More

    ಗಗನಸಖಿಯ ಹತ್ಯೆ ಮಾಡಲು ಹೋಗಿ ಒಟ್ಟು ನಾಲ್ವರ ಕೊಂದ; ಕೊಲೆಗಿದ್ದ ಆ ಮೂರು ಉದ್ದೇಶಗಳು ಯಾವುವು?

    ಉಡುಪಿ: ಜಿಲ್ಲೆಯ ನೇಜಾರುವಿನಲ್ಲಿ ಭಾನುವಾರ ನಡೆದಿದ್ದ ಮಹಿಳೆ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಎಂಬಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಬುಧವಾರ ಸಾಯಂಕಾಲ ಉಡುಪಿಯ ಒಂದನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

    ಪ್ರವೀಣ್ ಅರುಣ್ ಚೌಗಲೆ(39) ಬಂಧಿತ. ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಧೀಶ ಶ್ಯಾಮ್​ಪ್ರಕಾಶ್​ ಅವರ ಮುಂದೆ ಆತನನ್ನು ಹಾಜರುಪಡಿಸಲಾಯಿತು. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ವಿಚಾರಣೆಗಾಗಿ ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಆರೋಪಿ ಪರ ವಕೀಲರು ಹಾಜರಿಲ್ಲದ ಕಾರಣ ಕಾನೂನು ಸೇವಾ ಪ್ರಾಧಿಕಾರದಿಂದ ರಾಜು ಪೂಜಾರಿ ಅವರನ್ನು ನಿಯೋಜಿಸಲಾಗಿತ್ತು.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಬಿಗಿ ಬಂದೋಬಸ್ತ್: ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನ್ಯಾಯಾಲಯ ಸುತ್ತಮುತ್ತ ನೂರಾರು ಜನ ಸೇರಿದ್ದರು. ಮುಂಜಾಗ್ರತಾ ಕ್ರಮವಾಗಿ 25 ಎಎಸ್​ಐ, ಐವರು ಪಿಎಸ್​ಐ, ಮೂವರು ಇನ್​ಸ್ಪೆಕ್ಟರ್​ಗಳು, ಆರು ಮಂದಿ ಡಿಆರ್ ಸಿಬ್ಬಂದಿ, 150 ಕಾನ್​ಸ್ಟೆಬಲ್​ಗಳು, ಮೂರು ಕೆಎಸ್​ಆರ್​ಪಿ, ಮೂವರು ಡಿವೈಎಸ್ಪಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

    ಘಟನೆ ಹಿನ್ನೆಲೆ

    ನ.12ರಂದು ಬೆಳಗ್ಗೆ ರಿಕ್ಷಾದಲ್ಲಿ ಆಗಮಿಸಿದ್ದ ಆಗಂತುಕ ನೇಜಾರಿನ ತೖಪ್ತಿ ಲೇಔಟ್​ನಲ್ಲಿ ಹಸೀನಾ (48), ಮಕ್ಕಳಾದ ಅಫ್ನಾನ್ (23), ಅಯ್ನಾಝ್​ (20) ಮತ್ತು ಅಸೀಮ್ (14) ಎಂಬುವವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಚೂರಿ ಇರಿತಕ್ಕೊಳಗಾಗಿ ಸಾವಿಗೀಡಾದ ಹಸೀನಾ ಅವರ ಅತ್ತೆ ಹಾಜಿರಾ ಹಂತಕನಿಂದ ತಪ್ಪಿಸಿಕೊಂಡು ಶೌಚಗೃಹದಲ್ಲಿ ಅವಿತು ಜೀವ ಉಳಿಸಿಕೊಂಡಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ಟೆಕ್ನಿಕಲ್ ಮತ್ತು ಹ್ಯೂಮನ್ ಇಂಟೆಲಿಜೆನ್ಸ್ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

    ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರೂ

    ಪ್ರವೀಣ್ ಅರುಣ್ ಚೌಗಲೆ ಮಹಾರಾಷ್ಟ್ರದ ಪುಣೆಯಲ್ಲಿ ಮೂರು ತಿಂಗಳು ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಸಿಐಎಸ್​ಎಫ್ ಹಾಗೂ ಸಿಆರ್​ಪಿಎಫ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ. ಬಳಿಕ ಈತ ಮಂಗಳೂರಿನ ಏರ್ ಇಂಡಿಯಾ ಕಂಪನಿಯಲ್ಲಿ ಕ್ಯಾಬಿನ್ ಕ್ರೂ ಆಗಿ ಆಯ್ಕೆಯಾಗಿದ್ದರಿಂದ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿದ್ದ ಎನ್ನಲಾಗಿದೆ. ಮಂಗಳೂರಿನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಸೇರಿದ್ದ ಅಫ್ನಾನ್​ಳ ಪರಿಚಯವಾಗಿತ್ತು. ಕೆಲವು ತಿಂಗಳ ಹಿಂದೆ ಈಕೆಯ ಹುಟ್ಟುಹಬ್ಬದ ದಿನವೂ ನೇಜಾರಿನ ಮನೆಗೂ ಬಂದಿದ್ದ ಎಂಬ ಮಾಹಿತಿ ಲಭಿಸಿದೆ.

    ಇದನ್ನೂ ಓದಿ: ವಿರಾಟ್ ಕೊಹ್ಲಿಯ ರೆಕಾರ್ಡ್ ಬ್ರೇಕಿಂಗ್​ ಆಟಕ್ಕೆ ಮೆಚ್ಚುಗೆಯ ಮಹಾಪೂರ; ಯಾರ್ಯಾರು, ಏನಂದ್ರು?

    ಸ್ಥಿತಿವಂತನಿಗೆ ಕೆಟ್ಟ ಕಾಲ: ಮಹಾರಾಷ್ಟ್ರದ ಸಾಂಗ್ಲಿ ಮೂಲದ ಆರೋಪಿ ಪ್ರವೀಣ್ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾನೆ. ವಿಮಾನಯಾನ ಸಂಸ್ಥೆಯಲ್ಲಿ ಉತ್ತಮ ಹುದ್ದೆಯಲ್ಲಿದ್ದು, ಸ್ಥಿತಿವಂತನಾಗಿದ್ದ. ವಿವಾಹಿತನಾಗಿರುವ ಆರೋಪಿಗೆ ಒಂದು ಮಗೂ ಕೂಡ ಇದೆ.

    ಸಾಕ್ಷಿ ನಾಶಕ್ಕಾಗಿ ಸರಣಿ ಕೊಲೆ

    ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದಿರುವ ಆರೋಪಿ ಪ್ರವೀಣ್ ಅರುಣ್ ಚೌಗಲೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂತ್ರಿಕ ಹಾಗೂ ಇತರ ಸಾಕ್ಷ್ಯಾಧಾರಗಳಿಂದ ಈತನೇ ಕೊಲೆ ಮಾಡಿರುವುದು ದೃಢಪಟ್ಟಿದೆ. ಕೖತ್ಯಕ್ಕೆ ಬಳಸಿದ ಆಯುಧವನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಾಗಿದೆ ಎಂದರು.

    ಗಗನಸಖಿಯ ಮೇಲಿನ ದ್ವೇಷದಲ್ಲಿ ಈ ಕೊಲೆ ಮಾಡಿದ್ದಾನೆ. ತಡೆಯಲು ಬಂದ ತಾಯಿ ಹಾಗೂ ಇಬ್ಬರನ್ನು ಸಾಕ್ಷಿ ನಾಶಕ್ಕಾಗಿ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಗೆಯನ್ನೂ ನೀಡಿದ್ದಾನೆ. ಕೊಲೆಗೆ ಮೂರು ಉದ್ದೇಶಗಳಿದ್ದವು ಎಂದು ಆತ ತಿಳಿಸಿದ್ದು, ಅದನ್ನು ಪರಿಶೀಲಿಸಿ ದೃಢಪಡಿಸಲಾಗುವುದು ಎಂದು ಅವರು ಹೇಳಿದರು.

    ‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts