More

    ನಾಳೆಯಿಂದ ಈ ಫೋನುಗಳಲ್ಲಿ ವಾಟ್ಸ್​ಆ್ಯಪ್​ ವರ್ಕ್​ ಆಗಲ್ಲ! ಕಾರಣವೇನು ಗೊತ್ತಾ?

    ಬೆಂಗಳೂರು: 2020 ಇಂದು ಅಂತ್ಯವಾಗಲಿದೆ. ನಾಳೆಯಿಂದ 2021 ಆರಂಭವಾಗಲಿದ್ದು, ಹಲವಾರು ಬದಲಾವಣೆಗಳು ನಮ್ಮ ಜೀವನಕ್ಕೆ ಒಗ್ಗಿಕೊಳ್ಳಲು ಸಿದ್ಧವಾಗಿದೆ. ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕೆಲವೊಂದಿಷ್ಟು ಬದಲಾವಣೆಗಳು 2021ರಲ್ಲಿ ನಮಗೆ ಎದುರಾಗಲಿವೆ. ಅದರಂತೆ ವಾಟ್ಸ್​ಆ್ಯಪ್​ ಕೂಡ ಬದಲಾಗ ಹೊರಟಿದ್ದು, ಕೆಲವೊಂದಿಷ್ಟು ಮೊಬೈಲ್​ಗಳಿಗೆ ಸಂಪರ್ಕ ತೆಗೆದುಹಾಕುವುದಾಗಿ ಹೇಳಿಕೊಂಡಿದೆ.

    ಇದನ್ನೂ ಓದಿ: ಸಿಬಿಎಸ್​ಇ 10, 12ನೇ ತರಗತಿ ಎಕ್ಸಾಂ ಡೇಟ್​ ಫಿಕ್ಸ್​; ಆಫ್​ಲೈನ್​ನಲ್ಲೇ ನಡೆಯಲಿದೆ ಪರೀಕ್ಷೆ

    2021ರಲ್ಲಿ ನೂತನ ಫೀಚರ್​ಗಳನ್ನು ಅಳವಡಿಸಿಕೊಳ್ಳಲು ವಾಟ್ಸ್​ಆ್ಯಪ್​ ಸಿದ್ಧತೆ ನಡೆಸಿದೆ. ಅದು ತರಲಿರುವ ಫೀಚರ್​ಗಳು ಕೆಲವು ಹಳೆ ಮೊಬೈಲ್​ಗಳ ಹಾರ್ಡ್​ವೇರ್​ ಮತ್ತು ಸಾಫ್ಟ್​ವೇರ್​ಗೆ ಸಪೋರ್ಟ್​ ಆಗುವುದಿಲ್ಲ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಐಒಎಸ್​ 9 ಗಿಂತ ಹಳೆಯ ಸಾಫ್ಟ್​ವೇರ್​ ಹೊಂದಿರುವ ಫೋನ್​ಗಳು ಮತ್ತು ಆ್ಯಂಡ್ರಾಯ್ಡ್​ 4.0.3ಗಿಂತ ಹಳೆಯ ಆ್ಯಂಡ್ರಾಯ್ಡ್​ ಸಾಫ್ಟ್​ವೇರ್​ ಹೊಂದಿರುವ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಅದರಂತೆ ಜನವರಿ 1ರಿಂದ ಈ ಫೋನಗಳಲ್ಲಿ ವಾಟ್ಸ್​ಆ್ಯಪ್​ ಸೇವೆ ಸ್ಥಗಿತವಾಗಲಿದೆ ಎನ್ನಲಾಗಿದೆ.

    ಇದನ್ನೂ ಓದಿ: ಪ್ರೀತಿಗೆ ಓಕೆ ಎಂದ ಮರುಕ್ಷಣವೇ ಎದುರಾದ ಜವರಾಯ! ಪ್ರಪೋಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಜೋಡಿ!

    ಹಳೆ ಫೋನುಗಳಲ್ಲಿ ವಾಟ್ಸ್​ಆ್ಯಪ್​ ಸೇವೆ ಸ್ಥಗಿತಗೊಳಿಸುವುದು ಸಂಸ್ಥೆಯ ಹೊಸ ನಿರ್ಧಾರವೇನಲ್ಲ. ಈ ಹಿಂದೆಯೇ ಸಂಸ್ಥೆ ಈ ಬಗ್ಗೆ ಸೂಚನೆ ನೀಡಿತ್ತು. (ಏಜೆನ್ಸೀಸ್​)

    ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

    ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts