More

    ಸಂಭ್ರಮಕ್ಕೆ ಇದು ಸಮಯವಲ್ಲ! … ಇದ್ದಲ್ಲೇ ಹರಸಿ-ಹಾರೈಸಲು ಗಣೇಶ್ ಮನವಿ

    ಜುಲೈ ತಿಂಗಳೆಂದರೆ, ಕನ್ನಡ ಚಿತ್ರರಂಗದ ಪಾಲಿಗೆ ಹುಟ್ಟುಹಬ್ಬದ ತಿಂಗಳು ಎಂದರೆ ತಪ್ಪಿಲ್ಲ. ಏಕೆಂದರೆ, ಈ ತಿಂಗಳು ಕನ್ನಡ ಚಿತ್ರರಂಗದ ಸಾಕಷ್ಟು ಜನಪ್ರಿಯ ನಟ-ನಟಿಯರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸಾಲಿನಲ್ಲಿ ಮೊದಲಿಗೆ ಗಣೇಶ್ ಇದ್ದಾರೆ. ಇಂದು 41ನೇ ವಯಸ್ಸಿಗೆ ಕಾಳಿಟ್ಟಿರುವ ಗಣೇಶ್, ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ತೀರ್ಮಾನಿಸಿದ್ದಾರೆ. ಸಂಭ್ರಮಕ್ಕೆ ನೋ ಎಂದಿರುವ ಅವರು, ಅಭಿಮಾನಿಗಳಿಗೆ ಇದ್ದಲ್ಲೇ ಹರಸಿ-ಹಾರೈಸಿ ಎಂದು ಸಂದೇಶ ರವಾನಿಸಿದ್ದಾರೆ.

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿರುವ ಅವರು, ‘ನಮ್ಮ ತಂದೆ ನಿಧನರಾದ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿಯೂ ಇಲ್ಲ. ಏಕೆಂದರೆ, ಸಂಭ್ರಮಕ್ಕೆ ಇದು ಸಮಯವಲ್ಲ. ಹಾಗಾಗಿ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಅಭಿಮಾನಿಗಳಿಗೆ ಬರಬೇಡಿ ಎಂದಿದ್ದೇನೆ. ಇದ್ದಲ್ಲೇ ಹಾರೈಸುವುದಕ್ಕೆ ಕೇಳಿದ್ದೇನೆ. ಅವರು ಸಹ ಸಮಯ-ಸಂದರ್ಭ ಅರ್ಥ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಗಣೇಶ್.

    ಇದನ್ನೂ ಓದಿ: ಕಾರ್ತಿಕಾ ಲೈಟ್​ ಬಿಲ್​ ಕೇಳಿ ನೀವು ಶಾಕ್​ ಆಗ್ತೀರಾ!

    ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವೆ: ‘ಹುಟ್ಟುಹಬ್ಬದ ನೆಪದಲ್ಲಿ ವರ್ಷಕ್ಕೆ ಒಂದು ಬಾರಿ ಎಲ್ಲರನ್ನೂ ನೋಡುವ ಅವಕಾಶ ಸಿಗುತಿತ್ತು. ಹುಟ್ಟುಹಬ್ಬಕ್ಕೆಂದೇ ಕೆಲವು ಅಭಿಮಾನಿಗಳು ದೂರದೂರುಗಳಿಂದ ಬರುತ್ತಿದ್ದರು. ಅವರನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಈ ನಿರ್ಧಾರ ಅನಿವಾರ್ಯ. ಈಗ ಸನ್ನಿವೇಶ ಹಾಗಿಲ್ಲ. ಇಂಥ ಸಂದರ್ಭದಲ್ಲಿ ಎಷ್ಟು ಹುಷಾರಾಗಿದ್ದರೂ ಕಡಿಮೆ. ಆರೋಗ್ಯದಿಂದಿರುವುದು ಬಹಳ ಮುಖ್ಯ. ಅವರು ಚೆನ್ನಾಗಿರಬೇಕು. ಅವರು ಚೆನ್ನಾಗಿದ್ದರೆ, ನಾವೂ ಚೆನ್ನಾಗಿರೋಕೆ ಸಾಧ್ಯ’ ಎಂಬುದು ಗಣೇಶ್ ಅಭಿಪ್ರಾಯ.

    ಈ ವರ್ಷ ನೋ ಸಿನಿಮಾ: ವರ್ಷಕ್ಕೆ ಮೂರು ಚಿತ್ರ ಎಂಬ ಪಾಲಿಸಿಯನ್ನು ಪಾಲಿಸಿಕೊಂಡು ಬಂದಿದ್ದ ಗಣೇಶ್‌ಗೆ, ಈ ವರ್ಷ ಅದೀಗ ಮಿಸ್ ಆಗಿದೆ. ಬಹುಶಃ ಲಾಕ್‌ಡೌನ್ ಇಲ್ಲದಿದ್ದರೆ ‘ಗಾಳಿಪಟ 2’ ಮತ್ತು ‘ಸಖತ್’ ಚಿತ್ರಗಳು ಬಿಡುಗಡೆಯಾಗಿರುತ್ತಿದ್ದವು. ಆದರೆ, ಲಾಕ್‌ಡೌನ್‌ನಿಂದ ಎರಡೂ ತಡವಾಗಿವೆ ಮತ್ತು ಈ ವರ್ಷ ಬಿಡುಗಡೆಯಾಗುವುದೇ ಸಂಶಯವಾಗಿದೆ. ಇನ್ನು ‘ತ್ರಿಬಲ್ ರೈಡಿಂಗ್’ ಎಂಬ ಚಿತ್ರ ಶುರುವಾಗಬೇಕಿತ್ತು. ಅದೂ ಸಹ ಮುಂದಕ್ಕೆ ಹೋಗಿದೆ. ಇನ್ನು ಹುಟ್ಟುಹಬ್ಬದ ಪ್ರಯುಕ್ತ, ‘ಸ್ಟೋರಿ ಆಫ್​ ರಾಯಗಢ’ ಎಂಬ ಹೊಸ ಚಿತ್ರದ ಘೋಷಣೆಯಾಗಿದ್ದು, ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈಗ ಒಪ್ಪಿರುವ ಎಲ್ಲಾ ಚಿತ್ರಗಳು ಮುಗಿದ ಮೇಲೆ, ಈ ಚಿತ್ರ ಪ್ರಾರಂಭವಾಗಲಿದೆ.

    ಇದನ್ನೂ ಓದಿ: ಮದುವೆಯಾದ ಆರಂಭದ ಆರು ತಿಂಗಳಲ್ಲಿ, ಅನುಷ್ಕಾ ಜತೆ ಕೊಹ್ಲಿ ಕಳೆದ ದಿನಗಳೆಷ್ಟು?

    ತಿನ್ನು-ಮಲಗು ಬಿಟ್ಟು ಏನೂ ಮಾಡಿಲ್ಲ: ಈ ಕುರಿತು ಮಾತನಾಡುವ ಅವರು, ‘ಎರಡೂ ಚಿತ್ರಗಳ ಚಿತ್ರೀಕರಣ ನಡೆಯುತಿತ್ತು. ಅಷ್ಟರಲ್ಲಿ ಲಾಕ್‌ಡೌನ್ ಆಯಿತು. ಹಾಗಾಗಿ ಎಲ್ಲವೂ ನಿಂತಿದೆ. ಮುಂದಿನ ಮೂರು ತಿಂಗಳು ಕೆಲಸ ಶುರುವಾಗುವುದು ಸಂಶಯವೇ. ಆ ನಂತರವಷ್ಟೇ ಕೆಲಸ. ಮೊದಲು ಆರೋಗ್ಯ ಮುಖ್ಯ.ಇವೆಲ್ಲಾ ಒಂದು ಹಂತಕ್ಕೆ ಬಂದ ಮೇಲೆ ಕೆಲಸ ಶುರುವಾಗಲಿದೆ. ಈ ಮೂರು ತಿಂಗಳಲ್ಲಿ ಮನೆಯಲ್ಲಿ ಮಕ್ಕಳೊಂದಿಗೆ ಒಳ್ಳೆಯ ಸಮಯ ಕಳೆದಿದ್ದೇನೆ. ಇದೊಂಥರಾ ಬೇಸಿಗೆ ರಜೆ ತರಹ ಇತ್ತು. ತಿನ್ನೋದು, ಮಲಗೋದು ಬಿಟ್ಟು ಒಂದು ಎಕ್ಸ್‌ಟ್ರಾ ಕೆಲಸ ಮಾಡಿಲ್ಲ’ ಎಂದು ನಗುತ್ತಾರೆ ಅವರು.

    ಈ ಕರೊನಾ ಸಮಸ್ಯೆ ಮತ್ತು ಅದರಿಂದ ಸುಧಾರಿಸಿಕೊಳ್ಳುವುದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು ಎನ್ನುವ ಅವರು, ‘ಇದೆಲ್ಲದರಿಂದ ಸುಧಾರಿಸಿಕೊಳ್ಳುವುದುಕ್ಕೆ ಇನ್ನೂ ಕೆಲವು ತಿಂಗಳುಗಳೇ ಬೇಕು. ಹಲವರ ಪಾಲಿಗೆ ಈ ವರ್ಷ ಡಿಲೀಟ್ ಆದಂತೆಯೇ ಲೆಕ್ಕ. ಬಹುಶಃ ಮುಂದಿನ ವರ್ಷದ ಹೊತ್ತಿಗೆ ಎಲ್ಲವೂ ಸರಿ ಹೋಗಬಹುದು. ಸಂಕ್ರಾಂತಿಯಿಂದ ಎಲ್ಲವೂ ಹೊಸದಾಗಿ ಶುರುವಾಗಬಹುದು’ ಎನ್ನುತ್ತಾರೆ ಗಣೇಶ್.

    ಹೀರೋನೂ ನಾನೇ, ವಿಲನ್ನೂ ನಾನೇ … ‘ಕೆಜಿಎಫ್​ 2’ ಪಾತ್ರದ ಬಗ್ಗೆ ರವೀನಾ ಟಂಡನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts