ಪ್ರಿಯತಮೆಯ ಮೇಲಿನ ಬೇಸರಕ್ಕೆ ಒಂದೇ ಕುಟುಂಬದ ಐವರ ಕೊಲೆ! ಹೊಲದಲ್ಲೇ ಇತ್ತು ದೊಡ್ಡ ಸೀಕ್ರೇಟ್

murder
Published on

ಭೋಪಾಲ್: ಪ್ರಿಯತಮೆಯಿಂದಾಗಿ ಸಾಕಷ್ಟು ಬೇಸರಗೊಂಡಿದ್ದ ವ್ಯಕ್ತಿಯೊಬ್ಬ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಿ ಜಮೀನಿನಲ್ಲಿ ಹೂತಿಟ್ಟಿರುವ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ.

ಮಮತಾ (45), ರೂಪಾಲಿ (21), ದಿವ್ಯಾ (14) ಪೂಜಾ (15) ಹಾಗೂ ಪವನ್ ಮೃತ ದುರ್ದೈವಿಗಳು. ಈ ಐವರು ಮೇ 13ರಿಂದ ಕಾಣೆಯಾಗಿದ್ದಾಗಿ ಪೊಲೀಸ್​ ದೂರು ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಸುರೇಂದ್ರ ಹೆಸರಿನ ವ್ಯಕ್ತಿಯ ಜಮೀನಿನಲ್ಲಿ ಐದು ಮೃತದೇಹಗಳು ಸಿಕ್ಕಿವೆ. ಜಮೀನಿನಲ್ಲಿ ಗುಂಡಿ ತೋಡಿ ಸುಮಾರು 10 ಅಡಿ ಕೆಳಗೆ ಹೆಣಗಳನ್ನು ಹೂತಿಟ್ಟಿದ್ದು, ಅದನ್ನು ಪೊಲೀಸರು ಹೊರ ತೆಗೆಸಿದ್ದಾರೆ.

ಸುರೇಂದ್ರ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಆಕೆಯೊಂದಿಗೆ ಯಾವಾಗಲೂ ಜಗಳವಾಗುತ್ತಿತ್ತಂತೆ. ಅದೇ ಹಿನ್ನೆಲೆಯಲ್ಲಿ ಸಾಕಷ್ಟು ಬೇಸರಗೊಂಡಿದ್ದ ಆತ ಕೆಲ ಸ್ನೇಹಿತರ ಜತೆ ಸೇರಿಕೊಂಡು ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆತ ಪ್ರೀತಿಸಿದ್ದು ಮೃತ ರೂಪಾಲಿಯನ್ನೇ ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ಒಂದೇ ಕುಟುಂಬದ ಐವರನ್ನು ಕೊಲೆ ಮಾಡುವುದಕ್ಕೆ ನಿಖರ ಕಾರಣ ಏನೂ ಎನ್ನುವುದು ಇನ್ನೂ ತಿಳಿದುಬಂದಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net