಿದ್ದರೆ ಯಶಸ್ಸು ಸಾಧ್ಯ. ಸಾಮರ್ಥ್ಯ ಮತ್ತು ಕೆಲಸ ಮಾಡುವ ಕ್ಷೇತ್ರಗಳಲ್ಲಿ ಸದಾ ಕಲಿಯುತ್ತಿರಬೇಕು. ಕಲಿಕೆ ಮತ್ತು ಒಗ್ಗಟ್ಟು ಉತ್ಪಾದಕತೆ ಮತ್ತು ವ್ಯವಹಾರ ಹೆಚ್ಚಿಸಲು ಸಹಾಯ ಮಾಡುತ್ತದೆ.
    ಗಣೇಶ್ ಪೂಜಾರಿ
    ಅಡ್ಮಿನಿಸ್ಟ್ರೇಶನ್ ಮತ್ತು ಹ್ಯೂಮನ್ ರೀಸೋರ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts