More

    ಟಿಕ್​ಟಾಕ್​ನ ಚೀನೀ ಕಂಪನಿ ಜತೆಗಿನ ವಹಿವಾಟು ನಿಷೇಧಿಸಿದ ಟ್ರಂಪ್​

    ವಾಷಿಂಗ್ಟನ್​: ಚೀನಾ ವಿರುದ್ಧದ ನಿಲುವನ್ನು ಹಂತ ಹಂತವಾಗಿ ಬಿಗಿಗೊಳಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಗುರುವಾರ ಇನ್ನಷ್ಟು ತೀವ್ರಗೊಳಿಸಿದ್ದಾರೆ. ಟಿಕ್​ಟಾಕ್​ ಕಂಪನಿ ಜತೆಗಿನ ವಹಿವಾಟನ್ನು ಸಂಪೂರ್ಣ ನಿಷೇಧಿಸಿ ಎಕ್ಸಿಕ್ಯೂಟಿವ್ ಆರ್ಡರ್​ಗೆ ಅವರು ಸಹಿ ಹಾಕಿದ್ದಾರೆ.

    ಇದರೊಂದಿಗೆ ಮುಂದಿನ 45 ದಿನದೊಳಗಾಗಿ ಚೀನೀ ಕಂಪನಿ ಬೈಟ್ ಡ್ಯಾನ್ಸ್​ ಜತೆಗಿನ ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಸಲುವಾಗಿ ಟಿಕ್​ಟಾಕ್, ವಿಚಾಟ್​ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಆ್ಯಪನ್ನು ಚೀನಾದ ಕಮ್ಯೂನಿಸ್ಟ್ ಪಾರ್ಟಿ ಸುಳ್ಳು ಸುದ್ದಿ ಹರಡುವುದಕ್ಕೋಸ್ಕರ ಬಳಸುವ ಸಾಧ್ಯತೆ ಇದೆ. ಹೀಗಾಗಿ ಅದರ ಜತೆಗಿನ ವ್ಯವಹಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ ಎಂಬ ಅಂಶ ಎಕ್ಸಿಕ್ಯೂಟಿವ್ ಆರ್ಡರ್​ನಲ್ಲಿದೆ.

    ಇದನ್ನೂ ಓದಿ: ಭಾರತ, ಅಮೆರಿಕ ಜತೆಗಿನ ಟೆನ್ಶನ್ ಕಡೆಗಣಿಸಿ ಕ್ಷಿಪಣಿ ಪರೀಕ್ಷಿಸಿದ ಚೀನಾ

    ಅಮೆರಿಕ- ಚೀನಾ ಸಂಬಂಧ ದಿನೇದಿನೆ ಹದಗೆಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ವಿಗ್ನತೆ ಮೂಡಿದೆ. ಇದೇ ರೀತಿ, ಚೀನಾ ತನ್ನ ನೀತಿಯಿಂದಾಗಿ ಭಾರತದ ಜತೆಗೂ ಉದ್ವಿಗ್ನ ಸಂಬಂಧವನ್ನು ಹೊಂದಿದ್ದು ಯುದ್ಧ ಸನ್ನಿವೇಶದತ್ತ ಮುನ್ನಡೆಯುತ್ತಿದೆ. (ಏಜೆನ್ಸೀಸ್)

    ಶ್ರೀಲಂಕಾ ಸಂಸತ್​ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸ ಸರ್ಕಾರಕ್ಕೆ ಭಾರಿ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts