More

    ಸಹಕಾರಿಗಳಿಂದ ರೈತರಿಗೆ ಅನುಕೂಲ

    ನೇಸರಗಿ: ಸಹಕಾರಿ ಸಂಘಗಳು ರೈತರ ಜೀವನಾಡಿ ಎಂದು ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಹೇಳಿದರು.

    ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 34 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘದ ಮೂಲಕ ಪೆಟ್ರೋಲ್ ಪಂಪ್, ಔಷಧ ಅಂಗಡಿ ತೆರಯಲು ಬೈಲಾದಲ್ಲಿ ಅವಕಾಶವಿದ್ದು, ಇದರಿಂದ ಸಂಸ್ಥೆಗಳು ಬೆಳೆಯಲು ಅನುಕೂಲವಾಗುತ್ತದೆ ಎಂದರು.

    ಸಹಕಾರಿ ಸಂಘಗಳು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ರಿಯಾಯಿತಿ ದರದಲ್ಲಿ ಸೋಯಾಬೀನ್, ಕಡಲೆ, ಜೋಳದ ಬೀಜ ಹಾಗೂ ಟ್ರ್ಯಾಕ್ಟರ್ ಸಾಲ ವಿತರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ರೈತರಿಗೆ 1 ಲಕ್ಷ ರೂ.ವರೆಗೆ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

    ನೇಸರಗಿ-ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಮಾತನಾಡಿ, ಸಹಕಾರಿ ಸಂಘಗಳು ರೈತರ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಪಿಕೆಪಿಎಸ್ ಅಧ್ಯಕ್ಷ ರಾಜಶೇಖರ ಯತ್ತಿನಮನಿ ಅಧ್ಯಕ್ಷತೆ ವಹಿಸಿದ್ದರು. ಯುವ ಧುರೀಣ ನಾನಾಸಾಹೇಬ ಪಾಟೀಲ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಪ್ರಕಾಶ ಮೂಗಬಸವ, ಗ್ರಾಪಂ ಅಧ್ಯಕ್ಷ ನಿಂಗಪ್ಪ ಮಾಳಣ್ಣವರ, ಬಿಡಿಸಿಸಿ ಬ್ಯಾಂಕ್ ಉಪಪ್ರಧಾನ ವ್ಯವಸ್ಥಾಪಕ ಎನ್.ಜಿ.ಕಲಾವಂತ, ಡಿಸಿಸಿ ಬ್ಯಾಂಕ್ ನಿರೀಕ್ಷಕ ಸುರೇಶ ಮತ್ತಿಕೊಪ್ಪ, ಸಚಿನ ಪಾಟೀಲ, ಬಾಳಪ್ಪ ಮಾಳಗಿ, ರಮೇಶ ರಾಯಪ್ಪಗೋಳ, ಸೋಮನಗೌಡ ಪಾಟೀಲ, ಯಲ್ಲನಗೌಡ ದೊಡಗೌಡರ, ಬಾಳಾಸಾಹೇಬ ದೇಸಾಯಿ, ಐ.ಪಿ.ಯತ್ತಿನಮನಿ, ವಿಶ್ವನಾಥ ಕೂಲಿನವರ, ಶ್ರೀಕಾಂತ ತರಗಾರ, ನೇಸರಗಿ, ಸೋಮನಟ್ಟಿ ಗ್ರಾಮದ ಸದಸ್ಯರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts