More

    ಅರಣ್ಯ ಇಲಾಖೆ ಹಸ್ತಕ್ಷೇಪಕ್ಕೆ ವಿರೋಧ:ಅಭಿವೃದ್ಧಿಗೆ ಕೈಜೋಡಿಸುವಂತೆ ಟ್ರಸ್ಟ್ ಅಧ್ಯಕ್ಷ ಮನವಿ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ

    ಕೂಟಗಲ್ : ಅರಣ್ಯ ಇಲಾಖೆ ಅಧಿಕಾರಿಗಳು ಬೆಟ್ಟದ ತಿಮ್ಮಪ್ಪಸ್ವಾಮಿ ದೇವಾಲಯ ಟ್ರಸ್ಟ್ ವಿಷಯದಲ್ಲಿ ಹಸ್ತಕ್ಷೇಪ ಮಾಡದೆ, ಬೆಟ್ಟದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ದೇವರಾಜು, ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸೀತೆ ಸ್ನಾನ ಮಾಡಿದ ಚಕ್ರತೀರ್ಥ, ಕೋಳಕಲ್ಲು ಮತ್ತು ಇಲ್ಲಿರುವ ಗಳಗಲ್ಲು ಅತಿ ಎತ್ತರವಾದ ಏಕಶಿಲಾ ಕಲ್ಲಾಗಿದ್ದು ಪ್ರಸಿದ್ಧಿ ಆಗಿದೆ.

    ಯಾವುದೇ ಆದಾಯ ದೇವಾಲಯಕ್ಕೆ ಇಲ್ಲದ್ದನ್ನು ಮನಗಂಡು 2018-19ರಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡು ಅಭಿವೃದ್ಧಿ ಕೆಲಸ ವಾಡುವ ಜತೆಗೆ ಭಕ್ತರು ಹಾಗೂ ಚಾರಣಿಗರ ವಾಹನಗಳಿಂದ ಪಾರ್ಕಿಂಗ್ ಶುಲ್ಕ ಪಡೆಯುತ್ತಿದ್ದೇವೆ. ಪ್ರಮುಖವಾಗಿ ಇಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಪ್ಲಾಸ್ಟಿಕ್‌ಮುಕ್ತ ಪ್ರದೇಶವನ್ನಾಗಿಸಲು ಟ್ರಸ್ಟ್‌ನವರು ಶ್ರಮಿಸುತ್ತಿದ್ದೇವೆ ಎಂದರು.

    ಪಾರ್ಕಿಂಗ್ ಶುಲ್ಕದಿಂದ ಬಂದ ಹಣದಲ್ಲಿ ಅರ್ಚಕರಿಗೆ ಹಾಗೂ ಪೂಜಾ ಕಾರ್ಯಕ್ಕೆ ವಿನಿಯೋಗ ವಾಡುವ ಮೂಲಕ ಟ್ರಸ್ಟ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಅರಣ್ಯ ಇಲಾಖೆಯವರು ಈ ಬಗ್ಗೆ ಅನವಶ್ಯಕವಾಗಿ ಮೂಗು ತೂರಿಸಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಾ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ, ಟ್ರಸ್ಟ್ ಹಾಗೂ ಗ್ರಾಮಸ್ಥರಿಗೆ ತೊಂದರೆ ನೀಡುವ ಹುನ್ನಾರ ನಡೆಸುತ್ತಿದ್ದಾರೆ. ಈ ಸಮಸ್ಯೆ ಬರುತ್ತದೆ ಎಂದು ಈ ಹಿಂದೆಯೇ ಪ್ರವಾಸೋದ್ಯಮ ಸಚಿವರಿಗೆ ದೇವಾಲಯದ ಸುತ್ತ ಎರಡು ಎಕರೆ ಪ್ರದೇಶವನ್ನು ದೇವಾಲಯ ಸಮಿತಿಗೆ ಮಂಜೂರು ವಾಡುವಂತೆ ಮನವಿ ಸಹ ವಾಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಟ್ರಸ್ಟ್ ಜಂಟಿ ಕಾರ್ಯದರ್ಶಿ ಎಂ.ಮಹೇಶ್ ವಾತನಾಡಿ, ಕೂಟಗಲ್ ಕಿರು ಅರಣ್ಯ ಪ್ರದೇಶದಲ್ಲಿ ಕೆಲವರು ಅಕ್ರಮವಾಗಿ ಭೂಮಿ ಒತ್ತುವರಿ ವಾಡುತ್ತಿದ್ದಾರೆ. ಅರಣ್ಯದಂಚಿನಲ್ಲಿ ಯಾವುದೇ ಅಡೆತಡೆಯಿಲ್ಲದೆ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಗಮನಹರಿಸಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು ದೇವಾಲಯದ ಅಭಿವೃದ್ಧಿ ವಿಷಯದಲ್ಲಿ ಮೂಗು ತೂರಿಸುತ್ತ ತಕರಾರು ಮಾಡುತ್ತಿದ್ದಾರೆ. ಈ ವಿಷಯವಾಗಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಎ. ಮಂಜುನಾಥ್ ಗಮನ ಸೆಳೆಯಲಾಗಿದೆ ಎಂದರು.

     

    ಅರಣ್ಯ ಇಲಾಖೆಯವರಿಗೆ ತೊಂದರೆ ಕೊಟ್ಟಿಲ್ಲ. ನಾವು ಅಭಿವೃದ್ಧಿ ವಾಡಿರುವ ಸ್ಥಳದಲ್ಲಿ ಗಿಡಗಳನ್ನು ನೆಟ್ಟಿದ್ದಾರೆಯೇ ಹೊರತು ಬೇರೆ ಕಡೆ ಅಭಿವೃದ್ಧಿ ಮಾಡಿಲ್ಲ. ಕೂಡಲೇ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಟ್ರಸ್ಟ್ ಕಾರ್ಯದಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡದಂತೆ ಸೂಚಿಸಬೇಕು ಎಂದು ಮಹೇಶ್ ಆಗ್ರಹಿಸಿದರು.

    ಟ್ರಸ್ಟ್ ಕಾರ್ಯದರ್ಶಿ ಕೆ.ವಿ.ದೇವರಾಜು, ಖಜಾಂಚಿ ಕಾಂತರಾಜು, ಗೌರವಾಧ್ಯಕ್ಷ ಕೆ.ಪುಟ್ಟಸ್ವಾಮಿ, ಉಪಾಧ್ಯಕ್ಷ ಕೆ.ವಿ. ಅಶೋಕ್, ನಿರ್ದೇಶಕರಾದ ಸಿ. ಜಗದೀಶ್‌ಕುವಾರ್, ಎಂ. ಪರಮಶಿವಯ್ಯ, ಹನುಮರಾಜು, ಶಿವರಾಮು, ಶಿವಣ್ಣ, ಕೃಷ್ಣಪ್ಪ, ಸಿದ್ದರಾಜು, ಅರ್ಚಕರಾದ ನರಸಿಂಹಮೂರ್ತಿ, ದಿವಾಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts