More

    ಕನ್ನಡ ಮನೆ, ಮನಗಳಲ್ಲಿ ಬೆಳಗಲಿ

    ಚಿತ್ರದುರ್ಗ: ಕನ್ನಡದ ಸುಭದ್ರತೆಗೆ ಅಡಿಪಾಯ ಹಾಕಿಕೊಟ್ಟ ಹಿರಿಯರ ಮಾರ್ಗದರ್ಶನದಲ್ಲಿ ಯುವಜನರು ಸಾಗಬೇಕಿದೆ ಎಂದು ಜಿಲ್ಲಾ ಕಸಾಪ ಕಾರ‌್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ಹೇಳಿದರು.
    ಆರ್ಯವೈಶ್ಯ ಸಂಘ, ಆರ್ಯವೈಶ್ಯ ಸಾಹಿತ್ಯ ಪರಿಷತ್ ಮತ್ತು ವಾಸವಿ ಮಹಿಳಾ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ವಾಸವಿ ಮಹಲ್‌ನಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಕನ್ನಡ ಹಬ್ಬದಲ್ಲಿ ಮಾತನಾಡಿದರು.
    ಪಾಠಗಳೊಂದಿಗೆ ಬದುಕಿನುದ್ದಕ್ಕೂ ಕನ್ನಡ ಭಾಷೆ ಮನೆ, ಮನಗಳಲ್ಲಿ ಬೆಳಗಬೇಕು. ನಮ್ಮ ಆಚಾರ, ಸಂಸ್ಕೃತಿ ಮತ್ತು ಸಂಪ್ರದಾಯಗಳು ಬದುಕಿಗೆ ಭದ್ರ ಬುನಾದಿಯಾಗಿವೆ ಎಂದರು.
    ಆರ್ಯವೈಶ್ಯ ಸಂಘದ ಜಿಲ್ಲಾಧ್ಯಕ್ಷ ಎಲ್.ಇ.ಶ್ರೀನಿವಾಸ ಬಾಬು ಮಾತನಾಡಿ, ಮನೆ ಹಾಗೂ ವ್ಯವಹಾರಿಕ ಜಗತ್ತಿನಲ್ಲಿ ಕನ್ನಡದ ಬಳಕ ಹೆಚ್ಚಾಗಬೇಕು. ಇದರಿಂದ ಭಾಷೆ ಉಳಿಸಿ, ಬೆಳೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.
    ವಿವಿಧ ಸ್ಫರ್ಧಾ ವಿಜೇತರಿಗೆ ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ್ ಬಹುಮಾನ ವಿತರಿಸಿದರು. ಆರ್ಯವೈಶ್ಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಸುಜಾತಾ ಪ್ರಾಣೇಶ್ ಅಧ್ಯಕ್ಷತೆ ವಹಿಸಿದ್ದರು.
    ವಾಸವಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಸುಮಾ ಅನಂತ್, ಕಾರ‌್ಯದರ್ಶಿ ಲಕ್ಷ್ಮೀ ರಮಾಕಾಂತ್, ಶೋಭಾ ಶ್ರೀನಿವಾಸ್, ಪ್ರತಿಭಾ ವಿಶ್ವನಾಥ್, ವರಲಕ್ಷ್ಮೀ ರತ್ನಾಕರ್ ಇತರರಿದ್ದರು. ಪ್ರೊಟಿ.ವಿ.ಸುರೇಶ ಗುಪ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ‌್ಯದರ್ಶಿ ಜೆ.ಆರ್.ಶಿವಕುಮಾರ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts