More

    ಬೆಮೆಲ್​ನಿಂದ ಸ್ಥಳಿಯರಿಗೆ ವಂಚನೆ

    ಕೋಲಾರ: ಬೆಮೆಲ್​ನಲ್ಲಿ ಸ್ಥಳಿಯರಿಗೆ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಪರ ಸಂಟನೆಗಳು ಮತ್ತು ಬೆಮೆಲ್​ ಆಪರೇರ್ಟಸ್​ ಸಂದ ಸದಸ್ಯರು ಶಾಸಕ ರೂಪಕಲಾ ಅವರಿಗೆ ಇತ್ತೀಚಿಗೆ ಮನವಿ ಸಲ್ಲಿಸಿದರು.

    ಕನ್ನಡ ಶಕ್ತಿ ಕೇಂದ್ರದ ಜಿಲ್ಲಾಧ್ಯಕ್ಷ ಬಾ.ಹಾ. ಶೇಖರಪ್ಪ ಮಾತನಾಡಿ, ಬೆಮಲ್​ನಲ್ಲಿ ಸ್ಥಳಿಯರ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಸ್ಥಳಿಯರಿಗೆ ಕಾಯಂ ಉದ್ಯೋಗ ನೀಡದೆ ಅದೇ ಉತ್ತರ ಭಾರತದವರನ್ನು ನೇಮಕ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದು ಸರ್ಕಾರದ ಕನ್ನಡ ನೀತಿಗೆ ವಿರುದ್ಧವಾಗಿದೆ ಎಂದು ದೂರಿದರು.
    ಬಿಜಿಎಂಎಲ್​ ಕಾರ್ಮಿಕರಿಗೆ ಪರ್ಯಾಯವಾಗಿ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಬೆಮಲ್​ಗೆ 1870 ಎಕರೆ ಜಾಗ ನೀಡಲಾಗಿತ್ತು. ಬೆಮಲ್​ ಸ್ಥಾಪನೆಯಾದಾಗ ಎಲ್ಲ ಜಿಲ್ಲೆಗಳಿಗೂ ಹೋಗಿ ನೇಮಕಾತಿ ಮಾಡಿಕೊಳ್ಳಲಾಯಿತು. ಸ್ಥಳಿಯರಿಗೆ ಹೆಚ್ಚಿನ ಪ್ರಾಶಸ್ತ್ರ ನೀಡಲಾಯಿತು ಎಂದರು.
    ಈಗ ಬೆಮಲ್​ 5000 ಕೋಟಿ ಉತ್ಪಾದನಾ ಗುರಿ ಹೊಂದುವಷ್ಟು ಬೆಳವಣಿಗೆಯಾಗಿದೆ. ರೈಲ್ವೆ, ಡೋಜರ್​ ಮತ್ತು ರಕ್ಷಣಾ ವಲಯಕ್ಕೆ ಬೇಕಾದ ಯಂತ್ರೋಪಕರಣಗಳನ್ನು ತಯಾರು ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಿದೆ ಎಂದರು.
    ಅಪರೇಟರ್​ಗಳಾಗಿ ಸೇವೆ ಕೆಲಸ ಹೊರ ರಾಜ್ಯದವರಿಗೆ ಅವಕಾಶ ಮಾಡುತ್ತಿದ್ದಾರೆ. ಅವರ ಸೇವೆಗೆ ತಕ್ಕಂತೆ ಸ್ಥಳಿಯರಿಗೆ ಅವಕಾಶ ಸಂಬಳ ಹಾಗೂ ಸೌಲಭ್ಯಗಳನ್ನು ದೊರೆಯದೆ ಇರುವುದು ಡಾ.ಸರೋಜಿನಿ ಮಹಿಷಿ ವರದಿಗೆ ವ್ಯತಿರಿಕ್ತವಾಗಿದೆ ಎಂದು ಆರೋಪಿಸಿದರು.
    ಬೆಮಲ್​ ನೀಡುತ್ತಿರುವ 17,000 ಸಂಬಳದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ವರ್ಷದಿಂದ ವರ್ಷಕ್ಕೆ ನಿವೃತ್ತಿಯಾಗುವವರ ಸಂಖ್ಯೆ ಹೆಚ್ಚಾಗಿದೆ. ಆ ಸ್ಥಾನ ತುಂಬಲು ಕಾಂಟ್ರಾಕ್ಟ್​ ಅಪರೇಟರ್​ ಮೂಲಕ ಕಡಿಮೆ ಸಂಬಳದಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎಂದು ಹೇಳಿದರು.
    ಬೆಮಲ್​ನಲ್ಲಿ ಇಷ್ಟು ದಿನ ಇದ್ದ ದಕ್ಷಿಣ ಭಾರತೀಯ ತಿನಿಸು ಜತೆಗೆ ಉತ್ತರ ಭಾರತೀಯ ಊಟ ಈಗ ಸರಬರಾಜು ಮಾಡಲು ಆಡಳಿತ ವರ್ಗ ಸೂಚಿಸಿದೆ. ಉನ್ನತ ಸ್ಥಾನದಲ್ಲಿರುವ ಇಬ್ಬರು ಉತ್ತರ ಭಾರತ ಮೂಲದ ಅಧಿಕಾರಿಗಳು ನೇಮಕಾತಿಯಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ತಾವು ಧ್ವನಿ ಎತ್ತುವ ಮೂಲಕ ಸ್ಥಳಿಯರಿಗೆ ಅವಕಾಶ ಕಲ್ಪಿಸಲು ಕ್ರಮವಹಿಸಬೇಕು ಎಂದು ಕೋರಿದರು.
    ಕನ್ನಡ ಶಕ್ತಿ ಕೇಂದ್ರದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಜೆ.ಗೋಣಿ, ನಗರಸಭೆ ಸದಸ್ಯ ಮಾಣಿಕ್ಕಂ, ಕಾಂಟ್ರಾಕ್ಟ್​ ಅಪರೇಟರ್​ ಸಂಘಟನೆ ಅಧ್ಯಕ್ಷ ರಾಜಶೇಖರ್​, ಪದಾಧಿಕಾರಿಗಳಾದ ಗಣೇಶ್​, ಕಣ್ಣನ್​, ಸೋಮು, ಅಗಸ್ಟಿಯನ್​, ಕಾಂತರೂಬನ್​ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts