More

    ಬಿ. ಜಿ. ಅಣ್ಣಿಗೇರಿ ಗುರುಕುಲ ಆಶ್ರಮದಲ್ಲಿ ಉಚಿತ ಬೋಧನೆ ನಿತ್ಯ ನಿರಂತರ : ಶಿವಕುಮಾರ ಪಾಟೀಲ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಬಿ.ಜಿ.ಅಣ್ಣಿಗೇರಿ ಗುರುಗಳ ಗುರುಕುಲ ಆಶ್ರಮದಲ್ಲಿ ವಿದ್ಯಾಥಿ ವಿದ್ಯಾಥಿರ್ನಿಯರಿಗೆ ಉಚಿತ ಪಾಠ ಬೋಧನೆ ನಿತ್ಯ ನಿರಂತರವಾಗಿ ಮುನ್ನಡೆಯಲಿದೆ ಎಂದು ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಅಧ್ಯ ಶಿವಕುಮಾರ ಪಾಟೀಲ ಹೇಳಿದರು.
    ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬುಧವಾರ ಜರುಗಿದ ಆಧ್ಯಾತ್ಮ ಮತ್ತು ಶೈಣಿಕ ಚಿಂತನ ಮಾಲಿಕೆಯ ಅಧ್ಯತೆ ವಹಿಸಿ ಅವರು ಮಾತನಾಡಿದರು.
    ಬಿ.ಜಿ.ಅಣ್ಣಿಗೇರಿ ಗುರುಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಲ್ಲದೇ ತಾವು ವಾಸವಾಗಿದ್ದ ಕೊಠಡಿಯಲ್ಲಿ ತಮ್ಮೊಂದಿಗೆ ವಿದ್ಯಾಥಿರ್ಗಳಿಗೆ ಆಶ್ರಯ ನೀಡಿ ಪಾಠ ಬೋಧನೆ ಪ್ರಾರಂಭಿಸಿದರು. ಕಾಲಕ್ರಮೇಣ ವಿದ್ಯಾಥಿರ್ಗಳ ಸಂಖ್ಯೆ ಹೆಚ್ಚಾದಂತೆ ಅದು ಗುರುಕುಲ ಮಾದರಿಯಲ್ಲಿ ನಡೆದು ಬಂದಿರುವದು ಇತಿಹಾಸ. ಅವಳಿ ನಗರ ಅಷ್ಟೇ ಅಲ್ಲ ಗದಗ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾಥಿರ್ ವಿದ್ಯಾಥಿರ್ನಿಯರು ಶಾಲೆಗೆ ಹೋಗುವ ಮುನ್ನ, ಶಾಲೆ ಬಿಟ್ಟ ನಂತರ ಆಶ್ರಮದಲ್ಲಿ ಟ್ಯೂಶನ್​ ಹೇಳಿಸಿಕೊಂಡು ಮುಂದೆ ಅವರು ಉನ್ನತ ಶಿಣ ಪಡೆದು ದೊಡ್ಡ ದೊಡ್ಡ ಸ್ಥಾನದಲ್ಲಿದ್ದಾರೆ ಎಂದರು.
    ಈ ಆಶ್ರಮದಲ್ಲಿ ಪಾಠ ಹೇಳಿಸಿಕೊಂಡ ಬಹುತೇಕ ವಿದ್ಯಾಥಿರ್ ವಿದ್ಯಾಥಿರ್ನಿಯರು ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುವದು ಹೆಮ್ಮೆಯ ಸಂಗತಿ. ಗುರುಗಳು ಇದ್ದಾಗ ಮತ್ತು ಅವರ ತರುವಾಯ ಅವರ ಶಿಷ್ಯ ಬಳಗ ಆಶ್ರಮಕ್ಕೆ ಬಂದು ಮಕ್ಕಳಿಗೆ ಉಚಿತ ಪಾಠ ಹೇಳುತ್ತಿರುವದು ಅಭಿನಂದನೀಯ ಎಂದು ಶಿವಕುಮಾರ ಹೇಳಿದರು.
    ಶಂಕ್ರಪ್ಪ ಅಣ್ಣಿಗೇರಿ, ಶಿವಪ್ಪ ಕತ್ತಿ, ಸಿದ್ಧಲಿಂಗನಗೌಡ ಪಾಟೀಲ, ಶಿವಾನಂದ ದಂಡಿನ, ವಿರುಪಾಪ್ಪ ಮ್ಯಾಗೇರಿ, ಚನ್ನಪ್ಪ ಮಲ್ಲಾಡದ, ತೋಂಟೇಶ ವೀರಲಿಂಗಯ್ಯನಮಠ, ವಿರುಪಾಪ್ಪ ಶಾಂತಗೇರಿ, ಕಳಕಪ್ಪ ಕುರ್ತಕೋಟಿ, ಬಸವರಾಜ ಬಿಂಗಿ, ಸಿದ್ದಣ್ಣ ಕವಲೂರ, ರವಿ ದಂಡಿನ ಹಲವರು ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts