More

    ಐಒಸಿಎಲ್ ಸಹಾಯವಾಣಿ ಹೆಸರಿನಲ್ಲಿ 6.75 ಲಕ್ಷ ರೂಪಾಯಿ ದೋಚಿದ್ರು!

    ಬೆಂಗಳೂರು: ಅನಿಲ ಗ್ಯಾಸ್ ಏಜೆನ್ಸಿ ಪರವಾನಗಿ ಕೊಡುವುದಾಗಿ ವ್ಯಕ್ತಿಯೊಬ್ಬರಿಂದ 6.75 ಲಕ್ಷ ರೂ. ಪಡೆದು ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ. ರಾಜರಾಜೇಶ್ವರಿನಗರದ ಜೆ.ಪಿ. ವಿವೇಕ್ ವಂಚನೆಗೆ ಒಳಗಾದವರು. ಆರೋಪಿಗಳಾದ ಅಭಿಷೇಕ್ ಮತ್ತು ಖುರುನಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪಶ್ಚಿಮ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಅನಿಲ ಗ್ಯಾಸ್ ಏಜೆನ್ಸಿ ಪಡೆಯುವ ಸಲುವಾಗಿ ಗೂಗಲ್​ನಲ್ಲಿ ಸರ್ಚ್ ಮಾಡಿ ಇಂಡಿಯನ್ ಆಯಿಲ್ ಕಾಪೋರೇಷನ್ ಲಿ.(ಐಒಸಿಎಲ್) ಸಹಾಯವಾಣಿಗೆ ವಿವೇಕ್ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಅಭಿಷೇಕ್ ಎಂಬಾತ ಖುರುನಾ ಮೊಬೈಲ್ ನಂಬರ್ ಕೊಟ್ಟು ಅವರೊಂದಿಗೆ ಮಾತನಾಡಿ. ಅವರು ಗ್ಯಾಸ್ ಏಜೆನ್ಸಿ ಕೊಡಿಸುತ್ತಾರೆ ಎಂದು ಕರೆ ಕಟ್ ಮಾಡಿದ್ದಾರೆ.

    ಇದನ್ನೂ ಓದಿ: ನಾಳೆಗೂ ಇಂದೇ ದಂಡ ವಸೂಲಿ ಮಾಡುತ್ತಿರುವ ಕೊಪ್ಪ ಎಸ್​ಐ ಅಯ್ಯನಗೌಡ

    ಇದನ್ನೇ ನಂಬಿದ ವಿವೇಕ್, ಖುರುನಾ ವ್ಯಕ್ತಿ ಮೊಬೈಲ್​ಗೆ ಕರೆ ಮಾಡಿದಾಗ ಅರ್ಜಿ ಸಲ್ಲಿಸಲು ಶುಲ್ಕ ಪಾವತಿ ಮಾಡಬೇಕೆಂದು ಸಲಹೆ ನೀಡಿದ್ದಾನೆ. ಶುಲ್ಕ ಪಾವತಿ ಮಾಡಿದ ಮೇಲೆ ಠೇವಣಿ ಇಡಬೇಕು. ಹೀಗೆ ನಾನಾ ಕಾರಣ ಹೇಳಿ ಗೂಗಲ್ ಪೇ ಮತ್ತು ನೆಟ್ ಬ್ಯಾಂಕಿಂಗ್​ನಲ್ಲಿ ಹಂತ ಹಂತವಾಗಿ 6.75 ಲಕ್ಷ ರೂ. ಗಳನ್ನು ಹಂತ ಹಂತವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇಷ್ಟಾದ ಮೇಲೂ ಮತ್ತಷ್ಟು ಹಣ ಕೇಳಿದಾಗ ಅನುಮಾನ ಬಂದು ವಿವೇಕ್, ಪರವಾನಗಿ ಕೊಡಿ ಇಲ್ಲವಾದರೆ ಹಣ ವಾಪಸ್ ಕೊಡುವಂತೆ ಒತ್ತಾಯ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವಂಚನೆ ಆಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಡಿಗೆಗೂ ಸಿಗಲಿವೆ ಪಠ್ಯಪುಸ್ತಕಗಳು: ಇದು ಟೆಕ್ಕಿಗಳ ಬುಕ್ ರೂಟ್ ನವೋದ್ಯಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts