More

    ನಾಲ್ಕನೇ ದಿನವೂ ಏರಿದ ಇಂಧನ ಬೆಲೆ: 3 ನಗರಗಳಲ್ಲಿ 100 ರೂಪಾಯಿ ದಾಟಿದ​ ಡೀಸಲ್!

    ನವದೆಹಲಿ: ಶನಿವಾರದಂದು ಸತತ ನಾಲ್ಕನೇ ದಿನ ಭಾರತದಲ್ಲಿ ಇಂಧನ ಬೆಲೆಗಳು ಏರಿಕೆಯಾಗಿವೆ. ದೇಶಾದ್ಯಂತ ಆಯಾ ರಾಜ್ಯಗಳ ತೆರಿಗೆಗಳಿಗೆ ತಕ್ಕಂತೆ ಪೆಟ್ರೋಲ್ ಮತ್ತು ಡೀಸಲ್​ ಮತ್ತಷ್ಟು ದುಬಾರಿಯಾಗಿವೆ.

    ನಿನ್ನೆಯ ಏರಿಕೆಯ ನಂತರ ತಮಿಳುನಾಡಿನ ರಾಜಧಾನಿ ಚೆನ್ನೈ, ಡೀಸಲ್​ ಬೆಲೆ ಪ್ರತಿ ಲೀಟರ್​ಗೆ 100 ರೂಪಾಯಿಯ ಮಟ್ಟ ದಾಟಿದ ದೇಶದ ಎರಡನೇ ಮೆಟ್ರೋ ನಗರವಾಗಿದೆ. ಇಂದು ಚೆನ್ನೈನಲ್ಲಿ ಡೀಸಲ್​ ಬೆಲೆ ಲೀಟರ್​ಗೆ 100.24 ರೂ.ಗಳಾಗಿದ್ದರೆ, ಪೆಟ್ರೋಲ್ ಬೆಲೆ 104.22 ರೂಪಾಯಿಯಾಗಿದೆ.

    ಇದನ್ನೂ ಓದಿ: ಯಶವಂತಪುರ-ಚಂಡಿಗಢಕ್ಕೆ ರೈಲು ಸಂಚಾರ ಆರಂಭ

    ಇಂದು ದೆಹಲಿಯ ಪೆಟ್ರೋಲ್​ ಬೆಲೆ 107.24 ರೂಪಾಯಿ ಮತ್ತು ಡೀಸಲ್ ಬೆಲೆ 95.97 ರೂಪಾಯಿಯಷ್ಟಿದೆ. ಕೋಲ್ಕತಾದಲ್ಲಿ ಪೆಟ್ರೋಲ್​ 107.78 ರೂ., ಡೀಸಲ್​ 99.08 ರೂ. ದರ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ 113.12 ಆಗಿದ್ದು, ಡೀಸಲ್ ಲೀಟರ್​ಗೆ 104 ರೂಪಾಯಿಗಳಷ್ಟಿದೆ.

    ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ ನಿನ್ನೆಯ ದಿನ ಲೀಟರ್​ಗೆ 110.61 ಇದ್ದದ್ದು, 37 ಪೈಸೆ ಏರಿಕೆಯೊಂದಿಗೆ ಇಂದು 110.98 ರೂಪಾಯಿ ಆಗಿದೆ. ಡೀಸಲ್​ ದರ 100 ರೂಪಾಯಿ ಮಟ್ಟ ದಾಟಿದ ಕೆಲವೇ ಮಹಾನಗರಗಳಲ್ಲಿ ಬೆಂಗಳೂರು ಕೂಡ ಒಂದು. ನಗರದ ಇಂದಿನ ಡೀಸಲ್ ಬೆಲೆ ಲೀಟರ್​ಗೆ 101.86 ರೂ. ಆಗಿದೆ. (ಏಜೆನ್ಸೀಸ್)

    ಪ್ರಕೃತಿ ವಿಕೋಪಕ್ಕೆ ತತ್ತರಿಸಿದ ಉತ್ತರಾಖಂಡ: ಮಾದರಿ ನಿರ್ಧಾರ ತೆಗೆದುಕೊಂಡ ಸಿಎಂ

    ರಾಜ್ಯದಲ್ಲಿ ಈಗಿರೋದು ಡೂಪ್ಲಿಕೇಟ್​ ಕಾಂಗ್ರೆಸ್: ಎಚ್​.ಡಿ.ರೇವಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts