More

    ಜಿಲ್ಲಾ ಕಸಾಪದಲ್ಲಿ ‘ಮಾಸದ ಮಾತು’ ಕಾರ್ಯಕ್ರಮ

    ವಿಜಯವಾಣಿ ಸುದ್ದಿಜಾಲ ಗದಗ
    ವೇದಾಗಮ ಪುರಾಣಗಳಲ್ಲಿ ಹೇಳಿರುವಂತೆ ಬದುಕಿನ ನಿಜವಾದ ಅರ್ಥವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಸುಲಭ ಮಾರ್ಗವೇ “ಪುರಾಣ ಪ್ರವಚನ’ ಎಂಬುದನ್ನು ಅರಿತು 24 ಪುರಾಣಗಳನ್ನು ರಚಿಸಿರುವ ಪಂ. ರಾಜಗುರು ಗುರುಸ್ವಾಮಿ ಕಲಿಕೇರಿ ಅವರದ್ದು ಬಹುಮುಖ ವ್ಯಕ್ತಿತ್ವ ಎಂದು ಪ್ರಾಧ್ಯಾಪಕಿ ಡಾ. ರೇಖಾ ನೀರಲಗಿ ಹೇಳಿದರು.
    ಜಿಲ್ಲಾ ಕಸಾಪದಲ್ಲಿ ಶನಿವಾರ ಆಯೋಜಿಸಿದ್ದ “ಮಾಸದ ಮಾತು ಕಾರ್ಯಕ್ರಮ’ದಲ್ಲಿ ಉಪನ್ಯಾಸ ನೀಡಿ, ಪಂ. ಕಲಿಕೇರಿಯವರು ಬರೆದ ಪುರಾಣಗಳ ಅಧ್ಯಯನದ ಮೇಲೆ ಮಹಾಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್​ ಪಡೆದವರು ಹಲವರಿದ್ದಾರೆ. ಪಂ. ಗುರುಸ್ವಾಮಿ ಕಲಿಕೇರಿಯವರು ಬರೆದ ಪುರಾಣಗಳು ವ್ಯಕ್ತಿಗಳನ್ನು ಅವರ ಲೀಲೆಗಳನ್ನು, ಲೋಕಕಲ್ಯಾಣದ ಮಾಹಿತಿಗಳನ್ನು, ಜನಮಾನಸಕ್ಕೆ ಒಳಿತಾಗುವ ಬೋಧನೆಗಳನ್ನು ಒಳಗೊಂಡ ಪುರಾಣಗಳಾಗಿವೆ. ಹೀಗಾಗಿ ಇವು ಸಮಾಜಕ್ಕೆ ತೀರಾ ಹತ್ತಿರ ಆಗಿರುವುದರಿಂದ ಪುರಾಣಗಳನ್ನು ಕೇಳಬೇಕು. ಅದರಲ್ಲಿ ಬೋಧಿಸಿದಂತೆ ನಡೆಯಬೇಕು ಎಂದರು
    ಡಾ. ಪಂ. ರಾಜಗುರು ಗುರುಸ್ವಾಮಿ ಕಲಿಕೇರಿ ಮಾತನಾಡಿ, ನಾವು ಕೇವಲ ಮುಲ್ಕಿ ಪರೀೆ ಕಲಿತಿದ್ದೇವೆ. ಬಾಲ್ಯದಲ್ಲಿಯೇ ವೀರೇಶ್ವರ ಪುಣ್ಯಾಶ್ರಮದ ಡಾ. ಪುಟ್ಟರಾಜ ಗವಾಯಿಗಳ ಶಿಷ್ಯತ್ವ ಹಾಗೂ ಅವರ ದೀವ್ಯ ವಾಣಿಯಿಂದ ಬದುಕಿನ ದಿಕ್ಕೇ ಬದಲಾಯಿತು. ಸಾಹಿತ್ಯ , ಸಂಗೀತ, ನಾಟಕ ೇತ್ರದಲ್ಲಿ ಏನಾದರೂ ಸಾಧನೆ ಮಾಡಿದ್ದೇವೆ ಎಂದರೆ ಅದು ಪುಟ್ಟರಾಜ ಗುರುಗಳ ಕೃಪೆ ಎಂದರು. ಕಾರ್ಯಕ್ರಮದಲ್ಲಿ ಡಾ. ಪಂ. ರಾಜಗುರು ಗುರುಸ್ವಾಮಿ ಕಲಿಕೇರಿಯವರನ್ನು ಸನ್ಮಾನಿಸಲಾಯಿತು.
    ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಅಧ್ಯತೆ ವಹಿಸಿ ಮಾತನಾಡಿ ಗದುಗಿನ ಭಾಗ್ಯವೆಂಬಂತೆ ಪಂ. ಗುರುಸ್ವಾಮಿ ಕಲಿಕೇರಿಯವರನ್ನು ವಿಶ್ವವಿದ್ಯಾಲಯ ಗುರುತಿಸಿ ಗೌರವ ಡಾಕ್ಟರೇಟ್​ ನೀಡಿರುವುದು ಕಸಾಪಕ್ಕೆ ಸಂತೋಷವಾಗಿದೆ ಎಂದರು.
    ಡಾ. ನಾಗರಾಜ ಬಳಿಗೇರ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಾ. ದತ್ತಪ್ರಸನ್ನ ಪಾಟೀಲ, ವೇದಮೂತಿರ್ ಮಹೇಶ್ವರಸ್ವಾಮಿ ಹೊಸಳ್ಳಿಮಠ, ಕೆ.ಎಚ್​.ಬೇಲೂರ, ಚಂದ್ರಶೇಖರ ವಸ್ತ್ರದ, ಅರ್ಜುನ ಗೊಳಸಂಗಿ, ನಾಗಪ್ಪ ಸುರಳಿಕೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts