More

    ಮೇ 12ರಿಂದ ರೈಲುಗಳ ಸಂಚಾರ ಪುನರಾರಂಭ, ದೆಹಲಿಯಿಂದ ಬೆಂಗಳೂರಿಗೆ ಬರಲಿದೆ ವಿಶೇಷ ರೈಲು

    ನವದೆಹಲಿ: ಪ್ರಯಾಣಿಕ ರೈಲುಗಳ ಸಂಚಾರ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಶೇಷ ರೈಲುಗಳ ಮೂಲಕ ಪ್ರಯಾಣಿಕ ರೈಲುಗಳ ಸೇವೆಯನ್ನು ಮತ್ತೆ ಆರಂಭಿಸಲು ಮುಂದಾಗಿದೆ.

    ಅದರಂತೆ, ಮಂಗಳವಾರದಿಂದ (ಮೇ 12) ಹಂತಹಂತವಾಗಿ ದೇಶ್ಯಾದ್ಯಂತ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆರಂಭಿಕ ಹಂತದಲ್ಲಿ ಕೇವಲ 15 ರೈಲುಗಳು ಸಂಚಾರ ನಡೆಸಲಿವೆ. ಈ ಪೈಕಿ ದೆಹಲಿಯಿಂದ ಬೆಂಗಳೂರಿಗೂ ಒಂದು ರೈಲು ಬರಲಿದೆ.

    ವಿಶೇಷ ರೈಲುಗಳ ಮೂಲಕ ಆಯಾ ರಾಜ್ಯಗಳ ರಾಜಧಾನಿಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಅಸ್ಸಾಂನ ದಿಬ್ರುಘರ್, ತ್ರಿಪುರಾದ ಅಗರ್ತಲಾ, ಕೋಲ್ಕತ್ತದ ಹೌರಾ, ಬಿಹಾರದ ಪಟನಾ, ಬಿಲಾಸ್ಪುರ್, ಜಾರ್ಖಂಡ್​ನ ರಾಂಚಿ, ಒಡಿಶಾದ ಭುವನೇಶ್ವರ್, ಸಿಕಂದರಾಬಾದ್, ಚೆನೈ, ತಿರುವನಂತಪುರ, ಮಡಗಾಂವ್, ಮುಂಬೈ ಸೆಂಟ್ರಲ್, ಅಹ್ಮದಾಬಾದ್ ಹಾಗೂ ಜಮ್ಮುವಿನ ತಾವಿಗೆ ​ಗಳಿಗೆ ಈ ವಿಶೇಷ ರೈಲುಗಳಲ್ಲಿ ಸಂಚರಿಸಬಹುದು.

    ಇದನ್ನೂ ಓದಿ; ಕೋವಿಡ್​ ಪರಿಹಾರ ನಿಧಿಗೆ ಒಂದು ಕೋಟಿ ರೂ. ನೀಡಿದ ಆದಿಚುಂಚನಗಿರಿ ಶ್ರೀಗಳು

    ಈ ರೈಲುಗಳಲ್ಲಿ ಸಂಚರಿಸಲು ಮೇ 11ರ ಸಂಜೆ 4 ಗಂಟೆಯಿಂದ ಟಿಕೆಟ್​ಗಳನ್ನು ಮುಂಗಡವಾಗಿ ಕಾದಿರಿಸಬಹುದು. ಕೇವಲ IRCTC ವೆಬ್​ಸೈಟ್ ಮೂಲಕ ಮಾತ್ರ ಬುಕ್ಕಿಂಗ್​ಗೆ ಅವಕಾಶ ಕಲ್ಪಿಸಲಾಗಿದೆ.

    ಆದರೆ, ರೈಲು ನಿಲ್ದಾಣಗಳ ಟಿಕೆಟ್ ಹಾಗೂ ರಿಸರ್ವೇಶನ್ ಕೌಂಟರ್​ಗಳು ಎಂದಿನಂತೆ ಮುಚ್ಚಿರಲಿವೆ. ಟಿಕೆಟ್ ಬುಕ್ಕಿಂಗ್ ಕನ್ಫರ್ಮ್ ಆಗಿದ್ದವರಿಗೆ ಮಾತ್ರ ಫ್ಲಾಟ್​ಫಾರ್ಮ್ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

    ಇದನ್ನೂ ಓದಿ; ಪ್ರತ್ಯೇಕತಾವಾದಿ ಬೆಂಬಲಿಗರಿಗೆ ಪ್ರಶಸ್ತಿ ನೀಡಿತಾ ಪುಲಿಟ್ಜರ್​; ಸಮಿತಿಗೆ ನೂರಾರು ಗಣ್ಯರಿಂದ ಪತ್ರ

    ಪ್ರಯಾಣಕ್ಕೂ ಮುನ್ನ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಜತೆಗೆ ಎಲ್ಲ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿದ ಬಳಿಕವೇ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

    ಹೊರ ರಾಜ್ಯ, ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕ್ವಾರಂಟೈನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts