More

    ‘ಫ್ರೆಂಡ್ಸ್ ಇದ್ರೇನೇ ಜೀವನ …’ ಎನ್ನುತ್ತಿದ್ದಾರೆ ಯೋಗರಾಜ್ ಭಟ್!

    ಬೆಂಗಳೂರು: ಇತ್ತೀಚೆಗಷ್ಟೇ ಸ್ನೇಹಿತರ ದಿನ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಹಲವು ಹಾಡುಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ‘ಪದವಿಪೂರ್ವ’ ಚಿತ್ರದ ‘ಫ್ರೆಂಡ್ಸ್ ಇದ್ರೇನೇ ಜೀವನ …’ ಎಂಬ ಹಾಡು ಸಹ ಒಂದು. ಸ್ನೇಹದ ಮಹತ್ವ ಸಾರುವ ಈ ಹಾಡನ್ನು ಯೋಗರಾಜ್​ ಭಟ್​ ಬರೆದಿದ್ದು, ವಿಜಯ್​ ಪ್ರಕಾಶ್​ ಹಾಡಿದ್ದಾರೆ. ಇನ್ನು, ಅರ್ಜುನ್​ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ.

    ಇದನ್ನೂ ಓದಿ: ಅಳು ಬಂದಾಗ ಅಳಬೇಕು; ಸೋಲಿನ ಕುರಿತು ಕೃತಿ ಮಾತು

    ಈ ಕುರಿತು ಮಾತನಾಡುವ ಯೋಗರಾಜ್​ ಭಟ್​, ‘ತಂದೆ-ತಾಯಿ ಬಳಿ ಹೇಳಿಕೊಳ್ಳಲಾಗದ ಅನೇಕ ವಿಷಯಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತೇವೆ. ಹಾಗಾಗಿ, ನನ್ನ ಪ್ರಕಾರ ಸ್ನೇಹ ಸಂಬಂಧ ಎನ್ನುವುದು ಬಹಳ ದೊಡ್ಡದು. ಈ ಹಾಡನ್ನು ನನ್ನ ಎಲ್ಲಾ ಸ್ನೇಹಿತರಿಗೆ ಅರ್ಪಿಸುತ್ತೇನೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಕೇಳುವುದೆ ಖುಷಿ. ನಿರ್ದೇಶಕ ಹರಿಪ್ರಸಾದ್ ಸೇರಿದಂತೆ ನನ್ನ ಸಹೃದಯಿ ಸ್ನೇಹಿತರ ತಂಡ ಈ ಚಿತ್ರದಲ್ಲಿ ಭಾಗಿಯಾಗಿದೆ. ಎಲ್ಲರಿಗೂ ಶುಭವಾಗಲಿ’ ಎಂದು ಯೋಗರಾಜ್ ಭಟ್ ಹಾರೈಸಿದರು.

    ಈ ಚಿತ್ರವನ್ನು ಹರಿಪ್ರಸಾದ್​ ಜಯಣ್ಣ ನಿರ್ದೇಶನ ಮಾಡಿದ್ದಾರೆ. ‘ಯೋಗರಾಜ್ ಸಾರ್ ಬಳಿ ನಾನು ಕೆಲಸ ಮಾಡುತ್ತಿದ್ದಾಗ, ಅವರು ನನ್ನನ್ನು ಯಾರಿಗೂ ಅಸಿಸ್ಟೆಂಟ್​ ಎಂದು ಪರಿಚಯ ಮಾಡಿಕೊಡುತ್ತಿರಲಿಲ್ಲ. ನನ್ನನ್ನು ಗೆಳೆಯ ಎಂದೇ ಪರಿಚಯಿಸುತ್ತಿದ್ದರು. ಸ್ನೇಹದ ತಳಹದಿ ಮೇಲೆ, ಅನೇಕ ಸ್ನೇಹಿತರ ಪಾಲ್ಗೊಳ್ಳುವಿಕೆಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ’ ಎಂದರು.

    ಇನ್ನು, ‘ಪದವಿ ಪೂರ್ವ’ ಚಿತ್ರವು 1995-96ರ ಕಾಲಘಟ್ಟದಲ್ಲಿ ನಡೆಯುವ ಕಥೆಯಂತೆ. ‘ಸೋಶಿಯಲ್ ಮೀಡಿಯಾ ಬರುವುದಕ್ಕೆ ಮುಂಚಿನ ಸ್ನೇಹವನ್ನು ನಮ್ಮ ಚಿತ್ರದಲ್ಲಿ ನೋಡಬಹುದು. ಚಿತ್ರೀಕರಣ ಬಹುತೇಕ ಮುಗಿದಿದೆ. ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ’ ಎಂದರು ನಿರ್ದೇಶಕ ಹರಿಪ್ರಸಾದ್.

    ಇದನ್ನೂ ಓದಿ: ಧನಂಜಯ್ ನಿಜಕ್ಕೂ ನಟರಾಕ್ಷಸ!; ‘ಮಾನ್ಸೂನ್ ರಾಗ’ ಟ್ರೇಲರ್ ಲಾಂಚ್​ನಲ್ಲಿ ರಚಿತಾ ಮಾತು

    ಈ ಚಿತ್ರದ ಮೂಲಕ ಪೃಥ್ವಿ ಶಾಮನೂರು ನಾಯಕನಾಗಿ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ‘ನಾನು ಕಲಾವಿದನಾಗಬೇಕು, ಅದರಲ್ಲೂ ನಾಯಕನಾಗಬೇಕೆಂಬ ಕನಸು ಹೊತ್ತು ಬಂದವನು. ಮೊದಲ ಚಿತ್ರದಲ್ಲೇ ಇಂತಹ ಉತ್ತಮ ತಂಡ ಸಿಕ್ಕಿರುವುದು ನನ್ನ ಪುಣ್ಯ. ‘ಪದವಿ ಪೂರ್ವ’ದಲ್ಲಿ ಪಿ.ಯು.ಸಿ ಹುಡುಗನಾಗಿ ಕಾಣಿಸಿಕೊಂಡಿದ್ದೀನಿ’ ಎಂದರು ನಾಯಕ ಪೃಥ್ವಿ ಶಾಮನೂರು.

    ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್​ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಪೃಥ್ವಿಗೆ ನಾಯಕಿಯರಾಗಿ ಅಂಜಲಿ ಅನೀಶ್​ ಮತ್ತು ಯಶ ಶಿವಕುಮಾರ್​ ನಟಿಸುತ್ತಿದ್ದಾರೆ. ನಟರಾಜ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್​ ಜನ್ಯ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಕಡಿಮೆ ದರದಲ್ಲಿ ವಿಕ್ರಾಂತ್ ರೋಣ: ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡದಿಂದ ಹೊಸ ಪ್ರಯತ್ನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts