More

  ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನುಕೂಲ

  ಕಂಪ್ಲಿ: ಡಾ.ಶಿವಕುಮಾರ ಸ್ವಾಮೀಜಿ ಸಾಧನೆ ಗುರುತಿಸಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಜೆಸಿಐ ಕಂಪ್ಲಿ ಸೋನಾ ಸಂಸ್ಥೆ ಅಧ್ಯಕ್ಷ ಸುಹಾಸ್ ಚಿತ್ರಗಾರ್ ಹೇಳಿದರು.

  ಇದನ್ನೂ ಓದಿ: ಮಾರ್ಚ್ 30ರಂದು ಯೇನೆಪೋಯ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ

  ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಸ್ಥೆ ಹಮ್ಮಿಕೊಂಡ ಡಾ.ಶಿವಕುಮಾರ ಸ್ವಾಮೀಜಿ 117ನೇ ಜಯಂತ್ಯುತ್ಸವ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

  ಡಾ.ಶಿವಕುಮಾರ ಸ್ವಾಮೀಜಿ ಶಿಕ್ಷಣ ಪ್ರೇಮಿಯಾಗಿದ್ದು, ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇವರ ತತ್ವ, ಆದರ್ಶಗಳು ಅನುಕರಣೀಯ ಎಂದರು. ರಕ್ತದಾನ ಶಿಬಿರದಲ್ಲಿ 20ಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹಿಸಲಾಯಿತು.

  ಜೆಸಿಐ ಅಂತಾರಾಷ್ಟ್ರೀಯ ಅಧಿಕಾರಿ ಸೆನೇಟರ್ ಅರವಿಂದ್ ಬುರೆಡ್ಡಿ, ಜೆಸಿಐ ವಲಯ 24ರ ಉಪಾಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ, ವೈದ್ಯಾಧಿಕಾರಿಗಳಾದ ರವೀಂದ್ರ ಕನಕೆರಿ, ಮಲ್ಲೇಶಪ್ಪ, ಭರತ್ ಪದ್ಮಶಾಲಿ, ಆರೋಗ್ಯ ನಿಕ್ಷಣಾಧಿಕಾರಿ ಚನ್ನಬಸವರಾಜ,

  ಪದಾಧಿಕಾರಿಗಳಾದ ಬಡಿಗೇರ್ ಜಿಲಾನ್ ಸಾಬ್, ಮಂಜೇಶ, ಇಂದ್ರಜಿತ್‌ಸಿಂಗ್, ಅಮೃತಾ ಸಂತೋಷ್, ಕೆ.ಸಿ.ಸಿದ್ದರಾಮೇಶ್ವರ, ಬಿ.ಎಚ್.ಎಂ.ಅಮರನಾಥಶಾಸ್ತ್ರಿ, ನಂಜುಂಡ, ಸಂತೋಷ, ಅಮರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts