More

    ಪೆಟ್ರೋಲ್ ಬಂಕ್ ಪರವಾನಗಿ ಕೊಡಿಸುವುದಾಗಿ ಹೇಳಿ 55 ಲಕ್ಷ ರೂ. ಮೋಸ; ಮುಂಗಡ ಶುಲ್ಕ ಎಂದು ವಸೂಲಿ…

    ಬೆಂಗಳೂರು: ಪೆಟ್ರೋಲ್ ಬಂಕ್ ಪರವಾನಗಿ ಕೊಡಿಸುವುದಾಗಿ ನಂಬಿಸಿ ಅರ್ಜಿದಾರನ ಬಳಿ ಸೈಬರ್ ವಂಚಕರು ಬರೋಬ್ಬರಿ 55.43 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ಈ ಕುರಿತು ಜಯನಗರದ ನಿವೇದಿತಾ ಪಿ. ಕಬಾಡಿ ಎಂಬುವರು ದೂರು ನೀಡಿದ್ದಾರೆ. ಪೆಟ್ರೋಲ್ ಬಂಕ್ ತೆರೆಯುವ ಉದ್ದೇಶದಿಂದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರೈ.ಲಿ. ವೆಬ್‌ಸೈಟ್ ಹುಡುಕಿ ಅದರಲ್ಲಿದ್ದ ಇ-ಮೇಲ್ ಐಡಿಗೆ ಅರ್ಜಿಯನ್ನು ಭರ್ತಿ ಮಾಡಿ ಅಪ್‌ಲೋಡ್ ಮಾಡಿದ್ದರು.

    ಆ ನಂತರ ಕೆಲ ದಿನಗಳ ಬಳಿಕ ಅಪರಿಚಿತ ವ್ಯಕ್ತಿ, ದೂರುದಾರರಿಗೆ ಕರೆ ಮಾಡಿ ಪೆಟ್ರೋಲ್ ಬಂಕ್‌ಗೆ ಪರವಾನಗಿ ಕೊಡಿಸುತ್ತೇವೆ. ಅದಕ್ಕೆ ಶುಲ್ಕ ಪಾವತಿ ಮಾಡಬೇಕೆಂದು ಹೇಳಿದ್ದಾನೆ. ಅದಕ್ಕೆ ಒಪ್ಪಿದ ದೂರದಾರರಿಂದ ಆರಂಭದಲ್ಲಿ ಕಡಿಮೆ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

    ಅರ್ಜಿ ಸ್ವೀಕರಿಸಿ ಮುಂದಿನ ಹಂತಕ್ಕೆ ರವಾನೆ ಮಾಡಿರುವುದಾಗಿ ಹೇಳಿದ ವಂಚಕರು, ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 55.43 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ಮತ್ತೆ ಹಣಕ್ಕೆ ಬೇಡಿಕೆವೊಡ್ಡಿದ್ದಾರೆ. ಅನುಮಾನ ಬಂದು ಹಣ ವಾಪಸ್ ಕೇಳಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ದಿಕ್ಕು ತೋಚದ ದೂರುದಾರರು, ದಕ್ಷಿಣ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ನಿವೇದಿತಾ ನೀಡಿದ ಮಾಹಿತಿ ಆಧರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..

    ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts