More

    ಮಲೆನಾಡಿನಲ್ಲಿ ಗಮಕ ಕಲೆ ಜೀವಂತ

    ಸಾಗರ: ಗಮಕ ಕಲೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ರಾಯಭಾರಿಗಳು. ಕನ್ನಡ ಕಾವ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
    ಸಾಗರದ ಶೃಂಗೇರಿ ಶಂಕರಮಠದಲ್ಲಿ ಮಲೆನಾಡು ಗಮಕ ಕಲಾ ಸಂಘ ಹಾಗೂ ಶೃಂಗೇರಿ ಶಂಕರ ಮಠದ ಆಶ್ರಯದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಚ್. ಶಾಂತಾರಾಮ ಗಮಕ ವ್ಯಾಖ್ಯಾನ ಪ್ರಶಸ್ತಿ ಪುರಸ್ಕೃತ ಪ್ರೊ. ಕೆ.ಆರ್.ಕೃಷ್ಣಯ್ಯ ಮತ್ತು ಯಶೋದಾ ಕೃಷ್ಣಯ್ಯ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಕೆ.ಆರ್.ಕೃಷ್ಣಯ್ಯ ಅವರ ನಾಯಕತ್ವದಲ್ಲಿ ಮಲೆನಾಡು ಗಮಕ ಕಲಾ ಸಂಘವು ಗಮಕವನ್ನು ಜೀವಂತವಾಗಿರಿಸಿದೆ. ಶಿವಮೊಗ್ಗದ ಮತ್ತೂರಿನಲ್ಲಿ ಗಮಕಕ್ಕೆ ಪ್ರಾಶಸ್ತ್ಯ ನೀಡುತ್ತಿರುವ ರೀತಿಯಲ್ಲಿಯೇ ಸಾಗರದಲ್ಲೂ ಗಮಕ ಕಾರ್ಯಕ್ರಮ ನಡೆಯುತ್ತಿದೆ. ಹೊಸ ತಲೆಮಾರಿನ ಗಮಕ ಕಲಾವಿದರನ್ನು ನಿರ್ಮಾಣ ಮಾಡುವ ಮೂಲಕ ಕೆ.ಆರ್. ಕೃಷ್ಣಯ್ಯ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದರು.
    ಸನ್ಮಾನ ಸ್ವೀಕರಿಸಿದ ಕೆ.ಆರ್.ಕೃಷ್ಣಯ್ಯ ಮಾತನಾಡಿ, ರಾಜ್ಯಮಟ್ಟದಲ್ಲಿ ಗಮಕ ಸಂಘ ಆರಂಭವಾಗುವ ಮೊದಲೇ ಸಾಗರದಲ್ಲಿ ಗಮಕ ಕಲಾ ಸಂಘ ಕೆಲಸ ಆರಂಭಿಸಿದೆ. ಸಂಘದ ಚಟುವಟಿಕೆ ನಿರಂತರವಾಗಿ ನಡೆಯಲು ಸಂಘದ ಪದಾಽಕಾರಿಗಳು, ಸದಸ್ಯರು, ಪ್ರೇಕ್ಷಕರು ಮಹತ್ವದ ಕೊಡುಗೆ ನೀಡಿದ್ದಾರೆ. ಗಮಕ ಸಂಘ ಮತ್ತು ಬರವಣಿಗೆಯ ಮೂಲಕ ಬದುಕು ಸಾರ್ಥಕ ಆಗುತ್ತಿದೆ ಎಂದು ಹೇಳಿದರು.
    ಡಾ.ಎಚ್.ಎಸ್.ಮೋಹನ್ ಮಾತನಾಡಿ, ವೃತ್ತಿ ಜೀವನದಲ್ಲಿ ಸೂಕ್ತ ಪ್ರವೃತ್ತಿ ರೂಢಿಸಿಕೊಂಡರೆ ನಿವೃತ್ತಿ ಜೀವನ ಸಾಗಿಸುವುದು ಸುಲಭವಾಗುತ್ತದೆ. ಕೆ.ಆರ್.ಕೃಷ್ಣಯ್ಯ ಅವರು ಗಮಕ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಆದ್ದರಿಂದ ಅವರು ತಮ್ಮ ನಿವೃತ್ತಿ ನಂತರವೂ ಆರೋಗ್ಯಕರ ಚಟುವಟಿಕೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಮಲೆನಾಡು ಗಮಕ ಕಲಾ ಸಂಘದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಅದಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದು ಹೇಳಿದರು.
    ಸಂಘದ ಉಪಾಧ್ಯಕ್ಷೆ ಎಸ್.ಕೆ.ಪ್ರಭಾವತಿ, ಯಶೋಧಾ ಕೃಷ್ಣಯ್ಯ, ಡಾ.ಜಿ.ಎಸ್.ಭಟ್ಟ, ಮಂಜುನಾಥ ಶೆಟ್ಟಿ, ಚೂಡಾಮಣಿ ರಾಮಚಂದ್ರ, ಗಣಪತಿ ಕಾನಗೋಡು. ಬಿ.ಟಿ.ಅರುಣ, ಕೆ.ಎಂ.ರವೀAದ್ರ ಇದ್ದರು. ಕುಮಾರವ್ಯಾಸ ಭಾರತದ ಭೀಷ್ಮ ವಿಜಯ ಕಥಾ ಭಾಗವನ್ನು ನರಹರಿ ಶರ್ಮಾ ವಾಚಿಸಿ, ಶಂಕರನಾರಾಯಣ ಹೊಸಕೊಪ್ಪ ವ್ಯಾಖ್ಯಾನಿಸಿದರು. ಕೆ.ಆರ್.ಕೃಷ್ಣಯ್ಯ ದಂಪತಿಯನ್ನು ಸನ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts