More

    ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ದೊಡ್ಡದು: ಬ್ರಹ್ಮಕುಮಾರಿ ಜಯಂತಿ

    ವಿಜಯವಾಣಿ ಸುದ್ದಿಜಾಲ ಗದಗ
    ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮವು ಸಮಾಜವನ್ನು ನಿರ್ನಾಮ ಮಾಡುವ ಬದಲು ನಿರ್ಮಾಣ ಮಾಡುವ ಕೆಲಸ ಮಾಡಲಿ ಎಂದು ಈಶ್ವರಿಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಅಭಿಪ್ರಾಯಪಟ್ಟರು.
    ನಗರದ ಸಿದ್ಧರಾಮೇಶ್ವರ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಅಧ್ಯಾತ್ಮಿಕ ಸಂಸತಿ ಭವನದಲ್ಲಿ ಇತ್ತೀಚೆಗೆ ಜರುಗಿದ ದೈವೀ ಸ್ನೇಹ ಮಿಲನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ಮಾಧ್ಯಮಗಳು ಜನಮನವನ್ನು ಕೆರಳಿಸುವ ಬದಲು ಅರಳಿಸುವ ಕಾರ್ಯ ಮಾಡಲಿ. ಮಾಧ್ಯಮಕ್ಕೆ ಗೌರವ ಮತ್ತು ಗುರುತರವಾದ ಜವಾಬ್ದಾರಿ ಇದೆ. ಮಾಧ್ಯಮದವರು ತಮ್ಮ ಬರಹಗಳ ಮೂಲಕ ಸಮಾಜದ ಪರೋ ಶಿಕರೇ ಆಗಿದ್ದಾರೆ. ತಮ್ಮ ಲೇಖನ ಮೂಲಕ ಸಮಾಜವನ್ನು ರೂಪಿಸಬಲ್ಲರು. ಪತ್ರಿಕಾ ಹಾಗೂ ಟಿವಿ ಮಾಧ್ಯಮದವರು ವಾಸನೋತ್ತೇಜಕ ಸಮಾಚಾರವನ್ನು ಸಮಾಜಕ್ಕೆ ನೀಡುವುದರ ಬದಲಾಗಿ ಉಜ್ವಲ ಚಾರಿತ್ರ್ಯದ ನಿರ್ಮಾಣದ ಉದ್ದೇಶದಿಂದ ಪ್ರೇರಣಾದಾಯಕ ಸಮಾಚಾರವನ್ನು ನೀಡಿದರೆ ನಾಗರಿಕರ ಮೇಲೆ ಪ್ರಭಾವ ಬೀರುತ್ತದೆ ಎಂದರು.
    ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯ ಸಂಪಾದಕ ರಾಜು ಹೆಬ್ಬಳ್ಳಿ, ಪತ್ರಕರ್ತರಾದ ಕೆ.ಎಂ.ಸತೀಶ್​ ಬೆಳ್ಳಕ್ಕಿ, ವೆಂಕಟೇಶ ಇಮ್ರಾಪೂರ, ಅರುಣ ಹಿರೇಮಠ, ಸುಯಮೀಂದ್ರ ಕುಲಕಣಿರ್, ಹಿರಿಯ ಛಾಯಾಗ್ರಾಹಕರಾದ ವಸಂತ ಮಹೇಂದ್ರಕರ, ರಾಮು ವಗ್ಗಿ, ಬನ್ನೇಶ್​ ಕುಲಕಣಿರ್, ವಿಜಯ ಕಾಗನೂರಮಠ, ಶಂಕರ ಗುರಿಕಾರ, ಗಣೇಶ ದೊಡ್ಡಮನಿ, ಖಾಜೇಸಾಬ ಬೂದಿಹಾಳ, ಸುಭಾಸ ಮಳಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಬಿ.ಕೆ.ಜಯಶ್ರೀ, ಬಿ. ಕೆ. ರೇಖಾ, ಬಿ. ಕೆ. ಸಾವಿತ್ರಿ, ಬಿ. ಕೆ. ಮಮತಾ, ಬಿ. ಕೆ. ಜ್ಯೋಸ್ನಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts