More

    ಇಂಧನ ಬೆಲೆ: ಮುಂಬರುವ ತಿಂಗಳಲ್ಲಿ ಕೊಂಚ ಪರಿಹಾರ ಎಂದ ಕೇಂದ್ರ ಸಚಿವ

    ನವದೆಹಲಿ: ಅಂತರರಾಷ್ಟ್ರೀಯ ತೈಲ ಬೆಲೆಗಳು ನಿಧಾನವಾಗಿ ಕಡಿಮೆಯಾಗುತ್ತಾ ಸುಸ್ಥಿರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ಇಂಧನ ಬೆಲೆಗಳ ವಿಚಾರದಲ್ಲಿ ಜನರಿಗೆ ಸ್ವಲ್ಪ ಪರಿಹಾರ ಸಿಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವ ಹರದೀಪ್​ ಸಿಂಗ್ ಪುರಿ ಹೇಳಿದ್ದಾರೆ.

    ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ ಪುರಿ ಅವರು, ಭಾರತದಲ್ಲಿ ಇಂಧನ ಬೆಲೆಗಳು ಮುಖ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಮೇಲೇ ಅವಲಂಬಿತವಾಗಿದೆ. ಪೆಟ್ರೋಲ್​-ಡೀಸೆಲ್​ ಮೇಲೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಅಬಕಾರಿ ಶುಲ್ಕ ಏಪ್ರಿಲ್ 2010 ರಿಂದ ಲೀಟರ್​ಗೆ 32 ರೂ.ಗಳಷ್ಟೇ ಇದೆ, ಯಾವುದೇ ಬದಲಾವಣೆ ಮಾಡಿಲ್ಲ ಎಂದರು.

    ಇದನ್ನೂ ಓದಿ: ಮಳೆಯ ಅಬ್ಬರಕ್ಕೆ ಮನೆ ಕುಸಿತ: ಮನೆಯೊಡತಿ ಪಾರಾದದ್ದೇ ಅದೃಷ್ಟ!

    “ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ಹೊಂದಿದೆ… ಬರುವ ತಿಂಗಳುಗಳಲ್ಲಿ ಪರಿಹಾರ ದೊರೆಯಲಿದೆ” ಎಂದ ಸಚಿವ ಪುರಿ, “ಸರ್ಕಾರ ತನ್ನ ಇತರ ಜವಾಬ್ದಾರಿಗಳ ಬಗ್ಗೆಯೂ ಕಾಳಜಿ ಹೊಂದಿದೆ… 80 ಕೋಟಿ ಜನರಿಗೆ ಸರ್ಕಾರ ಉಚಿತ ಪಡಿತರ ನೀಡಿತು, ಉಚಿತ ಲಸಿಕೆ ಮತ್ತು ಇತರ ಸೌಲಭ್ಯಗಳನ್ನು ನೀಡಿತು. ಆದ್ದರಿಂದ ಇದು ದೊಡ್ಡ ಚಿತ್ರದ ಭಾಗವಾಗಿದೆ” ಎಂದರು. (ಏಜೆನ್ಸೀಸ್)

    ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ ರೇಪ್​

    ಒಲಿಂಪಿಕ್ಸ್​ ಫೈನಲ್ಸ್​ ಮುನ್ನ ಕಾಣೆಯಾಗಿತ್ತು, ನೀರಜ್​ ಚೋಪ್ರಾರ ಜಾವೆಲಿನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts