More

    ಪಿಡಿಒಗೆ ಡ್ರಾಪ್​ ಕೊಡೋದಾಗಿ ಕರೆದು ಬೆಳ್ಳಂಬೆಳಗ್ಗೆ ಹೀಗಾ ಮಾಡೋದು..?

    ನೆಲಮಂಗಲ: ಡ್ರಾಪ್​ ಕೊಡುವ ನೆಪದಲ್ಲಿ ಸುಲಿಗೆ, ಲೈಂಗಿಕ ದೌರ್ಜನ್ಯ ಎಸಗುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಪರಿಚಿತರ ಬಗ್ಗೆ ಎಚ್ಚರ ವಹಿಸಿ ಎಂದು ಎಷ್ಟೇ ಜಾಗ್ರತೆ ಮೂಡಿಸುತ್ತಿದ್ದರೂ ಕೆಲವರು ತಿಳಿದೋ ತಿಳಿದೆಯೋ ವಂಚಕರ ಜಾಲಕ್ಕೆ ಸಿಕ್ಕಿಹಾಕಿಕೊಂಡು ನಷ್ಟ ಅನುಭವಿಸುತ್ತಾರೆ. ಇಲ್ಲಿ ವಿದ್ಯಾವಂತರೂ ಹೊರತಾಗಿಲ್ಲ! ಎಂಬುದಕ್ಕೊಂದು ತಾಜಾ ಪ್ರಕರಣ ಇಲ್ಲಿದೆ.

    ಇದನ್ನೂ ಓದಿರಿ ಮಟಮಟ ಮಧ್ಯಾಹ್ನ ಅಲ್ಲೇನಾಯ್ತು? … ಮುಗಿಲು ಮುಟ್ಟಿದೆ ಬಡ ಕುಟುಂಬಗಳ ಆಕ್ರಂದನ

    ನಿನ್ನೆ ಬೆಳಗ್ಗೆ (ಸೋಮವಾರ) ನೆಲಮಂಗಲದ ಕುಣಿಗಲ್​ ವೃತ್ತ ಬಳಿ ಬಸ್​ಗಾಗಿ ಕಾಯುತ್ತ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಗ್ರಾಪಂ ಪಿಡಿಒ ಹರೀಶ್ ನಿಂತಿದ್ದರು. ಅಲ್ಲಿಗೆ ಸ್ಕಾಫಿರ್ಯೋ ಕಾರಿನಲ್ಲಿ ಬಂದ ನಾಲ್ವರು, ತಾವು ಚನ್ನರಾಯಪಟ್ಟಣಕ್ಕೆ ಹೊರಟಿದ್ದೇವೆ. ನಿಮಗೂ ಡ್ರಾಪ್​ ಕೊಡುತ್ತೇವೆ ಬನ್ನಿ ಎಂದು ಪುಸಲಾಯಿಸಿ ಪಿಡಿಒ ಅವರನ್ನು ಕಾರಿಗೆ ಹತ್ತಿಸಿಕೊಂಡು ಹೋದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಮಾರಕಾಸ್ತ್ರ ಹೊರತೆಗೆದ ದುಷ್ಕರ್ಮಿಗಳು ಪಿಡಿಒಗೆ ಏನು ಮಾಡಿದ್ರು ಗೊತ್ತಾ?

    ಇದನ್ನೂ ಓದಿರಿ ಸೆಸ್ಕ್ ಸಿಬ್ಬಂದಿ ಹೀಗಾ ಮಾಡೋದು? ಕೆಲಸ ಮಾಡುವಲ್ಲೇ ಆತ ಹೆಣವಾದ…

    ಚನ್ನರಾಯಪಟ್ಟಣದ ನುಗ್ಗೇಹಳ್ಳಿಗೆ ಹೋಗುವ ತವಕದಲ್ಲಿ ಅಪರಿಚಿತರ ಕಾರು ಹತ್ತಿದ ಬೆಂಗಳೂರು ದೊಡ್ಡಬಿದರಕಲ್ಲು ಸಮೀಪದ ಅಂದ್ರಹಳ್ಳಿ ನಿವಾಸಿ ಹರೀಶ್​ಗೆ ಮಾರ್ಗ ಮಧ್ಯೆ ಕಂಟಕ ಎದುರಾಯ್ತು. ನೆಲಮಂಗಲದ ಕುಣಿಗಲ್​ ವೃತ್ತದ ಬಳಿ ಕಾರು ಹತ್ತಿಸಿಕೊಂಡ ದುಷ್ಕರ್ಮಿಗಳು ಯಂಟಗಾನಹಳ್ಳಿ ಟೋಲ್​ ಬಳಿ ತಮ್ಮ ವರಸೆ ಬದಲಿಸಿದರು. ಚಾಕು ಹಿಡಿದು ಪಿಡಿಒ ಜೇಬಿನಲ್ಲಿದ್ದ 2 ಸಾವಿರ ರೂ. ನಗದು, ಡೆಬಿಟ್​, ಕ್ರೆಡಿಟ್​ ಕಾರ್ಡ್​, ಲ್ಯಾಪ್​ಟ್ಯಾಪ್​ ಕಸಿದುಕೊಂಡರು.

    ಮಾಗಡಿ ತಾಲೂಕು ಕುದೂರು ಭಾಗದಲ್ಲಿ ಸಂಚರಿಸಿ ನಂತರ ದಾಬಸ್​ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಪಿಡಿಒ ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ. ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿರಿ  ಇಲ್ನೋಡಿ, ಒಂದೇ ಕುಟುಂಬದ 15 ಜನರಿಗೂ ವಕ್ಕರಿಸಿದೆ ಕರೊನಾ ಹೆಮ್ಮಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts