More

    ಹೊದಿಕೆ ನೀಡುವ ಮೂಲಕ ಹೊಸ ವರ್ಷ ಬರಮಾಡಿಕೊಂಡ ಎನ್ ಎಸ್ ಎಸ್ ಸ್ವಯಂಸೇವಕರು.

    ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಜನರು ಬಟ್ಟೆ ಮತ್ತು ಹೊದಿಕೆ ಕೊರತೆಯಿಂದ ಚಳಿಯಲ್ಲಿ ಬಳಲಿ ಸಾಯುತ್ತಾರೆ ಕಾರಣ ಕ್ಷೀಣಿಸುತ್ತಿರುವ ತಾಪಮಾನ ಮತ್ತು ಚಳಿಗಾಲದ ಚಳಿ ಈ ಹಿನ್ನೆಲೆಯಲ್ಲಿ ಡಿಸೆಂಬರ್ ಹಾಗೂ ಜನವರಿ ಆರಂಭದಲ್ಲಿ ಬಹಳಷ್ಟು ಚಳಿ ಇರುತ್ತದೆ ಈ ಕೊರವ ಚಳಿಯಿಂದ ಅನೇಕ ನಿರಾಶ್ರಿತರು ಅಸಹಾಯಕರು ಸಂಕಷ್ಟದಲ್ಲಿ ತಮ್ಮ ಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ ಇದನ್ನು ಗಮನಿಸಿದ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ. ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕ ಸೇವಕರು ಮಾನವ ಜೀವನದ ಪವಿತ್ರ ಕರ್ತವ್ಯವಾದ ಉಚಿತ ಹೊದಿಕೆ ನೀಡುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು. 

    ಹೊಸ ವರ್ಷವೆಂದರೆ ಇಂದಿನ ಯುವ ಜನಾಂಗ ಮೋಜು ಮಸ್ತಿಗಳೊಂದಿಗೆ ತಮ್ಮ ಆರೋಗ್ಯ ಹಾಗೂ ಹಣವನ್ನು ಹಾಳು ಮಾಡಿಕೊಳ್ಳುತ್ತಾರೆ ಮೋಜು ಮಸ್ತಿಯ ಹುರುಪು ಹೊಸ ವರ್ಷದ ಮರುದಿನ ಕುಸಿದು ಹೋಗಿರುತ್ತದೆ ಇವೆಲ್ಲವನ್ನ ಗಮನಿಸಿದ ಕಾಮರ್ಸ್ ಕಾಲೇಜಿನ ಎನ್ಎಸ್ಎಸ್ ಸ್ವಯಂಸೇವಕರು ತಾವೇ ವೈಯಕ್ತಿಕವಾಗಿ ಹಣವನ್ನ ಸಂಗ್ರಹಿಸಿ ಚಳಿಯಲ್ಲಿ ಬಳಲುವ ನಿರಾಶ್ರಿತರಿಗೆ, ಅಸಹಾಯಕರಿಗೆ, ಇಡೀ ಶಹರವನ್ನು ಶುಚಿಯಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಹಾಗೂ ರಸ್ತೆ ಬದಿಯಲ್ಲಿ ವಾಸಿಸುತ್ತಿರುವ ನಿರ್ಗತಿಕರಿಗೆ ಹೊದಿಕೆ ನೀಡುವ ಮೂಲಕ ಹೊಸ ವರ್ಷ ಬರಮಾಡಿಕೊಂಡಿರುವುದು ಒಂದು ಮಾದರಿ ಕಾರ್ಯಕ್ರಮಕ್ಕೆ ಸ್ವಯಂಸೇವಕರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

    ಸುಮಾರು ಮೂವತ್ತಕ್ಕೂ ಹೆಚ್ಚು ಸ್ವಯಂಸೇವಕ ಸೇವಕಿಯ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ನಗರಸಭೆಯ ಪ್ರಮುಖ ಬೀದಿಗಳಿಗೆ ತಾವೇ ಇಳಿದು ಮಧ್ಯರಾತ್ರಿ ಹಾಗೂ ಮುಂಜಾನೆ ಬೆಳಗಿನ ಸಮಯದಲ್ಲಿ ಅವರಿರುವ ಸ್ಥಳಕ್ಕೆ ಹೋಗಿ ಹೊದಿಕೆಗಳನ್ನ ವಿತರಿಸಿದರು ನಾವು ಎಷ್ಟು ಕೊಡುತ್ತೇವೆ ಎಂಬುದಲ್ಲ ಆದರೆ ಕೊಡುವಲ್ಲಿ ನಾವು ಎಷ್ಟು ಪ್ರೀತಿಯನ್ನ ಇಡುತ್ತೇವೆ ಎಂಬುದು ಈ ಕಾರ್ಯದ  ಮೂಲಕ ಸ್ವಯಂಸೇವಕರು ಮಾದರಿ ಕಾರ್ಯವನ್ನು ಕೈಗೊಂಡಿದ್ದಾರೆ. 

    ವೀರೇಶ್ವರ ಪುಣ್ಯಶ್ರಮದ ಅನಾಥ ಮಕ್ಕಳಿಗೆ ಹಾಗೆ ಚಳಿ ಮಳೆ ಎನ್ನದೆ ನಾವು ಎಳುವ ಮೊದಲೇ ನಗರವನ್ನು ಸುಚಿಗೊಳಿಸುವಲ್ಲಿ ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ನಗರಸಭೆಯ ಸುಮಾರು ಮೂವತ್ತಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಹೊದಿಕೆಗಳನ್ನ ನೀಡಲಾಗಿದ್ದು ನಾವು ಮಾಡುವ ಕಾರ್ಯ ಸಣ್ಣದು ಆದರೆ ನಮ್ಮ ಮನೆಯ ಸುತ್ತಮುತ್ತಲಿನ ಆವರಣವನ್ನು ಶುಚಿ ಇಡುವುದರೊಂದಿಗೆ ನಮ್ಮ ಆರೋಗ್ಯವನ್ನು ಆರಾಮಾಗಿಡಲು ಸಹಕಾರ ನೀಡಿದ ಈ ಕಾರ್ಮಿಕರನ್ನು ಗೌರವಿಸುವ ಒಂದು ಪುಟ್ಟ ಸೇವೆ ಇದಾಗಿದೆ.

    ಮೂರು ದಿನದ ಈ ವಿನೂತನ ಕಾರ್ಯಕ್ರಮಕ್ಕೆ ವೀರೇಶ್ವರ ಪುಣ್ಯಶ್ರಮದ ಪರಮ ಪೂಜ್ಯ ಡಾ. ಕಲ್ಲಯ್ಯನವರು ಹಾಗೂ ಆದರ್ಶ ಶಿಕ್ಷಣ ಸಂಸ್ಥೆಯ ಚೇರ್ಮನ್ ಸಿಎ ಶ್ರೀ ಆನಂದ್ ಪೋತ್ನಿಸ್, ಖಜಾಂಚಿ ಮುಕುಂದ್ ಪೋತ್ನಿಸ್, ಮಹಾವಿದ್ಯಾಲಯದ ಉಪ ಪ್ರಾಚಾರ್ಯರು ಡಾ. ವಿ ಟಿ ನಾಯ್ಕರ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ ಬಿ ಪಿ ಜೈನರ, ದೈಹಿಕ ನಿರ್ದೇಶಕರಾದ ಶ್ರೀ ಆದಿತ್ಯ ಜೋಶಿ,  ವಿದ್ಯಾರ್ಥಿ ಮುಖಂಡನಾದ ಕು. ಮನೋಜ್ ದಲಬಂಜನ್ ಈ ಒಂದು ಕಾಲದಲ್ಲಿ ಉಪಸ್ಥಿತರಿದ್ದರು. ಈ ಒಂದು ವಿನೂತನ ಕಾರ್ಯಕ್ರಮಕ್ಕೆ ಆದರ್ಶ ಶಿಕ್ಷಣ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು,  ಪದಾಧಿಕಾರಿಗಳು ಮಹಾವಿದ್ಯಾಲಯದ ಪ್ರಾಚಾರ್ಯರು , ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts