More

    ಅಲ್ಲಿ ವೋಟು ಹಾಕಿ, ಇಲ್ಲಿ ಊಟ ಮಾಡಿ; ಮತದಾರರಿಗೆ ಆಫರ್​ ಕೊಟ್ಟ ರೆಸ್ಟೋರೆಂಟ್​​ಗಳು

    ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಬಲ ಪಕ್ಷಗಳು ಪ್ರಚಾರದ ಮೂಲಕ ಮತಭೇಟೆಯನ್ನು ಶುರುಮಾಡಿದ್ದಾರೆ.  ರೆಸ್ಟೋರೆಂಟ್​​ಗಳು ಮತದಾರರಿಗೆ ಬಿಗ್ ಆಫರ್ ನೀಡುವ ಮೂಲಕವಾಗಿ ಸುದ್ದಿಯಾಗಿದೆ.

    ಲೋಕಸಭಾ ಚುನಾವಣೆ 2024 ರಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸುವ ಮತದಾರರು ರೆಸ್ಟೋರೆಂಟ್‌ಗಳಲ್ಲಿ 20% ರಿಯಾಯಿತಿ ಪಡೆಯಬಹುದು. ಹಾಗಿದ್ರೆ ಈ ಆಫರ್​ ಸಿಗುತ್ತಿರುವುದಾರು ಎಲ್ಲಿ? ಈ ಆಫರ್​ಗೆ ಚುನಾವಣಾ ಆಯೋಗವು ಒಪ್ಪಿಗೆ ನೀಡಿದ್ಯಾ? ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ….

    ಉತ್ತರಾಖಂಡ್‌ದಲ್ಲಿ 19 ರಂದು ಮತದಾನ ಪೂರ್ಣಗೊಂಡ ನಂತರ, ಉತ್ತರಾಖಂಡ್ ಹೋಟೆಲ್ ರೆಸ್ಟೋರೆಂಟ್ ಅಸೋಸಿಯೇಶನ್‌ನ ಭಾಗವಾಗಿರುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಿಲ್‌ಗಳಲ್ಲಿ ಶೇಕಡಾ 20ರಷ್ಟು ರಿಯಾಯಿತಿಯನ್ನು ಮತದಾರರು ಪಡೆಯುತ್ತಾರೆ. ಇದನ್ನು ಪಡೆಯಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರು ತಮ್ಮ ಹಕ್ಕು ಚಲಾಯಿಸಬೇಕಾಗುತ್ತದೆ. ರಿಯಾಯಿತಿಯನ್ನು ಪಡೆಯಲು, ಅವರು ತಮ್ಮ ಬೆರಳಿಗೆ ಅನ್ವಯಿಸಲಾದ ಚುನಾವಣಾ ಶಾಯಿಯನ್ನು ತೋರಿಸಬೇಕು. ಈ ಆಫರ್ ಏಪ್ರಿಲ್ 19 ರ ಸಂಜೆಯಿಂದ ಏಪ್ರಿಲ್ 20 ರವರೆಗೆ ಮಾನ್ಯವಾಗಿರುತ್ತದೆ.

    ಈ ಆಫರ್​ಗಳನ್ನು ಮತರಾದರಿಗೆ ನೀಡಲು ಚುನಾವಣಾ ಆಯೋಗವೂ ಒಪ್ಪಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ ಹೋಟೆಲ್ ರೆಸ್ಟೋರೆಂಟ್ ಅಸೋಸಿಯೇಶನ್‌ ಸಂಘ ಮತ್ತು ಚುನಾವಣಾ ಆಯೋಗ ತಿಳುವಳಿಕೆ ಪತ್ರಕ್ಕೆ (ಎಂಒಯು) ಪರಸ್ಪರ ಸಹಿ ಮಾಡಿಕೊಂಡಿವೆ. ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.

    ದಯವಿಟ್ಟು ಗಂಡ, ಹೆಂಡ್ತಿ ಒಟ್ಟಿಗೆ ಸ್ನಾನ ಮಾಡಿ; ನೀರು ಉಳಿಸಲು ಮೇಯರ್‌ ಕೊಟ್ರು ಈ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts