More

    ಗದಗ-ಹಾವೇರಿ ಲೋಕಸಭೆ ಕ್ಷೇತ್ರ, ಪಕ್ಷಕ್ಕೆ ಸೀಮಿತವಾಗದ ಮತದಾರ

    ಶಿವಾನಂದ ಹಿರೇಮಠ, ಗದಗ
    ಪಕ್ಷಕ್ಕೆ ಸೀಮಿತವಾಗದ ಮತದಾರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಭಿನ್ನ ಪಕ್ಷಗಳಿಗೆ ಮತ ಚಲಾಯಿಸುವ ಮೂಲಕ ರಾಜಕೀಯ ಪಕ್ಷಗಳ ಊಹೆಗಳನ್ನು ತಲೆಕೆಳಗಾಗಿಸಿರುವುದು ಕಳೆದ ದಶಕದ ಹಾವೇರಿ, ಗದಗ ವಿಧಾನಸಭಾ ಹಾಗೂ ಲೋಕಸಭಾ ಚುನಾವಣಾ ಲಿತಾಂಶದಿಂದ ಸ್ಪಷ್ಟವಾಗುತ್ತಿದೆ. ವಿಧಾನಸಭಾ ಕ್ಷೇತ್ರದಲ್ಲಿ ಗೆಲುವುಸಾಧಿಸಿದ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಗಿರುವುದು ಲಿತಾಂಶಗಳಿಂದ ಸ್ಪಷ್ಟವಾಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಸ್ಥಳಿಯ ನಾಯಕರ ಪ್ರಭಾವ, ಸ್ಥಳಿಯ ವಿಷಯಗಳು, ಜಾತಿ, ಧರ್ಮ, ಒಲೈಕೆ ಗಳಂತಹ ಪ್ರಸ್ತಾಪಗಳು ಮತದಾರನ ಮೇಲೆ ಪ್ರಭಾವ ಬೀರಿದ್ದು, ಲೋಕಸಭೆಯಲ್ಲಿ ದೇಶದ ರಕ್ಷಣೆ, ರಾಷ್ಟ್ರೀಯತೆ, ಸಮಗ್ರತೆ ದೃಷ್ಟಿಯಿಂದ ಮತದಾರ ಮತ ಚಲಾಯಿಸಿರುವುದು ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ. ಮತದಾರನ ಒಳಗುಟ್ಟು ಅರಿಯದ ರಾಜಕೀಯ ಪಕ್ಷಗಳಿಗೆ ಲಿತಾಂಶ ಊಹಿಸಲು ಅಸಾಧ್ಯವಾಗಿದೆ.

    2008ಕ್ಕೂ ಪೂರ್ವದಲ್ಲಿ ಮತ್ತು 2008ರಲ್ಲಿ ಕ್ಷೇತ್ರ ಪುನವಿರ್ಂಗಡನೆ ನಂತರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಜರುಗಿದ ನಂತರದ ವರ್ಷದಲ್ಲೇ ಲೋಕಸಭೆ ಚುನಾವಣೆ ಎದುರಾಗಿದೆ. ಈ ಸಂದರ್ಭದಲ್ಲಿ ಪಕ್ಷಕ್ಕೆ ಸೀಮಿತವಾಗಿರದ ಮತದಾರ ವಿಧಾನಸಭಾ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ, ಲೋಕಸಭೆ ಚುನಾವಣೆಯಲ್ಲಿ ಮತ್ತೊಂದು ಪಕ್ಷಕ್ಕೆ ಮತದಾನ ಮಾಡುವ ಮೂಲಕ ತನ್ನ ಪ್ರಭುದ್ಧತೆ ಮರೆದಿದ್ದಾರೆ. ಹೀಗಾಗಿ ವಿಧಾನಸಭೆಯಲ್ಲಿ ಗೆಲವು ಸಾಧಿಸಿದ ಅಭ್ಯಥಿರ್ಗಳ ಪಕ್ಷದ ಪರವಾಗಿ ಲೋಕಸಭೆಯಲ್ಲಿ ಅದೇ ಪಕ್ಷಕ್ಕೆ ಮತ ಚಲಾಯಿಸುತ್ತಾರೆ ಎಂಬುದನ್ನು ಪಕ್ಷಗಳು ನಂಬುವಂತಿಲ್ಲ. 2013ರ ನಂತರ ಭಿನ್ನ ಸ್ವರೂಪದ ಲಿತಾಂಶದಿಂದ ಈ ಬಾರಿ ಎಚ್ಚರ ವಹಿಸಿರುವ ರಾಜಕೀಯ ಮುಖಂಡರು ಪ್ರಚಾರ ಮತ್ತು ಸಮೀೆವೇಳೆ ಯಾವುದನ್ನು ನಿರ್ಲಸುತ್ತಿಲ್ಲ ಎಂಬುದು ಸತ್ಯ.

    ಮುನ್ನಡೆ/ಹಿನ್ನಡೆ(2013/2014)
    2013ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕ ಬಂದ ಕಾಂಗ್ರೆಸ್​ ಪಕ್ಷ ಬಿಜೆಪಿ, ಕೆಜೆಪಿ ಹಾಗೂ ಬಿಎಸ್​ಆರ್​ ಪಕ್ಷಗಳ ಒಳಜಗಳದ ಲಾಭ ಪಡೆಯಲು ವಿಲವಾಯಿತು. ಹಾವೇರಿ ಲೋಕಸಭಾ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳಲ್ಲಿ 2013ರ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಹಾಗೂ ಬಿಎಸ್​ಆರ್​ ಪಕ್ಷಗಳು ಸೇರಿ ಪಡೆದ ಒಟ್ಟು 393563 ಮತಗಳಿಗಿಂತ ಕಾಂಗ್ರೆಸ್​ ಪಕ್ಷವು ಒಟ್ಟು 500753 ಪಡೆದು 107190 ಮತಗಳ ಮುನ್ನಡೆ ಸಾಧಿಸಿತ್ತು. ಆದರೆ, 2014ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಇವೇ 8 ಕ್ಷೇತ್ರದಲ್ಲಿ ಕಾಂಗ್ರೆಸ್​ 476079 ಮತಗಳನ್ನು ಪಡೆದು 87378 ಮತಗಳ ಹಿನ್ನಡೆ ಸಾಧಿಸಿದೆ.
    ಬಿಜೆಪಿ ಜತೆಗೆ ಮುನಿಸಿಕೊಂಡಿದ್ದ ಬಿ.ಎಸ್​. ಯಡಿಯೂರಪ್ಪ ಅವರು ಕೆಜೆಪಿ ಪಕ್ಷವನ್ನು ಮತ್ತು ಶ್ರಿರಾಮುಲು ಬಿಎಸ್​ಆರ್​ ಪಕ್ಷವನ್ನು ಸ್ಥಾಪಿಸಿ ಸ್ಪಧಿರ್ಸಿದ ಪರಿಣಾಮ ಬಿಜೆಪಿಗೆ 2013ರ ಚುನಾವಣೆಯಲ್ಲಿ ಬಹುದೊಡ್ಡ ಪೆಟ್ಟು ಬಿದ್ದಿತ್ತು. ರಾಜ್ಯದ 36 ಕ್ಷೇತ್ರಗಳಲ್ಲಿ ಕೆಜಿಪಿ 2ನೇ ಸ್ಥಾನ ಅಲಂಕರಿಸಿ ಬಿಜೆಪಿ ಸೋಲಿಗೆ ನೇರ ಹೊಣೆ ಆಗಿತ್ತು. ಬಿಎಸ್​ಆರ್​ ಪಕ್ಷವೂ ಕೂಡ 3 ಕ್ಷೇತ್ರಗಳಲ್ಲಿ 2ನೇ ಸ್ಥಾನ ಗಳಿಸಿತ್ತು. ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿಯ 5 ವಿಧಾನಸಭಾ ಕ್ಷೇತ್ರದಲ್ಲಿ 4ರಲ್ಲಿ ಕಾಂಗ್ರೆಸ್​, ಗದಗ ಜಿಲ್ಲೆಯ 3 ರಲ್ಲಿ 3 ಕ್ಷೇತ್ರದಲ್ಲಿ(ನರಗುಂದ& ಬಾಗಲಕೋಟೆ ಕ್ಷೇತ್ರ) ಕಾಂಗ್ರೆಸ್​ ಅಭ್ಯಥಿರ್ಗಳು ಜಯಸಾಧಿಸಿದ್ದರು. ಆದರೆ, ಮರುವರ್ಷವೆ ಜರುಗಿದ(2014) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಳಜಗಳ ಲಾಭ ಪಡೆಯಲು ಕಾಂಗ್ರೆಸ್​ ವಿಲವಾಯಿತು.

    ಮುನ್ನಡೆ/ಹಿನ್ನಡೆ(2018/2019)
    ವಿಧಾನಸಭೆಗೂ, ಲೋಕಸಭೆ ಮತದಾನಕ್ಕೂ ಮತದಾನ ಭಿನ್ನವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಲೋಕಸಭೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 5, ಕಾಂಗ್ರೆಸ್​ 2 ಹಾಗೂ 1 ಪಕ್ಷೇತರ ಅಭ್ಯಥಿರ್ ಗೆಲವು ಸಾಧಿಸಿದ್ದರು. ಕಾಂಗ್ರೆಸ್ಸಿಗಿಂತ ಬಿಜೆಪಿ ಪಕ್ಷವು 63444 ಮತಗಳನ್ನು ಅಧಿಕ ಪಡೆದುಕೊಂಡಿತ್ತು. ಆದರೆ, 2014ರ ಲೋಕಸಭೆಗೆ ಹೋಲಿಸಿದರೆ 2018ರ ವಿಧಾನಸಭೆಯಲ್ಲಿ ಒಟ್ಟಾರೆ ಅಂದಾಜು 25000 ಮತಗಳನ್ನು ಬಿಜೆಪಿ ಕಳೆದುಕೊಂಡಿತ್ತು. ಮರುವರ್ಷವೇ(2019) ಜರುಗಿದ ಲೋಕಸಭೆ ಚುನಾವಣೆಯಲ್ಲಿ 1.39 ಲಕ್ಷಕ್ಕೂ ಅಧಿಕ ಮತಗಳನ್ನು ಅಂತರದಲ್ಲಿ ಬಿಜೆಪಿ ಗೆಲವು ಸಾಧಿಸಿತ್ತು.

    2023ರ ಚುನಾವಣೆ:
    2023ರ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಶಿರಹಟ್ಟಿ ಹೊರತುಪಡಿಸಿ ಇನ್ನೂಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರಿದ್ದಾರೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಪಕ್ಷವು ಬಿಜೆಪಿಗಿಂತ ಒಟ್ಟಾರೆ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದೆ. 2024ರ ಲೋಕಸಭೆ ಚುನಾವಣೆಯಲ್​ಇಲ ಮತದಾರ ಯಾವ ಪಕ್ಷಕ್ಕೆ ವಾಲುತ್ತಾನೆ ಎಂಬುದು ನಿಗೂಢ.

    ಬಾಕ್ಸ್​:
    ಗದಗ-ಹಾವೇರಿ ಲೋಕಸಭೆ ಕ್ಷೇತ್ರ (8 ವಿಧಾನಸಭಾ ಕ್ಷೇತ್ರ):

    ಚುನಾವಣೆ – ಮುನ್ನಡೆ
    2013 ವಿಧಾನಸಭೆ – 1 ಲಕ್ಷ ಮತಗಳ ಕಾಂಗ್ರೆಸ್​ ಮುನ್ನಡೆ
    2014 ಲೋಕಸಭೆ – 87 ಸಾವಿರ ಮತಗಳಿಂದ ಬಿಜೆಪಿ ಮುನ್ನಡೆ
    2018ರ ವಿಧಾನಸಭೆ – 63 ಸಾವಿರ ಮತಗಳಿಂದ ಬಿಜೆಪಿ ಮುನ್ನಡೆ
    2019ರ ಲೋಕಸಭೆ – 1.39 ಲಕ್ಷ ಮತಗಳ ಬಿಜೆಪಿ ಮುನ್ನಡೆ
    2024ರ ವಿಧಾನಸಭೆ – 1 ಲಕ್ಷಕ್ಕೂ ಅಧಿಕ ಮತಗಳಿಂದ ಕಾಂಗ್ರೆಸ್​ ಮುನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts