More

    ಕೆರೆ ತುಂಬಿಸುವ ಯೋಜನೆ ಶೀಘ್ರ ಅನುಷ್ಠಾನ: ಅಧಿಕಾರಿಗಳಿಗೆ ಎಚ್‌ಡಿಕೆ ಸೂಚನೆ

    ಕೂಟಗಲ್: ಗ್ರಾಮೀಣ ಭಾಗದಲ್ಲಿ ಹಳ್ಳಗಳ ಮೂಲಕ ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸುವ ಸಂಬಂಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.

    ಚನ್ನಪಟ್ಟಣ ಕ್ಷೇತ್ರ ಪ್ರವಾಸ ಮುಗಿಸಿದ ನಂತರ ಕೂಟಗಲ್ ಹೋಬಳಿ ಕೂನಮುದ್ದನಹಳ್ಳಿ ಎತ್ತರಾಯಸ್ವಾಮಿ ಬೆಟ್ಟ ಮತ್ತು ಅರೇಹಳ್ಳಿ ಕೆರೆ ಹಾಗೂ ಪಾದರಹಳ್ಳಿ ಭಾಗಕ್ಕೆ ಹರಿಯುವ ಹಳ್ಳಗಳ ಸ್ಥಳ ಪರಿಶೀಲಿಸಿ, ಅನುಷ್ಠಾನ ಸಂಬಂಧ ಮುಖಂಡರಿಂದ ಮಾಹಿತಿ ಪಡೆದರು. ಆ ಸ್ಥಳದಲ್ಲೇ ಶೀಘ್ರವಾಗಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸುವಂತೆ ಕಾವೇರಿ ನೀರಾವರಿ ನಿಗಮದ ಎಇಇ ವೆಂಕಟೇಗೌಡ ಅವರಿಗೆ ಸೂಚಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಜಲಮೂಲ ಇಲ್ಲದೆ ಪಾದರಹಳ್ಳಿ, ಹೊಸದೊಡ್ಡಿ, ಬಿಳಗುಂಬ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರದ ಕೂನಮುದ್ದನಹಳ್ಳಿ, ಲಿಂಗೇಗೌಡನದೊಡ್ಡಿ ಅರೇಹಳ್ಳಿ ಗ್ರಾಮಗಳು ಸೇರಿ ಹಲವು ಹಳ್ಳಿಗಳ ಜನತೆ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಕಣ್ವದಿಂದ ಮಂಚನೆಬೆಲೆ ನೀರು ಸರಬರಾಜು ಕೊಳವೆ ಕಾಮಗಾರಿ ಈಗಾಗಲೇ ನಡೆಯುತ್ತಿದ್ದು, ಅದರಿಂದ ಎತ್ತರಾಯಸ್ವಾಮಿ ಬೆಟ್ಟವನ್ನು ಕೇಂದ್ರವಾಗಿರಿಸಿಕೊಂಡು ಎಲ್ಲ ಕೆರೆ ಮತ್ತು ಹಳ್ಳಗಳಿಗೆ ನೀರುಣಿಸಲು ಇನ್ನೆರಡು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

    ಚಿತ್ರನಟ ನಿಖಿಲ್ ಕುಮಾರಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಜೆಡಿಎಸ್ ಹಿಂದುಳಿದ ಘಟಕದ ರಾಜ್ಯಾಧ್ಯಕ್ಷ ಬಿ.ಉಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts