More

    ವಾರದ ಅಂತ್ಯದಲ್ಲಿ ಕಣಿವೆ ರಾಜ್ಯಕ್ಕೆ ಯುರೋಪಿಯನ್​ ರಾಷ್ಟ್ರಗಳ ರಾಜತಾಂತ್ರಿಕರ 2ನೇ ಸುತ್ತಿನ ಭೇಟಿ

    ನವದೆಹಲಿ: ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಅಂದಾಜು 20 ದೇಶಗಳ ರಾಜತಾಂತ್ರಿಕರ 2ನೇ ಗುಂಪು ಈ ವಾರದ ಅಂತ್ಯದ ವೇಳೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

    ರಾಜತಾಂತ್ರಿಕರ ದೊಡ್ಡ ತಂಡ ಎರಡನೇ ಸುತ್ತಿನಲ್ಲಿ ಕಾಶ್ಮೀರಕ್ಕೆ ಭೇಟಿ ನೀಡುತ್ತಿದೆ. ತಂಡದಲ್ಲಿ ವಿಶ್ವದ ದೊಡ್ಡ ಹಾಗೂ ಸಣ್ಣ ರಾಷ್ಟ್ರಗಳ ಪ್ರತಿನಿಧಿಗಳು ಇದ್ದಾರೆ. ಜನವರಿಯಲ್ಲಿ ಅಮೆರಿಕಾ ರಾಯಭಾರಿ ಕೆನ್ನೆತ್​ ಜಸ್ಟರ್​ ಸೇರಿದಂತೆ 15 ಮಂದಿ ರಾಯಬಾರಿಗಳ ತಂಡ 2 ದಿನಗಳ ಕಾಲ ಕಣಿವೆ ರಾಜ್ಯಕ್ಕೆ ಭೇಟಿ ನೀಡಿತ್ತು. ರಾಯಭಾರಿಗಳು ಶ್ರೀನಗರದಲ್ಲಿ ನಾಗರಿಕರು, ಸೈನಿಕರು ಹಾಗೂ ರಾಜಕಾರಣಿಗಳನ್ನು ಭೇಟಿ ಮಾಡಿದ್ದರು.

    ಕೇಂದ್ರ ಸರ್ಕಾರ ಆಗಸ್ಟ್​ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿತ್ತು. ಈ ವೇಳೆ ಇಂಟರ್​ನೆಟ್​ ಸೇರಿದಂತೆ ಎಲ್ಲ ಸಂಪರ್ಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು.

    ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ತಿಳಿಯಾಗಿದ್ದು, ಮತ್ತೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಂವಹನ ವ್ಯವಸ್ಥೆಯನ್ನು ಮರುಸ್ಥಾಪಿಸಿದೆ. ಕಣಿವೆ ರಾಜ್ಯಕ್ಕೆ ಭೇಟಿ ನೀಡುತ್ತಿರುವ ರಾಜತಾಂತ್ರಿಕರು ಅಲ್ಲಿನ ಜನಜೀವನ ಹಾಗೂ ಪರಿಸ್ಥಿತಿಯನ್ನು ಅರಿಯಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts