More

    ಗದರ್​-2 ಚಿತ್ರಕ್ಕೆ ಆಸ್ಕರ್​ ಪ್ರಶಸ್ತಿ ಪಡೆದುಕೊಳ್ಳುವ ಎಲ್ಲಾ ಅರ್ಹತೆಗಳಿವೆ: ನಿರ್ದೇಶಕ ಅನಿಲ್​ ಶರ್ಮಾ

    ಮುಂಬೈ: ನಟ, ಸಂಸದ ಸನ್ನಿ ಡಿಯೋಲ್​-ಅಮಿಶಾ ಪಟೇಲ್ ಅಭಿನಯದ ಗದರ್​​-2 ಚಿತ್ರದ ಅಬ್ಬರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಬಾಕ್ಸ್​​ ಆಫೀಸ್​ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದು, ಹಿಂದಿನ ಚಿತ್ರಗಳು ಬರೆದಿದ್ದ ದಾಖಲೆಗಳನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾಗಿದೆ.

    ಸನ್ನಿ ಡಿಯೋಲ್​ ವೃತ್ತಿ ಬದುಕಿಗೆ ಹೊರ ತಿರುವನ್ನು ನೀಡಿದ ಗದರ್​-2 ಚಿತ್ರ ಬಾಕ್ಸ್ ಆಫೀಸ್​ ಕಲೆಕ್ಷನ್​​ ಅಲ್ಲದೇ ಪ್ರಶಸ್ತಿಯ ವಿಚಾರವಾಗಿಯೂ ಸದ್ದು ಮಾಡುತ್ತಿದೆ.

    ಈ ಕುರಿತು ಮಾತನಾಡಿರುವ ನಿರ್ದೇಶಕ ಅನಿಲ್​ ಶರ್ಮಾ ಗದರ್-2 ಸಿನಿಮಾನವನ್ನು ಆಸ್ಕರ್​ ಪ್ರಶಸ್ತಿಯ ನಾಮಿನೇಷನ್​​ಗೆ ಕಲಿಸಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. 2001ರಲ್ಲಿ ಬಿಡುಗಡೆಯಾಗಿದ್ದ ಗದರ್​​ ಏಕ್​ ಪ್ರೇಮ್​ ಕಥಾ ಚಿತ್ರವನ್ನು ಆಸ್ಕರ್​ ನಾಮಿನೇಷನ್​ಗೆ ಕಳಿಸಬೇಕೆಂಬ ಆಸೆಯಿದ್ದರು ಕಾರಣಾಂತರಗಳಿಂದ ಅದು ಈಡೇರಲಿಲ್ಲ.

    ಇದನ್ನೂ ಓದಿ: ಏಷ್ಯಾಕಪ್​ 2023; ಭಾರತ ಫೈನಲ್ ಪ್ರವೇಶಿಸುವುದು ನಿಶ್ಚಿತ: ರೋಹಿತ್​ ಶರ್ಮಾ

    ಗದರ್ ಚಿತ್ರವು ಆಸ್ಕರ್​ಗೆ ನಾಮನಿರ್ದೇಶನಗೊಳ್ಳುವ ಎಲ್ಲಾ ಅರ್ಹತೆಗಳನ್ನು ಹೊಂದಿತ್ತು, ಈ ಸಿನಿಮಾದಲ್ಲಿ ಭಾರತ-ಪಾಕಿಸ್ತಾನ ವಿಭಜನೆಯನ್ನು ಬೇರೆಯದೆ ರೀತಿಯಲ್ಲಿ ಹೇಳಲಾಗಿದೆ. ಅದೇ ರೀತಿ ಗದರ್-2 ಚಿತ್ರದಲ್ಲಿಯೂ ಸಹ ನಾವು ನೈಜ ಕಥೆಯನ್ನೇ ಆಯ್ದುಕೊಂಡಿದ್ದೇವೆ. ಆದರೆ, ಜನರಿಗೆ ತಿಳಿಸುವಾಗ ಹಲವು ಮಾರ್ಪಾಡುಗಳನ್ನು ಮಾಡಿದ್ದೇವೆ.

    ಈ ನಿಟ್ಟಿನಲ್ಲಿ ಗದರ್​-2 ಚಿತ್ರವು ಆಸ್ಕರ್​ ಪ್ರಶಸ್ತಿಯ ನಾಮಿನೇಷನ್​ಗೆ ಆಯ್ಕೆಯಾಗಬೇಕೆಂದ ಇರಾದೆ ಇದೆ. ಜನರ ಮೆಚ್ಚುಗೆಗೆ ಪಾತ್ರವಾದ ಸಿನಿಮಾ ಕೂಡ ಪ್ರಶಸ್ತಿಯನ್ನು ಪಡೆದುಕೊಳ್ಳುವುದಿಲ್ಲ. ನಾನು ಹಲವು ಬಾರಿ ಪ್ರಶಸ್ತಿಗೆ ಅರ್ಹನಾದರೂ ಯಾವುದೇ ಪ್ರಶಸ್ತಿ ಲಭ್ಯವಾಗಲಿಲ್ಲ. ಪ್ರೇಕ್ಷಕರಿಂದ ಭೇಷ್​​​ ಎನ್ನಿಸಿಕೊಂಡಿರುವ ಗದರ್-2 ಚಿತ್ರಕ್ಕೆ ಈ ಬಾರಿಯಾದರೂ ಪ್ರಶಸ್ತಿ ಲಭಿಸುತ್ತ ಎಂಬುದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts