More

    ಸಾಹಿತ್ಯಕ್ಕಿದೆ ಅಂತಃಕರಣದ ಒಳಗಣ್ಣು ತೆರೆಸುವ ಶಕ್ತಿ

    ಬಾಳೆಹೊನ್ನೂರು: ಸಾಹಿತ್ಯಕ್ಕೆ ಅಂತಃಕರಣದ ಒಳಗಣ್ಣು ತೆರೆಸುವ ಶಕ್ತಿಯಿದೆ. ಓದುವ ಕಾಲದಲ್ಲಿ ಹತ್ತು ವರ್ಷ ತಲೆ ತಗ್ಗಿಸಿ ಓದಿದರೆ ಮುಂದಿನ ಬದುಕು ತಲೆಯೆತ್ತಿ ನಡೆಯಬಹುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
    ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಎನ್.ಆರ್.ಪುರ ತಾಲೂಕು ಕಸಾಪ ಗುರುವಾರ ಆಯೋಜಿಸಿದ್ದ ಹಾ.ಮಾ.ನಾಯಕ್ ಸಾಹಿತ್ಯ, ಬದುಕು, ಬರಹ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯದ ಒಳಹೂರಣವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ ಎಂದರು.
    ತಾಲೂಕು ಕಸಾಪ ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ನೆಲ, ಜಲ, ಭಾಷೆಗೆ ಅನ್ಯಾಯವಾದಾಗ ಸಿಡಿದು ನಿಲ್ಲುತ್ತದೆ. ಕನ್ನಡದ ಉಳಿವು ಬೆಳವಣಿಗೆಗೆ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಸಾಹಿತ್ಯ ಬೆಳವಣಿಗೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಸುತ್ತಿದೆ ಎಂದು ಹೇಳಿದರು.
    ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ದತ್ತಿ ಉಪನ್ಯಾಸದ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿದೆ. ನಾವು ನವೆಂಬರ್ ಕನ್ನಡಿಗರು ಆಗದೆ ಭಾಷೆಯನ್ನು ಗೌರವಿಸುವ ಕಾರ್ಯ ಮಾಡಬೇಕು ಎಂದರು.
    ದತ್ತಿ ದಾನಿ ಬಿ.ಎಂ.ಜಯರಾಂ, ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ, ಕಸಾಪ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಅರಳಿಕೊಪ್ಪ, ಹೋಬಳಿ ಅಧ್ಯಕ್ಷ ರತ್ನಾಕರ ಗಡಿಗೇಶ್ವರ, ಕಸಾಪ ಸದಸ್ಯೆ ಲತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts