More

    ಕೆಐಎಡಿಬಿ ಅಧಿಕಾರಿಗಳಿಂದ 85 ಲಕ್ಷ ರೂ. ವಂಚನೆ?; ನಕಲಿ ವಾರಸುದಾರರ ಸೃಷ್ಟಿಸಿ ಪರಿಹಾರ ಮಂಜೂರು ಆರೋಪ, ಕೇಸ್​

    ಬೆಂಗಳೂರು: ಆಸ್ತಿ ವಿಭಾಗ ಸಂಬಂಧ ವಾರಸುದಾರರು ಕೋರ್ಟ್ ಮೆಟ್ಟಿಲೇರಿದ್ದ ವೇಳೆ ನಕಲಿ ವ್ಯಕ್ತಿಗಳಿಗೆ 85 ಲಕ್ಷ ರೂ. ಭೂ ಪರಿಹಾರ ನೀಡಿದ ಆರೋಪದ ಮೇಲೆ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಸಂಬಂಧ ಹೆಸರುಘಟ್ಟ ನಿವಾಸಿ ಜಿ. ಗೀತಾ ಎಂಬಾಕೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂಡ, ವ್ಯವಸ್ಥಾಪಕ ಮೋಹನ್‌ಕುಮಾರ್ ಮತ್ತು ವಿಶೇಷ ನಿರ್ವಾಹಕ ರಿಷಿಕಾ ಎಂಬುವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: 17% ಹೆಚ್ಚಳದ ನಂತರ ಸರ್ಕಾರಿ ನೌಕರರ ವೇತನವೆಷ್ಟು? ಇಲ್ಲಿದೆ ವೇತನ ವ್ಯತ್ಯಾಸದ ಪಟ್ಟಿ…

    ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಓಬಳಾಪುರ ಗ್ರಾಮ ಮತ್ತು ಹಾದಿ ಹೊಸಹಳ್ಳಿ ಗ್ರಾಮದಲ್ಲಿ ಎರಡು ಸ್ವತ್ತನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ, ಇದರ ಮೂಲ ವಾರಸುದಾರರ ಮರಣಾನಂತರ ಅವರ ಮಕ್ಕಳಿಗೆ ಜಂಟಿ ಖಾತೆ ಆಗಿರುತ್ತದೆ.

    ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಆನಂತರ ಭಾಗಾಂಶ ಕೋರಿ ಹೆಣ್ಣು ಮಕ್ಕಳು ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ. ಕೆಐಎಡಿಬಿ ಭೂಮಿ ಸ್ವಾಧೀನ ಪಡಿಸಿಕೊಂಡು ಘೋಷಣೆ ಮಾಡಿರುವ 85 ಲಕ್ಷ ರೂ. ಮಕ್ಕಳಿಗೆ ಸೇರಬೇಕಾಗಿತ್ತು. ಆದರೆ, ಆರೋಪಿತ ಕೆಐಎಡಿಬಿ ಅಧಿಕಾರಿಗಳು, ಕೋರ್ಟ್ ವಿಚಾರಣೆಯಲ್ಲಿ ಇದ್ದಾಗಲೇ ಕಾನೂನು ಉಲ್ಲಂಘಿಸಿ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಅವರ ಹೆಸರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದರಿಂದ ವಾರಸುದಾರರಿಗೆ ಅನ್ಯಾಯ ಆಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೇಕಪ್​ನಿಂದಾಗಿ ಬಣ್ಣಗೆಟ್ಟಿತು ವಧುವಿನ ಮುಖ; ಮದುವೆಯೇ ಬೇಡ ಎಂದ ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts