More

    ಫ್ರಾನ್ಸ್​ ಅಧ್ಯಕ್ಷರಿಗೇ ಕಪಾಳಮೋಕ್ಷ; ಕೈಮುಗಿಯುತ್ತ ಹತ್ತಿರ ಬಂದರೂ ಕೆನ್ನೆಗೆ ಬಾರಿಸಿದ!

    ನವದೆಹಲಿ: ದೇಶದಲ್ಲಿ ಅತ್ಯುನ್ನತ ಸ್ಥಾನಗಳಲ್ಲಿ ಇರುವವರನ್ನು ಹತ್ತಿರ ಹೋಗಿ ಮಾತನಾಡಿಸುವುದು ಅಷ್ಟೇನೂ ಸುಲಭವಲ್ಲ. ಆದರೆ ಇಲ್ಲೊಬ್ಬ ಹಾಗೆ ಹತ್ತಿರದಲ್ಲೇ ಸಿಕ್ಕ ಫ್ರಾನ್ಸ್ ಅಧ್ಯಕ್ಷರಿಗೇ ಕಪಾಳಮೋಕ್ಷ ಮಾಡಿದ್ದಾನೆ. ಕೈಮುಗಿಯುತ್ತ ಹತ್ತಿರ ಬಂದರೂ ಅವರ ಕೆನ್ನೆಗೆ ಬಾರಿಸಿದ್ದಾನೆ. ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್ ಇಂದು ಇದರಿಂದಾಗಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.

    ಮ್ಯಾಕ್ರಾನ್​ ಕೆನ್ನೆಗೆ ವ್ಯಕ್ತಿಯೊಬ್ಬ ಹೊಡೆದಿರುವ ವಿಡಿಯೋ ಹರಿದಾಡುತ್ತಿದ್ದು, ಅದು ನಿಜ ಎಂಬುದನ್ನು ಫ್ರಾನ್ಸ್ ಅಧ್ಯಕ್ಷರ ಕಾರ್ಯಾಲಯ ಸ್ಪಷ್ಟಪಡಿಸಿದೆ. ಆಗ್ನೇಯ ಫ್ರಾನ್ಸ್​ನ ಸಣ್ಣ ಪಟ್ಟಣವೊಂದರಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ಟೈನ್ ಐಹೆರ್ಮಿಟೇಜ್ ಎಂಬಲ್ಲಿ ವಿದ್ಯಾರ್ಥಿಗಳನ್ನು ಹೋಟೆಲ್​-ರೆಸ್ಟೋರೆಂಟ್​ಗಳಲ್ಲಿ ಕೆಲಸ ಮಾಡುವಂತೆ ತರಬೇತಿ ನೀಡುತ್ತಿದ್ದ ಹೈಸ್ಕೂಲ್​ಗೆ ಭೇಟಿ ನೀಡಿ, ಅಲ್ಲಿ ಬ್ಯಾರಿಕೇಡ್ ಆ ಕಡೆ ನಿಂತಿದ್ದ ಜನರ ಬಳಿಗೂ ತೆರಳಿ ವಿಷ್ ಮಾಡಲು ಕೈಮುಗಿಯುತ್ತ ಬಳಿಗೆ ಹೋಗಿದ್ದರು.

    ಇದನ್ನೂ ಓದಿ: ಹೆಂಡತಿಯನ್ನು ಇನ್ನೊಬ್ಬನ ಜತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಗಂಡ; ಇಬ್ಬರನ್ನೂ ಹೊರಕ್ಕೆಳೆದು ಕಂಬಕ್ಕೆ ಕಟ್ಟಿ ಥಳಿಸಿದ..

    ಈ ಸಂದರ್ಭದಲ್ಲಿ ಒಬ್ಬ ಶೇಕ್​ ಹ್ಯಾಂಡ್ ಮಾಡಲು ಮುಂದಾದ ಹಾಗೆ ಕಂಡರೂ, ಕೆಲವೇ ಕ್ಷಣಗಳಲ್ಲಿ ಅಲ್ಲಿನ ಸಂಪೂರ್ಣ ಬದಲಾಗಿದೆ. ಆ ವ್ಯಕ್ತಿ ಮ್ಯಾಕ್ರಾನ್​ ಅವರ ಕೆನ್ನೆಗೆ ಬಾರಿಸಿದ್ದಾನೆ. ಕೂಡಲೇ ಅವರ ಗನ್​ಮ್ಯಾನ್​ಗಳು ಅಲ್ಲಿಂದ ಅವರನ್ನು ಬಚಾವ್ ಮಾಡಿ ಕರೆದೊಯ್ದಿದ್ದಾರೆ. ಈ ಸಂಬಂಧ ಇಬ್ಬರನ್ನು ವಶ ಪಡಿಸಿಕೊಳ್ಳಲಾಗಿದೆ ಎಂದಾಗಿದ್ದರೂ ಇನ್ನೂ ಖಚಿತ ವಿವರ ಬಹಿರಂಗಗೊಳ್ಳಬೇಕಿದೆ. ಮ್ಯಾಕ್ರಾನ್ ತಮ್ಮ ಭೇಟಿಯನ್ನು ಮುಂದುವರಿಸಿದ್ದರೂ, ಈ ಘಟನೆ ಕುರಿತು ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಲಾಕ್‌ಡೌನ್ ವೇಳೆ ಜಪ್ತಿ ಮಾಡಿದ ವಾಹನಗಳ ಬಿಡುಗಡೆಗೆ ಹೈಕೋರ್ಟ್ ಆದೇಶ: ಠಾಣೆಯಲ್ಲೇ ದಂಡ ಕಟ್ಟಿದ್ರೆ ಸಾಕು..

    ‘ನಮ್ಮನೆಯವರೇ ಎಎಸ್​ಐ, ಫೋನ್ ಮಾಡ್ಲಾ?’ ಎಂದು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts