More

    ವಿಶೇಷ ಚೇತನರನ್ನು ಮುಖ್ಯವಾಹಿನಿಗೆ ತನ್ನಿ: ಆರ್​.ಎಸ್​. ಬುರಡಿ

    ಗದಗ
    ವಿಶೇಷ ಚೇತನ ಮಕ್ಕಳಲ್ಲಿಯ ಸೂಪ್ತ ಪ್ರತಿಭೆಗೆ ಅವಕಾಶಗಳನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಆರ್​.ಎಸ್​.ಬುರಡಿ ಹೇಳಿದರು.
    ಮಂಗಳವಾರ ಗದಗ ಎಸ್​.ಆರ್​.ಪಿ ಕೇಂದ್ರದಲ್ಲಿ ೋರ್ಥ್​ವೇ ೌಂಡೇಶನ್​ದ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
    ಮಕ್ಕಳು ಅಂಗವಿಕಲರಾದಲ್ಲಿ ಪಾಲಕರು ನೋಂದುಕೊಳ್ಳದೆ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರ ಸ್ವಾವಲಂಭನ ಬದುಕಿಗೆ ಪ್ರೇರೆಪಿಸಬೇಕು ಎಂದರು.
    ೋರ್ಥ್​ವೇ ಪೌಂಡೇಶನ್​ ಮುಖ್ಯಸ್ಥ ಬಸವರಾಜ ಮ್ಯಾಗೇರಿ ಮಾತನಾಡಿ, ಅಂಗವಿಕಲತೆ ಎಂಬುದು ಶಾಪವಲ್ಲ. ಅವರಲ್ಲಿ ಪ್ರೀತಿ ತುಂಬಿ “ಎಲ್ಲರಂತೆ ನಾನು, ನನಗೂ ಶಾಲೆ’ ಎಂಬ ಭಾವನೆ ಬರುವಂತೆ ಮಾಡಬೇಕು ಎಂದರು.
    ಎಸ್​.ಆರ್​.ಪಿ ಕೇಂದ್ರ ಮುಖ್ಯೋಪಾಧ್ಯಾಯ ವಿ.ಡಿ. ಹುಗ್ಗೇಣ್ಣವರ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದರು.
    ವಿ. ಸಿ. ಗಂಧ, ಡಾ. ಶಿವನಗೌಡ್ರ, ಕೆ.ಎಸ್​.ಬೇಲೇರಿ, ಶಶಿಧರ ಚಳಗೇರಿ, ಸುನೀತಾ ತಿಮ್ಮನಗೌಡ್ರ ಹಲವರು ಉಪಸ್ಥಿತಿ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts