More

    ಉತ್ತರಾಖಂಡದಲ್ಲೂ ಉಚಿತ ವಿದ್ಯುತ್ ಭರವಸೆ ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

    ಡೆಹ್ರಾಡೂನ್: ಉತ್ತರಾಖಂಡ್​ನ ಚುನಾವಣೆಗೆ ಹಲವು ತಿಂಗಳುಗಳು ಇರುವಾಗಲೇ ಎಎಪಿ ಪಕ್ಷ ಪ್ರಚಾರ ಆರಂಭಿಸಿದ್ದು, ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿದ್ದರು. ಒಂದು ವೇಳೆ ನಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದರೆ ಪೂರ್ತಿ ರಾಜ್ಯದ ಜನರಿಗೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

    ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಅರವಿಂದ ಕೇಜ್ರಿವಾಲ್ ಹಲವು ಭರವಸೆಗಳನ್ನು ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್​ನಂತಹ ದೊಡ್ಡ ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ವಿದ್ಯುತ್​ ಕೇಂದ್ರೀಕರಿಸಿಕೊಂಡು ಮಾತನಾಡಿದ ಅವರು, ನಾವು ಗೆದ್ದರೆ ರಾಜ್ಯದ ಜನರಿಗೆ ತಿಂಗಳಿಗೆ 300 ಯುನಿಟ್​ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಪವರ್ ಕಟ್ ಇರುವುದಿಲ್ಲ. ಹಿಂದಿನ ಮಸೂದೆಗಳನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.

    ಉತ್ತರಾಖಂಡದಲ್ಲಿ ಬರುವ 2022ರ ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಕೆಲ ಪಕ್ಷಗಳು ಅಲ್ಲಿ ಪ್ರಚಾರ ಆರಂಭಿಸಿವೆ. ಎಎಪಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾಡಿರುವ ಅಭಿವೃದ್ಧಿಯನ್ನೇ ಮತದಾರರ ಮುಂದೆ ಹೇಳಿಕೊಳ್ಳುತ್ತಾ, ರಾಜ್ಯದಲ್ಲಿ ಅಧಿಕಾರಕ್ಕೆ ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದೆ. (ಏಜೆನ್ಸೀಸ್)

    ಕಾರಲ್ಲಿ ಬರ್ತಾರೆ- ಹೊಂಡ ಮುಚ್ಚುತ್ತಾರೆ: ನಿದ್ದೆ ಮಾಡುತ್ತಿರೋ ಅಧಿಕಾರಿಗಳಿಗಾಗಿ 11 ವರ್ಷಗಳಿಂದ ಈ ಕಾರ್ಯ!

    ‘ವೆಲ್‌ಡನ್‌ ಹರ್ಲೀನ್​ ಡಿಯೋಲ್’​- ಪ್ರಧಾನಿಯ ಮನಗೆದ್ದ ಭಾರತೀಯ ಕುವರಿ ಹರ್ಲೀನ್​ ಡಿಯೋಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts