More

    ಗಗನಯಾನ್​: ರಷ್ಯಾದಲ್ಲಿ ಭಾರತದ ಮೊದಲ ಗಗನಯಾತ್ರಿಗಳ ತರಬೇತಿ ಸಂಪೂರ್ಣ

    ಬೆಂಗಳೂರು: ಭಾರತದ ಚೊಚ್ಚಲ ಗಗನಯಾನ್ ನಲ್ಲಿ ಭಾಗವಹಿಸುವ ನಾಲ್ವರು ಗಗನಯಾತ್ರಿಗಳು ರಷ್ಯಾದಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿರುವುದಾಗಿ ರಷ್ಯಾದ ಬಾಹ್ಯಾಕಾಶ ಕೇಂದ್ರ ರಾಸ್​ಕಾಸ್ಮೋಸ್​ನ ಅಧೀನ ಸಂಸ್ಥೆ ಗ್ಲಾವ್​​ಕೋಸ್ಮೋಸ್​ ಗುರುವಾರ ತಿಳಿಸಿದೆ.

    ಎಲ್ಲ ಗಗನಯಾತ್ರಿಗಳೂ ಉತ್ತಮ ಆರೋಗ್ಯಹೊಂದಿದ್ದು, ತರಬೇತಿ ಮುಂದುವರಿಸಲು ಬಯಸಿದ್ದಾರೆ. ಅವರು ಇದುವರೆಗೆ ಅಬ್​ನೋರ್ಮಲ್​ ಡೀಸೆಂಡ್ ಮೋಡ್ಯೂಲ್​ ಲ್ಯಾಂಡಿಂಗ್​ ನ ಪರೀಕ್ಷೆಯ ಮೂರು ಹಂತಗಳ ಅಲ್ಪಾವಧಿ ಕೋರ್ಸ್​ಗಳನ್ನು ಫೆಬ್ರವರಿ, ಜೂನ್​, ಜುಲೈಗಳಲ್ಲಿ ಪೂರ್ಣಗೊಳಿಸಿದ್ದಾರೆ. ಜೂನ್​ ತಿಂಗಳಲ್ಲಿ ಅವರು IL-76MDK ಎಂಬ ವಿಶೇಕ್ಷ ಲ್ಯಾಬೊರೇಟರಿ ಏರ್​ಕ್ರಾಫ್ಟ್​ನಲ್ಲಿ ವೇಟ್​ಲೆಸ್​ನೆಸ್​ ಮೋಡ್​ ನ ತರಬೇತಿ ಪಡೆದಿದ್ದಾರೆ. ಇದೇ ರೀತಿ ಪೂರಕ ತರಬೇತಿಗಳನ್ನೂ ಪಡೆಯುತ್ತಿದ್ದಾರೆ ಎಂದು ಗ್ಲಾವ್​ಕೋಸ್ಮೋಸ್ ಹೇಳಿದೆ.

    ಇದನ್ನೂ ಓದಿ:  ಶ್ರೀಲಂಕಾ ಸಂಸತ್​ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸ ಸರ್ಕಾರಕ್ಕೆ ಭಾರಿ ಗೆಲುವು

    ನಾಲ್ವರು ಕೂಡ ಭಾರತೀಯ ವಾಯುಪಡೆಯ ಫೈಟರ್ ಪೈಲಟ್​ಗಳಾಗಿದ್ದು ಅವರೆಲ್ಲರೂ ಆರಂಭಿಕ ಯೋಜನೆ ಪ್ರಕಾರ 2022ರಲ್ಲಿ ಉಡಾವಣೆಗೊಳ್ಳಬೇಕಾಗಿರುವ ಗಗನ್​ಯಾನ್ ನ ಸಂಭಾವ್ಯ ಗಗನಯಾತ್ರಿಗಳಾಗಿದ್ದಾರೆ. ಕೋವಿಡ್ ಕಾರಣಕ್ಕೆ ಉಡಾವಣೆ ಮುಂದೂಡಲಾಗಿದ್ದು, ಹೊಸ ದಿನಾಂಕ ಇನ್ನೂ ನಿಗದಿಯಾಗಿಲ್ಲ. (ಏಜೆನ್ಸೀಸ್)

    ಟಿಕ್​ಟಾಕ್​ನ ಚೀನೀ ಕಂಪನಿ ಜತೆಗಿನ ವಹಿವಾಟು ನಿಷೇಧಿಸಿದ ಟ್ರಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts