More

    ಇವುಗಳಲ್ಲಿ ಯಾವುದನ್ನಾದ್ರೂ ತೋರಿಸಿದ್ರೆ ನಾಳೆಯಿಂದ ಉಚಿತ ಊಟ-ತಿಂಡಿ!; ಮೇ 12ರಿಂದ 24ರವರೆಗೆ ಇಂದಿರಾ ಕ್ಯಾಂಟೀನ್ ಓಪನ್

    ಬೆಂಗಳೂರು: ಲಾಕ್​ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ, ಖರ್ಚಿಗೆ ಕಾಸೂ ಇಲ್ಲದೆ ಚಿಂತೆಯಲ್ಲಿರುವ ಬಡವರಿಗೆ ನಾಳೆಯಿಂದ ಉಚಿತವಾಗಿಯೇ ಊಟ ಸಿಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಊಟಕ್ಕೆ ವ್ಯವಸ್ಥೆ ಮಾಡಿರುವ ಸರ್ಕಾರ, ಇದೀಗ ರಾಜಧಾನಿಯಲ್ಲೂ ಈ ಸೇವೆ ನೀಡಲು ಮುಂದಾಗಲಿದೆ.

    ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತವಾಗಿ ಊಟ ನೀಡಲಾಗುವುದು ಎಂದು ಬೆಳಗ್ಗೆಯಷ್ಟೇ ಹೇಳಲಾಗಿತ್ತು. ಇದೀಗ ಆ ಸೇವೆ ಬೆಂಗಳೂರಿಗೂ ವಿಸ್ತರಣೆ ಆಗಿರುವ ಕುರಿತು ಆದೇಶ ಹೊರಬಿದ್ದಿದೆ. ನಾಳೆಯಿಂದ ಬೆಂಗಳೂರಿನಲ್ಲಿರುವ ಇಂದಿರಾ ಕ್ಯಾಂಟೀನ್​ಗಳಲ್ಲೂ ಉಚಿತವಾಗಿ ಊಟ-ತಿಂಡಿ ಸಿಗಲಿದೆ.

    ಇದನ್ನೂ ಓದಿ: ಲಾಕ್‌ಡೌನ್‌ ವಿಶೇಷ: ಇಂದಿರಾ ಕ್ಯಾಂಟೀನ್‌ನಲ್ಲಿ ಸರ್ಕಾರದಿಂದ ಫ್ರೀ ಉಪಾಹಾರ, ಊಟ 

    ಮೇ 12ರಿಂದ 24ರ ವರೆಗೂ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಉಚಿತವಾಗಿ ಲಭಿಸಲಿದೆ. ಅಗತ್ಯ ಇರುವವರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ನೀಡಿ ಆಹಾರದ ಪೊಟ್ಟಣ ಉಚಿತವಾಗಿ ಪಡೆಯಬಹುದು. ಈ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಅಗತ್ಯವಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

    ಗಾರೆ ಕೆಲಸಗಾರರೊಬ್ಬರ ಪ್ರಾಣ ತೆಗೆದ ‘ಲೇಡಿ-ಡಾಗ್’; ಜೀವಕ್ಕೇ ಕುತ್ತು ತಂತು ಕುತ್ತಿಗೆಗೆ ಕಚ್ಚಿದ ನಾಯಿ!

    ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts