More

    ಸಾಹಿತ್ಯಕ್ಕೆ ಬಿಸರಳ್ಳಿ ಕೊಡುಗೆ ಅಪಾರ

    ಕೊಪ್ಪಳ: ಜಿಲ್ಲೆಯ ಸುತ್ತ ಮುತ್ತ ಸೃಜನಶೀಲ ಸಾಹಿತ್ಯ ಮತ್ತು ಸ್ವಾತಂತ್ರ್ಯ ಹೋರಾಟ ಕಟ್ಟುವಲ್ಲಿ ಪ್ರೊ. ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ಅವರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಕಾಳಿದಾಸ ಪಿಯು ಕಾಲೇಜಿನ ಉಪನ್ಯಾಸಕ ರಾಮಣ್ಣ ಹಾಲ್ಮೋಸರುಕೇರಿ ಹೇಳಿದರು.

    ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಪ್ರೊ.ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ಜೀವನ ಸಾಹಿತ್ಯ ಹಾಗೂ ಹೋರಾಟದ ದತ್ತಿ ಉಪನ್ಯಾಸ ನೀಡಿ ಮಾತನಾಡಿದರು.

    ಪಂಚಾಕ್ಷರಿ ಹಿರೇಮಠ ಮೊದಲ ಬಾರಿ ಕೊಪ್ಪಳ ಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದರು. ಕಥೆ, ಕವನ, ಕಾದಂಬರಿ ಬರೆದಿದ್ದಾರೆ. ವಿವಿಧ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಥ ಸಾಧಕರ ಕುರಿತು ಯುವ ಜನಾಂಗ ತಿಳಿದುಕೊಳ್ಳಬೇಕು. ಅವರ ಬದುಕು, ಬರಹ ಅಧ್ಯಯನ ಮಾಡಬೇಕು ಎಂದರು.

    ಕರ್ನಾಟಕ ವಿವಿ ಕನ್ನಡ ವಿಭಾಗ ನಿವೃತ್ತ ಪ್ರಾಧ್ಯಾಪಕ ಪ್ರೊ.ದುರ್ಗದಾಸ್​ ಮಾತನಾಡಿ, ವಿದ್ಯಾರ್ಥಿಗಳು ಬರೀ ಪುಸ್ತಕ ಓದುವ ಜತೆಗೆ ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ ನೀಡಿ. ಚರ್ಚಿಲ್​ ಕನ್ನಡಿ ಮುಂದೆ ನಿಂತು ಭಾಷಣ ಮಾಡುವ ಕಲೆ ಕಲಿತ. ಚಾರ್ಲಿ ಚಾಪ್ಲಿನ್​ ಅವರ ತಾಯಿ ನೃತ್ಯ ನೋಡಿ ತಾನೂ ಕಲಿತ. ಅದರಂತೆ ಬಿಸರಳ್ಳಿಯವರು ಸಾಹಿತ್ಯ ಅಧ್ಯಯನ ಮಾಡಿ ತಾವೂ ಸಾಹಿತಿ ಆದರು ಎಂದರು.

    ಹಲಗೇರಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಡಾ.ಸುಮತಿ ಹಿರೇಮಠ, ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಮಾತಾಡಿದರು.
    ಪವನಕುಮಾರ್​ ಕಮ್ಮಾರ ಬಿಸರಳ್ಳಿ, ಡಾ.ಗಣಪತಿ ಲಮಾಣಿ, ದತ್ತಿ ದಾನಿ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಬಿಸರಳ್ಳಿ, ಪ್ರೊ.ಅನ್ನದಾನಿ ಹಿರೇಮಠ ಬಿಸರಳ್ಳಿ, ಎಚ್​.ಎಸ್​ ಪಾಟೀಲ್​, ಬಿ.ಜಿ.ಕರಿಗಾರ, ಡಾ.ಹುಲಿಗೆಮ್ಮ, ಲಕ್ಷ$್ಮಣ ಮಾಸ್ತರ ಬಿಸರಳ್ಳಿ, ಬಸವೇಶ್ವರಿ ಡಾ.ನರಸಿಂಹ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts