More

    ಕಿಲ್ಲರ್​ ಕರೊನಾದಿಂದ ಕುಗ್ಗಿರುವ ಜಾಗತಿಕ ಆರ್ಥಿಕತೆ ಮೇಲೆತ್ತಲು 5 ಟ್ರಿಲಿಯನ್​ ಡಾಲರ್​: ಜಿ20 ರಾಷ್ಟ್ರಗಳ ವಾಗ್ದಾನ

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ವಿರುದ್ಧ ಹೋರಾಡಲು ಎಲ್ಲರೂ ಒಗ್ಗೂಡುವುದಾಗಿ ಜಿ20 ರಾಷ್ಟ್ರಗಳು ಗುರುವಾರ ವಾಗ್ದಾನ ಮಾಡಿವೆ. ಅಲ್ಲದೆ, ಕೋವಿಡ್​-19ನಿಂದ ಜಾಗತಿಕವಾಗಿ ಹೊಡೆತಬಿದ್ದಿರುವ ಆರ್ಥಿಕತೆಯನ್ನು ಮೇಲೆತ್ತಲು 5 ಟ್ರಿಲಿಯನ್​ ಡಾಲರ್​ ನೆರವು ನೀಡುವುದಾಗಿ ಘೋಷಿಸಿವೆ.

    ಇದೇ ವೇಳೆ ಪ್ರಧಾನಿ ಮೋದಿ ಅವರು ಕರೊನಾ ವಿರುದ್ಧ ಹೋರಾಡಲು ನಿಶ್ಚಿತ ಕ್ರಿಯಾ ಯೋಜೆನೆಗೆ ಕರೆ ನೀಡಿದ್ದಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್​ಒ)ಯ ಸುಧಾರಣೆಗಾಗಿ ಜಿ20 ಸಭೆಯನ್ನು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.

    ಮಾರಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ಪಾರದರ್ಶಕ, ದೃಢ, ಸಂಘಟಿತ ಮತ್ತು ವಿಜ್ಞಾನ ಆಧಾರಿತ ಜಾಗತಿಕ ಪ್ರತಿಕ್ರಿಯೆಯೊಟ್ಟಿಗೆ ಒಗ್ಗಟ್ಟಿನ ಮನೋಭಾವ ಇರಬೇಕೆಂದು ಜಿ20 ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜಾಗತಿಕವಾಗಿ ಉಂಟಾಗಿರುವ ತುರ್ತು ಪರಿಸ್ಥಿತಿ ಕಾರಣದಿಂದಾಗಿ ಜಿ20 ಶೃಂಗವನ್ನು ಆನ್​ಲೈನ್​ನಲ್ಲೇ ನಡೆಸಲಾಯಿತು. ಎಲ್ಲ ರಾಷ್ಟ್ರದ ನಾಯಕರು ಆನ್​ಲೈನ್​ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಉದ್ಯೋಗಗಳ ರಕ್ಷಣೆ ಹಾಗೂ ಬೆಳವಣಿಗೆಯ ಚೇತರಿಕೆಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಕುಗ್ಗಿರುವ ಆರ್ಥಿಕತೆಯನ್ನು ಮತ್ತೆ ತನ್ನ ಹಾದಿಗೆ ಮರಳಲು ಜಿ20 ನಾಯಕರು ಪಣ ತೊಟ್ಟಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸ್ಥಳೀಯ ಬ್ಯಾಂಕ್​ಗಳೊಟ್ಟಿಗೆ ಸೇರಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಬಲವಾದ ಆರ್ಥಿಕ ಪ್ಯಾಕೇಜ್​ ನೀಡಲು ವೇಗವಾಗಿ ಕೆಲಸ ಮಾಡುವುದಾಗಿ ಜಿ20ಯಲ್ಲಿ ತೀರ್ಮಾನಿಸಲಾಗಿದೆ.

    ಕರೊನಾ ವಿರುದ್ಧ ಹೋರಾಡಲು ಸಂಶೋಧನಾ ಮಾಹಿತಿ ಹಂಚಿಕೆ, ಆರೋಗ್ಯ ವ್ಯವಸ್ಥೆ ಬಲಗೊಳಿಸುವಿಕೆ ಮತ್ತು ವೈದ್ಯಕೀಯ ಸರಬರಾಜುಗಳ ಬೇಡಿಕೆಯನ್ನು ಪೂರೈಸಲು ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವುದು ಸೇರಿದಂತೆ ಅನೇಕ ಕ್ರಮಗಳಿಗೆ ಬದ್ಧರಾಗಿರುವಾಗಿ ಹೇಳಿದೆ.

    ಭವಿಷ್ಯದ ಸುರಕ್ಷತೆಗಾಗಿ ರಾಷ್ಟ್ರಿಯ, ಸ್ಥಳೀಯ ಮತ್ತು ಜಾಗತಿಕ ಸಾಮರ್ಥ್ಯವನ್ನು ಸಂಭವನೀಯ ಸೋಂಕುಗಳ ವಿರುದ್ಧ ಹೋರಾಡಲು ಬಲಗೊಳಿಸಲು ಬದ್ಧರಾಗಿರುವುದಾಗಿ ಜಿ20 ಶೃಂಗದಲ್ಲಿ ರಾಷ್ಟ್ರ ನಾಯಕರು ವಾಗ್ದಾನ ಮಾಡಿದ್ದಾರೆ. (ಏಜೆನ್ಸೀಸ್​)

    ಯಾವ ರಕ್ತದ ಗುಂಪಿನ ಮೇಲೆ ಕರೊನಾ ಹೆಚ್ಚು ಪರಿಣಾಮ ಬೀರಲಿದೆ? ಹೊಸ ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ

    ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts