More

    ಭಗವದ್ಗೀತಾ, ದಾಸ ಸಾಹಿತ್ಯ ಡಿಪ್ಲೊಮಾ ಕೋರ್ಸ್​ ಆರಂಭ

    ಪ್ರಶಾಂತ ಭಾಗ್ವತ, ಉಡುಪಿ
    ಭಗವದ್ಗೀತೆಯನ್ನು ವಿಶ್ವವ್ಯಾಪಿಯಾಗಿಸುವ ನಿಟ್ಟಿನಲ್ಲಿ ಕೋಟಿ ಗೀತಾ ಲೇಖನ ಯಜ್ಞ ಕೈಗೊಂಡಿರುವ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು, ಇನ್ನೊಂದು ಮಹತ್ವದ ಕಾರ್ಯ ಆರಂಭಿಸಿದ್ದಾರೆ. ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಭಗವದ್ಗೀತಾ ಹಾಗೂ ದಾಸ ಸಾಹಿತ್ಯದ ವಿಷಯ ಕುರಿತು 4 ಹೊಸ ಡಿಪ್ಲೊಮಾ ಕೋರ್ಸ್​ ಪ್ರಾರಂಭಿಸಿದ್ದಾರೆ.

    ಅಧ್ಯಾತ್ಮದ ವಿಚಾರವನ್ನೊಳಗೊಂಡ ಈ ಹೊಸ ಕೋರ್ಸ್​ಗೆ ಕರ್ನಾಟಕ ಸಂಸತ ವಿಶ್ವ ವಿದ್ಯಾಲಯ ಬೆಂಗಳೂರು ಅಧಿಕೃತ ಮಾನ್ಯತೆ ನೀಡಿದ್ದು, 2024ರ ಜನವರಿಯಿಂದ ಆನ್​ಲೈನ್​ ಮೂಲಕ ತರಗತಿ ಆರಂಭಗೊಂಡಿದೆ. ಈಗಾಗಲೇ 161 ಜನರು ಈ ಹೊಸ ಕೋರ್ಸ್​ ಕಲಿಯುತ್ತಿದ್ದಾರೆ.

    ಭಗವದ್ಗೀತಾ ಡಿಪ್ಲೊಮಾ

    ಇದು ಒಂದು ವರ್ಷದ ಅವಧಿಯದ್ದಾಗಿದ್ದು, ಒಟ್ಟು ನಾಲ್ಕು ಪತ್ರಿಕೆ ಹೊಂದಿದೆ. 18 ಅಧ್ಯಾಯಗಳ ಸಾರ, ಪದ್ಮಪುರಾಣದಲ್ಲಿ ಬರುವ ಭಗವದ್ಗೀತೆಯ ಮಹಾತ್ಮೆ, ಗೀತೆಯಲ್ಲಿ ಬರುವ ಸಂದೇಶದ ಕೆಲವು ಶ್ಲೋಕಗಳ ಆಯ್ಕೆಮಾಡಿ ಅದನ್ನು ಕಂಠಪಾಠ (ಗೀತಾ ಶುಭಾಷಿತ) ಮಾಡುವುದು, ಇನ್ನೊಂದು ಸರಳ ಸಂಸತದ ಪುಸ್ತಕ ಇರಲಿದೆ.

    ಭಗವದ್ಗೀತಾ ಸರ್ಟಿಫಿಕೇಟ್​ ಕೋರ್ಸ್​

    ಇದು 6 ತಿಂಗಳ ಕೋರ್ಸ್​ ಆಗಿದ್ದು, ಮೂರು ಪತ್ರಿಕೆ ಹೊಂದಿದೆ. ಭಗವದ್ಗೀತೆಯ 10 ಅಧ್ಯಾಯಗಳ ಚಿಂತನೆ, ಪದ್ಮ ಪುರಾಣದಲ್ಲಿ ಬಂದಿರುವ 18 ಅಧ್ಯಾಯಗಳ ಮಹಾತ್ಮೆ, ಇನ್ನೊಂದು ಸರಳ ಸಂಸತದ ಪುಸ್ತಕ ಇರಲಿದೆ.

    ದಾಸ ಸಾಹಿತ್ಯ ಡಿಪ್ಲೊಮಾ

    ಒಂದು ವರ್ಷದ ಅವಧಿಯಾಗಿದ್ದು, ಒಟ್ಟು 4 ಪತ್ರಿಕೆಗಳಿವೆ. ದಾಸ ಸಾಹಿತ್ಯ ಬೆಳೆದು ಬಂದ ಪದ್ಧತಿ ಹಾಗೂ ಉಡುಪಿಯ ಕುರಿತು ಅನೇಕ ಹರಿದಾಸರು ರಚಿಸಿರುವ ಕೃತಿಗಳು, ವಾದಿರಾಜ ಗುರುಸಾರ್ವಭೌಮರ ಸಂಕೀರ್ತನಾ ಪದ್ಧತಿ, ದಾಸ ಸಂದೇಶದ ಕುರಿತು ಮಾಹಿತಿಯಿರುವ ಹರಿದಾಸರ ಎಲ್ಲ ಕೃತಿಗಳ ವಿಮರ್ಶೆ, ಇನ್ನೊಂದು ಸರಳ ಸಂಸತ ಪುಸ್ತಕ.

    ದಾಸ ಸಾಹಿತ್ಯ ಸರ್ಟಿಫಿಕೇಟ್​ ಕೋರ್ಸ್​

    6 ತಿಂಗಳ ಅವಧಿಯಾಗಿದ್ದು, 3 ಪತ್ರಿಕೆಗಳಿವೆ. ದಾಸ ಸಾಹಿತ್ಯದ ಉಗಮ&ಉಡುಪಿ ಕ್ಷೇತ್ರ, ದಾಸ ಸಂದೇಶ, ಇನ್ನೊಂದು ಸರಳ ಸಂಸ್ಕತ ಪುಸ್ತಕ ಇರಲಿದೆ. ರಾಜ್ಯದ ಇನ್ಯಾವುದೇ ವಿವಿಯಲ್ಲೂ ಈ ರೀತಿಯ ಕೋರ್ಸ್​ಗಳಿಲ್ಲ.

    18 ತರಗತಿ

    ವಾರದಲ್ಲಿ 18 ತರಗತಿ ನಡೆಯುತ್ತಿದ್ದು, ಪ್ರಧಾನ ಅಧ್ಯಾಪಕರಾಗಿ ವಿದ್ವಾನ್​ ಡಾ. ಬಿ.ಗೋಪಾಲ ಆಚಾರ್ಯ ಆನ್​ಲೈನ್​ ಮೂಲಕ ಪಾಠ ಮಾಡುತ್ತಿದ್ದಾರೆ. ಕೋರ್ಸ್​ಗೆ ಸಂಬಂಧಿಸಿ ಎಲ್ಲ ರೀತಿಯ ವ್ಯವಸ್ಥೆಯನ್ನು ಬಿ.ಜಿ. ಪರಿಮಳಾ ನಿರ್ವಹಿಸುತ್ತಿದ್ದಾರೆ. ಕೋರ್ಸ್​ಗೆ ಪಿಯುಸಿ ಅರ್ಹತೆಯಿದ್ದು, ವಯೋಮಿತಿ ಅಥವಾ ಯಾವುದೇ ಜಾತಿಯ ಚೌಕಟ್ಟು ಇಲ್ಲ. ಕೋರ್ಸ್​ನ ಮಾಹಿತಿಗಾಗಿ ಮೊ.ಸಂ. 7892991690 ಸಂಪರ್ಕಿಸಬಹುದು.

    ಮಧ್ವಾಚಾರ್ಯರ ದ್ವಾದಶ ಸ್ತೋತ್ರಗಳೇ ಆಧಾರ

    ದಾಸ ಸಾಹಿತ್ಯ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್​ ಕೋರ್ಸ್​ನಲ್ಲಿ “ಉಡುಪಿ ಕ್ಷೇತ್ರ ದಾಸ ಸಾಹಿತ್ಯದ ಉಗಮ’ ಎನ್ನುವುದೇ ಪ್ರಧಾನ ವಿಷಯವಾಗಿದೆ. ಇದನ್ನೇ ಪ್ರಮುಖವನ್ನಾಗಿಸಲು ಕಾರಣ, ಮಧ್ವಾಚಾರ್ಯರು ರಚಿಸಿರುವ ದ್ವಾದಶ ಸೊತ್ರ. ಇದುವೇ ದಾಸ ಸಾಹಿತ್ಯದ ಮೂಲವೂ ಆಗಿದೆ. ಇನ್ನೊಂದು ಕಂದುಕ ಸ್ತುತಿ. ಪಾಜಕ ಕ್ಷೇತ್ರದಲ್ಲಿ ಮಧ್ವಾಚಾರ್ಯರು ಚೆಂಡಿನ ಆಟವಾಡುತ್ತಲೇ ರಚಿಸಿದ ಕೃತಿ ಇದು. ಆಚಾರ್ಯರೇ ರಚಿಸಿದ ಸೊತ್ರಗಳ ಆಧಾರದಲ್ಲಿ “ದಾಸ ಸಾಹಿತ್ಯದ ಉಗಮ ಕ್ಷೇತ್ರ ಉಡುಪಿ’ ಎಂಬ ಪಠ್ಯಕ್ರಮ ಅಳವಡಿಸಲಾಗಿದೆ.

    ಗೋವರ್ಧನ ಕ್ಷೇತ್ರದಲ್ಲಿ ಉದ್ಘಾಟನೆ

    ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ 2023ರ ಡಿಸೆಂಬರ್​ 23ರಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಈ ವಿನೂತನ ಕೋರ್ಸ್​ ಉದ್ಘಾಟಿಸಿದ್ದಾರೆ. ಕರ್ನಾಟಕ ಸಂಸತ ವಿವಿಯ ಕುಲಪತಿ ಅಹಲ್ಯಾ ಅವರು ಎಲ್ಲ ರೀತಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು, ಅನೇಕರು ಕೈಜೋಡಿಸಿದ್ದಾರೆ. ಭಗವದ್ಗೀತೆ ಹಾಗೂ ದಾಸ ಸಾಹಿತ್ಯಕ್ಕೆ ವಿವಿ ಮಟ್ಟದಲ್ಲಿ ಮನ್ನಣೆ ಲಭಿಸಿದ್ದರಿಂದ ಈ ಕೋರ್ಸ್​ಗೆ ವಿಶೇಷ ಮಾನ್ಯತೆ ಲಭಿಸಿದೆ. ವಿನೂತನ ಮಾರ್ಗದ ಮೂಲಕ ಗೀತೆ ಹಾಗೂ ದಾಸ ಸಾಹಿತ್ಯ ಅರ್ಥೈಸಿಕೊಳ್ಳಲು ವೇದಿಕೆ ಲಭಿಸಿದಂತಾಗಿದೆ ಎಂದು ಪುತ್ತಿಗೆ ಮಠದ ಸುಗಣೇಂದ್ರ ತೀರ್ಥ ಶ್ರೀಪಾದರು ಸಂತಸ ವ್ಯಕ್ತಪಡಿಸಿದ್ದಾರೆ.

    ಹಂಪಿ ವಿವಿಯಲ್ಲಿ ದಾಸ ಸಾಹಿತ್ಯ ಅಧ್ಯಯನ ಕೇಂದ್ರವಿದೆ. ಆದರೆ, ಡಿಪ್ಲೊಮಾ ಅಥವಾ ಸರ್ಟಿಫಿಕೇಟ್​ ಕೋರ್ಸ್​ಗಳಿಲ್ಲ. ಪರೀೆಯೂ ಸೇರಿದಂತೆ ಎಲ್ಲ ಪ್ರಕ್ರಿಯೆಯೂ ಆನ್​ಲೈನ್​ ಮೂಲಕವೇ ನಡೆಯಲಿದೆ. ಆಸ್ಟ್ರೆಲಿಯಾ ಸೇರಿದಂತೆ ಹೊರದೇಶದವರೂ ಸಹ ಈ ಕೋರ್ಸ್​ನಲ್ಲಿ ಭಾಗಿಯಾಗಿದ್ದಾರೆ. ಮನೆಯಲ್ಲಿಯೇ ಇದ್ದು, ಈ ಕೋರ್ಸ್​ಗಳನ್ನು ಯಾರು ಬೇಕಾದರೂ ಕಲಿಯಬಹುದಾಗಿದೆ.

    ವಿದ್ವಾನ್​ ಡಾ. ಬಿ.ಗೋಪಾಲ ಆಚಾರ್ಯ. ಪ್ರಧಾನ ಅಧ್ಯಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts