More

    ಗದಗ ವಿಧಾನಸಭಾ ಶಾಸಕರೇ ಮತದಾರರಿಗೆ ಉತ್ತರ ಕೋಡಿ: ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ

    ವಿಜಯವಾಣಿ ಸುದ್ದಿಜಾಲ ಗದಗ
    ಕಾಂಗ್ರೆಸ್​ ಸರ್ಕಾರ ರಚನೆಯಾಗಿ ಹಲವು ತಿಂಗಳು ಕಳೆದಿವೆ. ರಾಜ್ಯದ ಜನತೆ ಬರಗಾಲದ ಚಾಯೆಯಲ್ಲಿ ಬೆಂದು ಹೋಗುತ್ತಿದ್ದರೂ ಬರ ಪರಿಹಾರ ನೀಡುವಲ್ಲಿ ಕಾಂಗ್ರೆಸ್​ ಸರ್ಕಾರ ವಿಲವಾಗಿದೆ. ಜನಪ್ರತಿದಿಗಳು ಈ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ ಎಂದು ಬಿಜಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಆರೋಪಿಸಿದರು.
    ಬರಗಾಲ ಕುರಿತು ಕಾಂಗ್ರೆಸ್​ ಸರ್ಕಾರ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಮದು ಆರೋಪಿಸಿ ಬಿಜೆಪಿ ಜಿಲ್ಲಾ ಟಕದಿಂದ ಗದಗ ಕ್ಷೇತ್ರದ ಶಾಸಕ, ಸಚಿವ ಎಚ್​. ಕೆ.ಪಾಟೀಲರಿಗೆ “ೇತ್ರದ ಶಾಸಕರೆ ನಿಮ್ಮ ಅಧಿಕೃತ ಕಚೇರಿ ವಿಳಾಸ ಕೊಡಿ’ ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪತ್ರ ನೀಡಿ, ಕಾಂಗ್ರೆಸ್​ ಸಕಾರದ ವಿರುದ್ಧ ರಾಜು ಕುರಡಗಿ ಆರೋಪದ ಸುರಿಮಳೆ ಗೈದರು.
    ಬರಪರಿಹಾರ ೂಷಣೆ ಆಗಿಲ್ಲ. ರೈತರಿಗೆ ನೀಡುತ್ತಿರುವಂತ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಲಾಗಿದೆ. ಧನ&ಕರುಗಳಿಗೆ ಮತ್ತು ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ನಗರದಲ್ಲಿ 30 ವರ್ಷಗಳಿಂದ ಕುಡಿಯುವ ನೀರಿನ ಅಭಾವವಿದ್ದರೂ ಸಹಿತ ಇಲ್ಲಿಯವರೆಗೆ ಜನತೆಗೆ ಕುಡಿಯುವ ನೀರಿನ ಸುಳ್ಳು ಭರವಸೆ ನೀಡಲಾಗುತ್ತಿದೆ. ಕಾಂಗ್ರೆಸ್​ ಉದ್ಘಾಟನೆ ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಿಂದಿನ ಸರ್ಕಾರವಿದ್ದಾಗ ಉದ್ಘಾಟನೆ ಹಂತಕ್ಕೆ ಬಂದ ಕಾಮಗಾರಿಗಳೇ ಆಗಿರುತ್ತವೆ. ಅಧಿಕಾರಕ್ಕೆ ಬಂದು ಹಲವು ತಿಂಗಳುಗಳೇ ಕಳೆದರು ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಯಾವುದೆ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಆರೋಪಿಸಿದರು.
    ಈ ವೇಳೆ ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ, ಗದಗ&ಬೆಟಗೇರಿ ನಗರಸಭೆ ಅಧ್ಯೆ ಉಷಾದಾಸರ, ಉಪಾಧ್ಯೆ ಸುನಂದಾ ಬಾಕಳೆ, ಜಿಲ್ಲಾ ಪ್ರಧಾನ ಕಾರ್ಯದಶಿರ್ ಪಕ್ಕಿರೇಶ ರಟ್ಟಿಹಳ್ಳಿ, ಎಂ.ಎಸ್​.ಕರೀಗೌಡ್ರ, ಎಂ.ಎಂ.ಹಿರೇಮಠ, ಜಗನ್ನಾಥಸಾ ಭಾಂಡಗೆ, ಅಶೋಕ ಸಂಕಣ್ಣವರ, ಅನೀಲ ಅಬ್ಬಿಗೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts