More

    ಕೆಎಲ್‌ಇಯಿಂದ ಸಂಶೋಧನೆಗೆ ಒತ್ತು

    ಬೆಳಗಾವಿ: ನಗರದ ಕೆಎಲ್‌ಇ ಪಾರ್ಮಸಿ ಕಾಲೇಜ್‌ನಲ್ಲಿ ಎಐಸಿಟಿಇ ಆಶ್ರಯದಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡಿದ್ದ ಔಷಧೀಯ ಮಹಾವಿದ್ಯಾಲಯಗಳ ಬೋಧಕರ ಅಭಿವೃದ್ಧಿ ಕಾರ್ಯಕ್ರಮವನ್ನು ಕೆಎಲ್‌ಇ ಸ್ವಾಯತ್ತ ವಿವಿ ಪ್ರಾಧ್ಯಾಪಕ ಡಾ.ಗೋಡಬೋಲೆ ಮದನಮೋಹನ ಸೋಮವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ಪ್ರಾಯೋಗಿಕ ಔಷಧೀಯ ಶಾಸ್ತ್ರ ಮತ್ತು ಪ್ರಾಣಿಗಳನ್ನು ಒಳಗೊಂಡ ಪ್ರಯೋಗಗಳಿಗೆ ಪರ್ಯಾಯದ ಕುರಿತು ಬೆಳಕು ಚೆಲ್ಲಬೇಕು. ಪ್ರಯೋಗಗಳಿಗೆ ಪ್ರಾಣಿಗಳ ಬಳಕೆ ಕಡಿಮೆ ಮಾಡಲು ಪರ್ಯಾಯ ವ್ಯವಸ್ಥೆಗಳಿಗೆ ಒತ್ತು ನೀಡಬೇಕು ಎಂದರು.

    ಪ್ರಾಚಾರ್ಯ ಡಾ.ಸುನೀಲ ಜಲಾಲಪುರೆ ಮಾತನಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಹಲವು ಕಾಯಿಲೆಗಳಿಗೆ ಪರಿಣಾಮಕಾರಿ, ಸುರಕ್ಷಿತ ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ನಮ್ಮಲ್ಲಿ ಉನ್ನತಮಟ್ಟದ ಸಂಶೋಧನೆ ನಡೆಸಲಾಗುತ್ತಿದೆ ಎಂದರು. ಪಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ ಡಾ.ನಯೀಂ ಖತೀಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಉಪಪ್ರಾಚಾರ್ಯ ಡಾ. ಎಂ.ಡಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಚವ್ಹಾಣ ವಂದಿಸಿದರು. ದೇಶದ ವಿವಿಧ ರಾಜ್ಯಗಳ ಔಷಧೀಯ ಮಹಾವಿದ್ಯಾಲಯಗಳ 32 ಪ್ರಾಧ್ಯಾಪಕರು ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts