More

    ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಶೂಟರ್ ಶ್ರೇಯಸಿ ಸಿಂಗ್ ಈಗ ಶಾಸಕಿ!

    ಪಟನಾ: 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಜಯಿಸಿ ಗಮನಸೆಳೆದಿದ್ದ ಡಬಲ್ ಟ್ರ್ಯಾಪ್ ಶೂಟರ್ ಶ್ರೇಯಸಿ ಸಿಂಗ್ ಅವರು ಈಗ ಶಾಸಕಿಯಾಗಿದ್ದಾರೆ. ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಅವರು ಜಮುಯಿ ಕ್ಷೇತ್ರದ ಹಾಲಿ ಶಾಸಕ ವಿಜಯ್ ಪ್ರಕಾಶ್ ವಿರುದ್ಧ ಗೆದ್ದು, ರಾಜಕೀಯ ಪದಾರ್ಪಣೆಯ ಚುನಾವಣೆಯಲ್ಲೇ ಗೆಲುವು ದಾಖಲಿಸಿದ್ದಾರೆ.

    ರಾಜಕೀಯ ಕ್ಷೇತ್ರ 30 ವರ್ಷದ ಶ್ರೇಯಸಿ ಸಿಂಗ್ ಅವರಿಗೆ ಹೊಸದಾಗಿದ್ದರೂ, ಅವರ ಕುಟುಂಬಕ್ಕೆ ಇದು ಹೊಸದಲ್ಲ. ಅವರ ತಂದೆ ದಿಗ್ವಿಜಯ್ ಸಿಂಗ್ ಕೇಂದ್ರದ ಮಾಜಿ ಸಚಿವರು. ಅವರು ತಾಯಿ ಪುತುಲ್ ಕುಮಾರಿ ಕೂಡ ಮಾಜಿ ಸಂಸದೆ.

    ಬಿಹಾರ ಚುನಾವಣೆ ೋಷಣೆಯಾದ ಬೆನ್ನಲ್ಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಶ್ರೇಯಸಿ ಸಿಂಗ್ 41 ಸಾವಿರ ಮತಗಳ ಭಾರಿ ಅಂತರದಿಂದ ಜಯಿಸಿದ್ದಾರೆ. ರಾಜಕೀಯಕ್ಕೆ ಸೇರುವ ಆಲೋಚನೆ ಅವರಿಗೆ ಮೊದಲಿನಿಂದಲೂ ಇದ್ದರೂ, ಕರೊನಾ ಹಾವಳಿಯಿಂದ ದೇಶವೇ ಲಾಕ್‌ಡೌನ್ ಆದ ಸಮಯದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿದ್ದರು. ಈ ವೇಳೆ ಅವರು ಸ್ಥಳೀಯರೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಇದನ್ನು ಪರಿಹರಿಸಿಕೊಳ್ಳಲು ಅವರಿಗೆ ನೆರವಾಗುವ ಸಲುವಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು.

    ಅರ್ಜುನ ಪ್ರಶಸ್ತಿ ವಿಜೇತೆಯೂ ಆಗಿರುವ ಶ್ರೇಯಸಿ ಇದೀಗ ಶಾಸಕಿಯಾಗಿರುವುದರಿಂದ ಶೂಟಿಂಗ್ ಅಭ್ಯಾಸಕ್ಕೆ ಸಮಯದ ಅಭಾವ ಎದುರಿಸಲಿದ್ದಾರೆ. ಅಲ್ಲದೆ ಬಿಹಾರದಲ್ಲಿ ಯಾವುದೇ ಶೂಟ್‌ಗನ್ ರೇಂಜ್ ಇಲ್ಲ. ಹೀಗಾಗಿ ಅವರು ದೆಹಲಿಯಲ್ಲೇ ಶೂಟಿಂಗ್ ಅಭ್ಯಾಸ ನಡೆಸಬೇಕಾಗುತ್ತದೆ. ಶ್ರೇಯಸಿ 2014ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನೂ ಜಯಿಸಿದ್ದರು.

    ಅಮೆಜಾನ್ ಪ್ರೈಮ್‌ನಲ್ಲಿ ಇನ್ನು ಕ್ರಿಕೆಟ್ ನೇರಪ್ರಸಾರವನ್ನೂ ನೋಡಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts