More

    ತೀರ್ಥಹಳ್ಳಿಯಲ್ಲಿ ನಾಲ್ವರಿಗೆ ಮಂಗನ ಕಾಯಿಲೆ

    ತೀರ್ಥಹಳ್ಳಿ: ತಾಲೂಕಿನಲ್ಲಿ ಓರ್ವ ಬಾಲಕ ಸೇರಿದಂತೆ ನಾಲ್ವರಿಗೆ ಮಂಗನ ಕಾಯಿಲೆ ಸೋಂಕು (ಕೆಎಫ್‌ಡಿ) ತಗುಲಿರುವುದು ದೃಢಪಟ್ಟಿದೆ. ಅವರೆಲ್ಲರೂ ಇಲ್ಲಿನ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ 13 ವರ್ಷದ ಬಾಲಕ ಮತ್ತು 34 ವರ್ಷದ ಯುವಕ ಸೇರಿ ಇಬ್ಬರು ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದವರು. ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ನರಳುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಹೊದಲ ಗ್ರಾಮದ 74 ವರ್ಷದ ವ್ಯಕ್ತಿ ಸಹ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗಣೇಶ್ ಭಟ್ ತಿಳಿಸಿದ್ದಾರೆ.
    ಕೆಎಫ್‌ಡಿ ಸೋಂಕು ತಗುಲಿದ್ದು ಗುಣಮುಖರಾಗಿ ಮನೆಗೆ ಮರಳಿದ್ದ ಮೇಗರವಳ್ಳಿಯ ರೋಗಿಯೊಬ್ಬರು ಜ್ವರ ಮರುಕಳಿಸಿರುವ ಕಾರಣ ಪುನಃ ಜೆಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿರುವ ಈ ವ್ಯಕ್ತಿ ಆರೋಗ್ಯದ ಬೇರೆ ಸಮಸ್ಯೆಗಳನ್ನೂ ಹೊಂದಿದ್ದಾರೆ ಎನ್ನಲಾಗಿದೆ.
    ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುವ ಆತಂಕವಿದೆ. ಹೀಗಾಗಿ ಈ ಮೊದಲು ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಭಾಗದಲ್ಲಿ ಸೋಂಕು ಬಾಧಿಸುವ ಸಾಧ್ಯತೆ ಹೆಚ್ಚು. ಕಾಡಿನ ಆಸುಪಾಸಿನಲ್ಲಿ ವಾಸಿಸುವವರು ಮತ್ತು ತೋಟಗಳಲ್ಲಿ ಕೆಲಸ ಮಾಡುವವರು ಈ ಬಗ್ಗೆ ಜಾಗೃತರಾಗಿರುವಂತೆ ತಾಲೂಕು ವೈದ್ಯಾಧಿಕಾರಿ ಡಾ. ನಟರಾಜ್ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts